ಜಗ್ಗೇಶ್ ಯಾಕೆ ಕೈ ತುಂಬ ಉಂಗುರ ಹಾಕುತ್ತಾರೆ ಗೊತ್ತಾ ..?

0
218

ನವರಸ ನಾಯಕ ಜಗ್ಗೇಶ್ ಅವರನ್ನು ಗಮನಸಿದರೆ ಅವರು ಕೈ ತುಂಬ ಉಂಗುರಗಳನ್ನು ಹಾಕಿಕೊಂಡಿರುತ್ತಾರೆ. ಸಾಮಾನ್ಯವಾಗಿ ಗಂಡು ಮಕ್ಕಳಿಗೆ ಬಂಗಾರ ಕ್ರೇಜ್ ಇರುವುದಿಲ್ಲ. ಆದರೆ, ಜಗ್ಗೇಶ್ ಮಾತ್ರ ಸಿಕ್ಕಾಪಟ್ಟೆ ಆಭರಣ ಪ್ರಿಯರು.

ಜಗ್ಗೇಶ್ ಬಂಗಾರ ಹಾಕುವುದನ್ನು ಕಲಿತಿದ್ದು, ಅವರ ತಾಯಿಯನ್ನು ನೋಡಿ ಅಂತೆ. ಅವರ ತಾಯಿ ನಂಜಮ್ಮ ಅವರಿಗೆ ಬಂಗಾರ ಅಂದರೆ ಬಹಳ ಇಷ್ಟವಂತೆ. ನಂಜಮ್ಮ ಕೂಡ ಹೆಚ್ಚು ಆಭರಣ ಧರಿಸುತ್ತಿದ್ದರಂತೆ.

ತಾಯಿಯನ್ನು ನೋಡಿ ಜಗ್ಗೇಶ್ ಕೂಡ ಬಂಗಾರ ಹಾಕುವುದನ್ನು ಕಲಿತುಕೊಂಡರಂತೆ. ಬರುಬರುತ್ತಾ ಅದು ಕ್ರೇಜ್ ಆಗಿದೆ. ಜಗ್ಗೇಶ್ ಏಳರಿಂದ ಎಂಟು ಉಂಗುರವನ್ನು ಸಾಮಾನ್ಯವಾಗಿ ಹಾಕಿಕೊಳ್ಳುತ್ತಾರೆ. ಅದರಲ್ಲಿ ಸ್ಟಾರ್ ರಿಂಗ್ ಗಳನ್ನು ಸಹ ಇದೆ.

ವಿಶೇಷ ಅಂದರೆ, ಜಗ್ಗೇಶ್ ಪತ್ನಿ ಪರಿಮಳ ಅವರಿಗೆ ಬಂಗಾರದ ಅಂದರೆ ಅಷ್ಟೊಂದು ಇಷ್ಟವಿಲ್ಲವಂತೆ. ಜಗ್ಗೇಶ್ ಏನೇ ಹೊಸ ಆಭರಣ ನೀಡಿದರು. ಬಳಕೆ ಮಾಡುವುದಿಲ್ಲವಂತೆ.

LEAVE A REPLY

Please enter your comment!
Please enter your name here