ಭಾರತೀಯರು ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಾಡುವುದು ಏನು ಗೊತ್ತಾ..?

0
33

ಈಗಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಂದರ ಯಾವುದೇ ಮಾಹಿತಿ ಪಡೆಯಲು ಗೂಗಲ್ ನಲ್ಲಿ ಒಂದೇ ಒಂದು ಕ್ಲಿಕ್ ಮಾಡಿದರೆ ಸಾಕು. ಹೌದು ಗೂಗಲ್ ಸರ್ಚ್ ಇಂಜಿನ್ ಒಂದಿದ್ದರೆ ಯಾವುದೇ ಮಾಹಿತಿಗಳನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. ಭಾರತ ಸೇರಿದಂತೆ ವಿಶ್ವದೆಲ್ಲಡೆ ಗೂಗಲ್ ಮೊರೆ ಹೋಗುವವರೇ ಹೆಚ್ಚು.ಈಗಿನ ಜನಾಂಗ ಹೇಗೆ ಎಂದರೆ ತನಗೆ ಗೊತ್ತಿಲ್ಲದ ವಿಷಯವನ್ನು ಬೇರೆಯವರನ್ನು ಕೇಳದೆ ಗೂಗಲ್ ಮೇಲೆ ಅವಲಂಬಿಯಾಗಿರುತ್ತಾರೆ.

 

 

View this post on Instagram

 

Tomorrow, we’ll be sharing a few new things #madebygoogle. Tune into our story tomorrow morning to see what we’ve made.

A post shared by Google (@google) on

ಅದರಲ್ಲೂ ಭಾರತೀಯ ಯುವ ಜನ 2018 ರಲ್ಲಿ ಗೂಗಲ್ ನಲ್ಲಿ ಯಾವ ವಿಷಯದ ಬಗ್ಗೆ ಅತೀ ಹೆಚ್ಚು ಹುಡುಕಾಟಮಾಡಿದ್ದಾರೆ ಎಂಬ ವರದಿಯನ್ನು ಗೂಗಲ್ ಇಯರ್ ಇನ್ ಸರ್ಚ್ ಇಂಡಿಯಾ ಇನ್ ಸೈಟ್ಸ್ ಫರ್ ಬ್ರ್ಯಾಂಡ್ಸ್ ಬಿಡುಗಡೆ ಮಾಡಿದೆ. ಗೂಗಲ್ ಇಯರ್ ಇನ್ ಸರ್ಚ್ ಇಂಡಿಯಾ ಇನ್ ಸೈಟ್ಸ್ ಫರ್ ಬ್ರ್ಯಾಂಡ್ಸ್ ವರದಿಯ ಪ್ರಕಾರ ಹೆಚ್ಚಿನ ಭಾರತೀಯರು ಗೂಗಲ್ ನಲ್ಲಿ ಸಂಗಾತಿಗಾಗಿ ಹುಡುಕಾಟ ನಡೆಸಿದ್ದಾರೆ.

 

ಒಟ್ಟು ಹುಡುಕಾಟದ ಶೇ .40 ರಷ್ಟು ಮಂದಿ ಡೇಟಿಂಗ್ ಪಾಟರ್ನರ್ ಗಾಗಿ ಸರ್ಚ್ ಇಂಜಿನ್ ನಲ್ಲಿ ಜಾಲಾಡಿದ್ದಾರೆ. ಇದೇ ವೇಳೆ ಮದುವೆ ಸಂಬಂಧಕ್ಕಾಗಿ ಅಂತರ್ಜಾಲದ ಮೊರೆ ಹೋದವರು ಕೇವಲ ಶೇ .13 ರಷ್ಟು ಮಂದಿ ಮಾತ್ರ. ಅಂದರೆ ದೇಶದ ಯುವ ಜನಾಂಗ ಮದುವೆಗಿಂತ ಡೇಟಿಂಗ್ ನತ್ತ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಈ ಸಮೀಕ್ಷೆ ತಿಳಿಸಿದೆ.

 

View this post on Instagram

 

A post shared by 😍😍 kajal patil😍😍 (@kajal__patil_777) on


2017 ಕ್ಕೆ ಹೋಲಿಸಿದರೆ ಕಳೆದ ವರ್ಷ ಭಾರತದಲ್ಲಿ ಮ್ಯಾಟ್ರಿಮೊನಿಗಿಂತ ಡೇಟಿಂಗ್ ಪಾರ್ಟನರ್ ಹುಡುಕಾಟ ಹೆಚ್ಚಾಗಿರುವುದು ಕಂಡು ಬಂದಿದೆ. ಇದು ಕೇವಲ ಮೆಟ್ರೊ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಇಂಟರ್ನೆಟ್ ಸೌಲಭ್ಯವಿರುವ ಸಣ್ಣ ಪುಟ್ಟ ಪಟ್ಟಣಗಳ ಜನರೂ ಸಹ, ತಮ್ಮ ಪಾಲುದಾರರ ಹುಡುಕಾಟ ನಡೆಸುತ್ತಿದ್ದಾರೆ ಎಂದು ಇನ್ ಸೈಟ್ಸ್ ಫರ್ ಬ್ರ್ಯಾಂಡ್ಸ್ ಅಭಿಪ್ರಾಯಪಟ್ಟಿದೆ.

 

 

View this post on Instagram

 

🔱 The Monkeys! ❤️ #sheisbreathtaking #grateful #monkeylove

A post shared by karan singh grover (@iamksgofficial) on


ಈ ವರದಿಯಲ್ಲಿ ತಿಳಿಸಿರುವಂತೆ ಗೂಗಲ್ ನಲ್ಲಿ ‘ಹತ್ತಿರ ಮಿ’ (ಹತ್ತಿರದ ನನ್ನ) ಶೋಧವು ಶೇ .75 ರಷ್ಟು ಹೆಚ್ಚಾಗಿದ್ದು, ಹಾಗೆಯೇ ಕೆಲಸದ ಹುಡುಕಾಟ ಶೇ .100 ರಷ್ಟು ಜಾಸ್ತಿಯಾಗಿದೆ ಎಂದು ತಿಳಿಸಿದೆ. ಹಾಗೆಯೇ ಪ್ರತಿವರ್ಷ 4 ಕೋಟಿ ಭಾರತೀಯರು ಹೋಮ್ ಇಂಟರ್ನೆಟ್ ಬಳಕೆಯ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಇತರೆ ನಗರಗಳಲ್ಲೂ ಮೆಟ್ರೋ ನಗರಗಳಿಗಿಂತ ಆನ್ ಲೈನ್ ಹುಡುಕಾಟ ವೇಗವಾಗಿ ಬೆಳೆಯುತ್ತಿದೆ.

 

View this post on Instagram

 

@macro.girl crushed it with this cereals-ly creative #MySuperG.

A post shared by Google (@google) on

ಮೆಟ್ರೋ ನಗರಗಳಿಗೆ ಹೋಲಿಸಿದರೆ, ಇತರೆ ನಗರಗಳ ಜನರು ವಿಮೆ, ಸೌಂದರ್ಯ ಮತ್ತು ಪ್ರವಾಸೋದ್ಯಮದ ಕುರಿತು ಅಂತರ್ಜಾಲದಲ್ಲಿ ಹೆಚ್ಚು ಶೋಧನೆ ಮಾಡುತ್ತಿದ್ದಾರೆ ಎಂಬ ವಿಷಯ ಈ ವರದಿಯಿಂದ ತಿಳಿದು ಬಂದಿದೆ.ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here