ದೊಡ್ಡ ಸಭಾಂಗಣದಲ್ಲಿ ಹಿಂದಿಯ ರಕ್ಷಣಾ ಸಚಿವ ‘ಮನೋಹರ್ ಪರಿಕ್ಕರ್’ ಕನ್ನಡದಲ್ಲಿ ಮಾತಾನಾಡಿದಾಗ !

0
807

2016. ಅದು ಶೌರ್ಯ ಪ್ರಶಸ್ತಿ ಪ್ರದಾನ ಸಮಾರಂಭ, ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಸಹ ಭಾಗಿಯಾಗಿದ್ದೆ, ಪ್ರಶಸ್ತಿ ವಿತರಿಸಿದ ನಂತರ ದೊಡ್ಡದಾದ ಸಭಾಂಗಣದಲ್ಲಿ ಚಹಾ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು ಅಲ್ಲಿ ಪ್ರಶಸ್ತಿ ವಿಜೇತರು ಮತ್ತು ಅವರ ಕುಟುಂಬದ ಸದಸ್ಯರು ಅಲ್ಲಿದ್ದರು, ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥರುಗಳು ಅಧಿಕಾರಿ ವರ್ಗದವರು ಅಲ್ಲಿ ನೆರೆದಿದ್ದರು.

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರದ ಸಚಿವರುಗಳು ಅಲ್ಲಿ ಸೇರಿದ್ದರು. ನನ್ನಂತಹ ಸಾಮಾನ್ಯ ಜನರಿಗೆ ಇದೊಂದು ಅಸಮಾನ್ಯ ಸಂಗತಿಯಾಗಿತ್ತು. ಪ್ರಸಿದ್ಧ ರಾಜಕಾರಣಿಗಳು ಸುತ್ತಲೂ ನಡೆದಾಡುತ್ತಿರುವಾಗ, ಒಬ್ಬ ಸಾದಾರಣ ಉಡುಪಿನಲ್ಲಿದ್ದ ವ್ಯಕ್ತಿಯು ಬಂದು ಕೈ ಕುಲುಕಿ ಮಾತನಾಡಲು ತೊಡಗುತ್ತಾನೆ.

 

 

 

“ನಾನು ಮನೋಹರ್ ಪರಿಕ್ಕರ್.” (ನನಗೆ ಅಶ್ಚರ್ಯವಾಯಿತು)
“ಹೌದು ಹೌದು, ನನಗೆ ಚೆನ್ನಾಗಿ ಗೊತ್ತು. ನಾನು ನಿನಾದ್ ವೆಂಗುರ್ಲೆಕರ್.
“ಪಾರ್ರಿಕರ್ ನನ್ನನ್ನು ನೋಡಿ ನಕ್ಕು ಮರಾಠಿಯಲ್ಲಿ ಮಾತನಾಡಲು ತೊಡಗುತ್ತಾರೆ.
” ನೀವು ಗೋವಾದಲ್ಲಿ ಎಲ್ಲಿಂದ, ವೆಂಗುರ್ಲಾ ದಿಂದಲೇ” ಎಂದು ಪ್ರಶ್ನಿಸಿದರು,
ನಾನು ಹೌದು ಎಂದು ಉತ್ತರಿಸಿದೆನು.
ಅದಕ್ಕೆ ಅವರು ನಗುತ್ತಾ ವೆಂಗುರ್ಲಾ ತುಂಬಾ ಸುಂದರವಾದ ಸ್ಥಳವಾಗಿದೆ ಎಂದರು.

ನನ್ನ ಮಾವನವರು ನನ್ನ ಜೊತೆಯಲ್ಲಿ ಇದ್ದರು, ಮತ್ತು ಅವರಿಗೆ ನಡೆದಾಡಲು ಸಾದ್ಯವಿಲ್ಲದಿರುವುದರಿಂದ ಗಾಲಿಕುರ್ಚಿಯಲ್ಲಿದ್ದರು. ರಾಷ್ಟ್ರದ ರಕ್ಷಣಾ ಸಚಿವರು ನನ್ನೊಂದಿಗೆ ಮಾತನಾಡುತ್ತಿದ್ದಾಗ ಅವರ  ಕಣ್ಣುಗಳಿಗೆ ನಂಬಲಾಗುತ್ತಿಲ್ಲ. ನಾನು ತಿರುಗಿ ಅವರನ್ನು ಮರಾಠಿ ಭಾಷೆಯಲ್ಲಿಯೆ ಪರಿಕ್ಕರ್ ಅವರಿಗೆ ಪರಿಚಯಿಸಿದೆನು.

