ಕೋಳಿ, ಕುರಿ, ಮೀನನ್ನು ಸೋಮವಾರ, ಗುರುವಾರ ಮತ್ತು ಶನಿವಾರಗಳಂದು ಸೇವಿಸುವುದಿಲ್ಲ ಯಾಕೆ…?

0
162

ಕೆಲವು ವಿಶಿಷ್ಟ ದಿನಗಳಲ್ಲಿ ಹಿಂದೂ ಧರ್ಮೀಯರು ಸಾಮಾನ್ಯ ಮಾಂಸಾಹಾರಗಳಾದ ಕೋಳಿ, ಕುರಿ, ಮೀನು ಅಥವಾ ಮೊಟ್ಟೆಯನ್ನು ಸೇವಿಸುವುದಿಲ್ಲ. ಇವುಗಳಲ್ಲಿ ವಿಶೇಷವಾಗಿ ಮಂಗಳವಾರ, ಗುರುವಾರ ಮತ್ತು ಶನಿವಾರಗಳು ಪ್ರಮುಖವಾಗಿವೆ ಹಾಗೂ ವರ್ಷದ ಕೆಲವು ಪವಿತ್ರ ದಿನಗಳಾದ ಏಕಾದಶಿ, ಸಂಕ್ರಾಂತಿ, ದಸರಾ, ಸಂಕಷ್ಟಿ ಚತುರ್ಥಿ, ಅಂಗಾರಕಿ ಚತುರ್ಥಿ, ಗುಡಿಪಾಡ್ವಾ, ಅಕ್ಷಯ ತೃತೀಯ ಹಾಗೂ ದೀಪಾವಳಿಯ ಎಲ್ಲಾ ದಿನಗಳು ಮಾಂಸಾಹಾರ ಸೇವನೆರಹಿತ ದಿನಗಳಾಗಿವೆ. ವಾರದ ದಿನಗಳನ್ನು ಹೊರತುಪಡಿಸಿ ಈ ವಿಶಿಷ್ಟ ದಿನಗಳಲ್ಲಿ ಮಾಂಸಾಹಾರ ಸೇವಿಸದೇ ಇರಲು ಅಪ್ಪಟ ಧಾರ್ಮಿಕ ಕಾರಣಗಳಿವೆ.

ಹಿಂದೂ ಧರ್ಮದಲ್ಲಿ ಪ್ರಾಣಿಗಳನ್ನು ಕೊಲ್ಲುವುದು ಪಾಪ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಕನಿಷ್ಟ ಈ ದಿನಗಳಲ್ಲಾದರೂ ಮಾಂಸಾಹಾರ ಸೇವಿಸದೇ ಪ್ರಾಣಿವಧೆಯನ್ನು ನಡೆಸದಿರಲು ಹಾಗೂ ಈ ದಿನದ ಪಾವಿತ್ರ್ಯತೆಯನ್ನು ಕಾಪಾಡಲು ಯತ್ನಿಸುತ್ತಾರೆ.

ಸೋಮವಾರ, ಗುರುವಾರ ಮತ್ತು ಶನಿವಾರಗಳಂದು ಮಾಂಸಾಹಾರ ಸೇವಿಸದೇ ಇರಲು ಕಾರಣವೇನೆಂದರೆ ಮಾನವಾದ ನಾವು ಮಿಶ್ರಾಹಾರಿಗಳಾಗಿದ್ದು ನಮಗೆ ಸಸ್ಯಾಹಾರವೂ ಮಾಂಸಾಹಾರವೂ ಮಿಶ್ರರೂಪದಲ್ಲಿ ಬೇಕೇ ಹೊರತು ವಾರದ ಎಲ್ಲಾ ದಿನ ಮಾಂಸಾಹಾರದ ಅಗತ್ಯವೇ ಇಲ್ಲ. ಅಲ್ಪ ಪ್ರಮಾಣದ ಮಾಂಸಾಹಾರದಿಂದಲೂ ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದ, ಸಸ್ಯಜನ್ಯ ಆಹಾರಗಳಿಂದ ಸಿಗದ ಪೋಷಕಾಂಶಗಳು, ವಿಶೇಷವಾಗಿ ಕಬ್ಬಿಣ ಮತ್ತು ವಿಟಮಿನ್ ಬಿ12 ಗಳು ಲಭಿಸುತ್ತವೆ.

ಇದೇ ಕಾರಣದಿಂದ ಮಾನವರು ಪರಿಪೂರ್ಣ ಮಾಂಸಾಹಾರಿಗಳಾಗುವ ಅವಶ್ಯಕತೆ ಇಲ್ಲ. ಹಾಗಾಗಿ ವಾರದ ಎಲ್ಲಾ ದಿನ ಮಾಂಸಾಹಾರ ಸೇವಿಸಿದರೆ ಈ ಆಹಾರಕ್ರಮವನ್ನು ನಮ್ಮ ದೇಹ ವ್ಯಸನವನ್ನಾಗಿ ಪರಿಗಣಿಸುತ್ತದೆ. ಹಾಗಾಗಿ ಎಲ್ಲಾ ದಿನ ಮಾಂಸಾಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಅತಿಯಾದ ಮಾಂಸಾಹಾರದಿಂದ ಈ ಎಲ್ಲಾ ಸಮಸ್ಯೆ ಕಾಡಬಹುದು ಅತಿಯಾದ ಮಾಂಸಾಹಾರದಿಂದ ಮೂಲವ್ಯಾಧಿ, ಮೂತ್ರಪಿಂಡದ ಕಲ್ಲುಗಳು, ಕರುಳಿನ ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಹೃದಯಾಘಾತ ಮೊದಲಾದವು ಎದುರಾಗುವ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೇ ಒಮ್ಮೆ ಮಾಂಸಾಹಾರ ಒಗ್ಗಿಬಿಟ್ಟಿತೆಂದರೆ ಬೇರೆ ಆಹಾರವನ್ನೇ ದೇಹ ಬಯಸದೇ ಮಾನಸಿಕವಾಗಿಯೂ ಬಳಲಬಹುದು. ಹಾಗಾಗಿ, ಹಿಂದೂ ಧರ್ಮ ಈ ಕಟ್ಟುಪಾಡಿನ ಮೂಲಕ ದೇಹ ಮಾಂಸಾಹಾರದ ವ್ಯಸನಕ್ಕೆ ಒಳಗಾಗದಿರುವಂತೆ ತಡೆಯುತ್ತದೆ.

LEAVE A REPLY

Please enter your comment!
Please enter your name here