“ಸರ್, ನನ್ನ ಮಾವ ಮೋಹನ್ ಮೊಕಾಶಿ, ಕಮಾಂಡರ್ ಮಿಲಿಂದ್ ಮೊಕಾಶಿ ಅವರ ತಂದೆ”ಎಂದು ಅವರನ್ನು ಪರಿಚಯಿಸಿದೆನು.
” ಅರ್ರೆ ವಾಹ್,ಯೆಮೆನ್ ನಲ್ಲಿ ನಡೆದ  ಸ್ಥಳಾಂತರದ ಕಾರ್ಯಾಚರಣೆಯ ಸಮಯದಲ್ಲಿ ನಿಮ್ಮ ಮಗನು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ, ಅಭಿನಂದನೆಗಳು. ಅವರು ಪ್ರಶಸ್ತಿಗೆ ಅರ್ಹರಾಗಿದ್ದರು”.

“ಧನ್ಯವಾದಗಳು ಸರ್” ಎಂದಾಗ  ಪರಿಕ್ಕರ್ ಅವರು “ನಾನು ನಿಮಗಿಂತ ಚಿಕ್ಕವನು ಸರ್ ಎಂದು ಕರೆಯಬೇಡಿ” ಎಂದು ವಿನಂತಿಸಿದರು.

ಅವರ ಸರಳತೆಗೆ ನಾನು ನನ್ನ ಮಾವನವರು ಮಾರು ಹೋಗಿದ್ದೆವು.
ಭಾರತ ದೇಶದ ರಕ್ಷಣಾ ಸಚಿವರು ಬಹಳ ಸರಳವಾಗಿ ದೊಗಲೆ ಶರ್ಟ್, ಕಪ್ಪು ಪ್ಯಾಂಟ್,ಮತ್ತು ಬಾಟ ಚಪ್ಪಲಿ ಧರಿಸಿದ್ದರು.
ಸರಳತೆಯಲ್ಲಿ ಅವರಿಗೆ ಸರಿಸಾಟಿಯಾಗಿ ಯಾರೂ ಇರಲು ಸಾಧ್ಯವಿಲ್ಲ ಅಷ್ಟೊಂದು ಸರಳತೆ.
ನಮಗೆ ಅವರ ಮೇಲಿದ್ದ ಗೌರವ ಇನ್ನೂ ಹೆಚ್ಚಾಯಿತು ಮತ್ತು ನನ್ನ ಮಾವನವರು ಅವರ ಕೈ ಹಿಡಿದು ಧನ್ಯವಾದಗಳು ಎಂದರು.

 

 

 

“ಹಾಗದರೆ ಮೊಕಾಶಿ ಅವರೆ ನೀವು ಬೆಳಗಾವಿಯಿಂದಲೋ ಅಥವಾ ಮಹಾರಾಷ್ಟ್ರದಿಂದಲೋ” ಎಂದು ಕೇಳಿದರು.
ಅದಕ್ಕೆ ನಾನು ವಿಜಯಪುರದಿಂದ ಎಂದು ಹೇಳಿದಾಗ ಕೂಡಲೆ ಕನ್ನಡದಲ್ಲಿ ಮಾತನಾಡಲು ತೊಡಗಿದರು.
“ನಿಮ್ಮನ್ನು ಇಲ್ಲಿ ನೋಡಿ ತುಂಬಾ ಖುಷಿಯಾಯಿತು, ಚಾ ತಿಂಡಿ ಮಾಡಿಕೊಂಡು ಹೋಗಬೇಕು”ಎಂದು ಕನ್ನಡದಲ್ಲಿ ಹೇಳಿದಾಗ ನನಗೆ ತುಂಬಾ ಆಶ್ಚರ್ಯವಾಯಿತು, ಅವರು ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡುವುದನ್ನು ನೋಡಿ ಅವರು ಕನ್ನಡದವರೇನೋ ಎಂದು ಅನಿಸದೇ ಇರಲಿಲ್ಲ .

ಮುಖ ಪರಿಚಯ ಇಲ್ಲದವರೊಂದಿಗೆ ಬೆರೆಯುವ ಅವರ ಸರಳತೆಗೆ ಮನಸೋತು ಹೋದೆವು.ಅವರು ಅಲ್ಲಿ ಸೇರಿದ್ದ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುವುದನ್ನು ನೋಡಿ ಸಂತೊಷವಾಯಿತು,ಅವರ ನಡತೆಯಲ್ಲಿ ಯಾವುದೇ ರೀತಿಯ ಅಹಂ ಇರಲಿಲ್ಲ,ತಾನು ಒಬ್ಬ ರಕ್ಷಣಾ ಸಚಿವ ಎಂದು ಹಮ್ಮು ತೋರಿಸುತ್ತಿರಲಿಲ್ಲ.

ಇದಾಗಿ ಎರಡು ವರ್ಷ ಆಯಿತು,ತುಂಬಾ ಅರೋಗ್ಯವಾಗಿಯೇ ಇದ್ದರು, ತೀರಾ ದ್ರಡಕಾಯ ಅಲ್ಲದಿದ್ದರೂ ಆರೋಗ್ಯಪೂರ್ಣ ಶರೀರ, ಅವರನ್ನು ನೋಡಿದರೆ ಇನ್ನೂ ಇಪ್ಪತ್ತೈದು ವರ್ಷ ಅರಾಮವಾಗಿ ಇರುತ್ತಿದ್ದರು, ಆದರೆ ಇಂದು ಅವರು ನಮ್ಮೊಂದಿಗೆ ಇಲ್ಲ ಎನ್ನುವುದನ್ನು ನಂಬಲಾಗುತ್ತಿಲ್ಲ.

63 ವರ್ಷ ಸಾಯುವ ವಯಸ್ಸೇನು ಅಲ್ಲ. ಆದರೆ ಇಷ್ಟು ಚಿಕ್ಕ ವಯಸ್ಸಿನ ಜೀವನದಲ್ಲಿ, ಪರಿಕ್ಕರ್ ಅವರು ಭಾರತದ ಜನರ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದರು.

ಭಾರತದಲ್ಲಿ ಕೊನೆಯ ಹಂತದ  ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಎಷ್ಟು ರಾಜಕಾರಣಿಗಳನ್ನು ನೋಡಿದ್ದೀರ? ಮತ್ತು ಅವರು ತಮ್ಮ ಜೀವನದ ಕೊನೆಯ ದಿನಗಳಲ್ಲಿ ತನ್ನ ಮೂಗುಗಳಲ್ಲಿ ನಳ್ಳಿಗಳನ್ನು ಹಾಕಿ ಕೆಲಸ ಮಾಡುವುದನ್ನು ನೋಡಿದ್ದೀರಾ? ಇಲ್ಲ, ಆದರೆ ಮನೋಹರ್ ಪರಿಕ್ಕರ್  ಅವರು ತಮ್ಮ ಜೀವನದ ಕೊನೆಯ ಕ್ಷಣದವರೆಗೂ ಈ ದೇಶದ ಜನತೆಯ ಸೇವೆ ಮಾಡಿದರು.
ಅವರ ಸರಳತೆ, ಸೇವಾ ಸಮರ್ಪಣಾ ಮನೋಭಾವನೆಯನ್ನು ಮೀರಿಸಲು ರಾಜಕಾರಣಿಗಳನ್ನು ಬಿಡಿ ಜನಸಾಮಾನ್ಯರಿಂದಲೂ ಸಾದ್ಯವಿಲ್ಲ.

ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.
-ನಿನಾದ್ ವಿ
#ಮನೋಹರ್ ಪರಿಕ್ಕರ್

-ಮಾಝಿನ್

LEAVE A REPLY

Please enter your comment!
Please enter your name here