ಸೃಜನ್‍ ಲೋಕೇಶ್‍ ಮತ್ತು ವಜಯಲಕ್ಷ್ಮಿ ಮದುವೆ ಮುರಿದು ಬೀಳಲು ಇದೇ ಅಸಲಿ ಕಾರಣ!

0
241

ಕಲರ್ಸ್‍ ಸೂಪರ್ ‍ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಟಾಕೀಸ್‍ ಖ್ಯಾತಿಯ ಮತ್ತು ಟಾಕಿಂಗ್‍ ಸ್ಟಾರ್‍ ಎಂದೇ ಗುರುತಿಸಲ್ಪಡುವ ಸೃಜನ್‍ ಲೋಕೇಶ್‍ ಅವರು ವೀಕ್‍ ಎಂಡ್‍ ನಲ್ಲಿ ಕನ್ನಡಿಗರ ಮುಖದಲ್ಲಿ ನಗು ತರಿಸುತ್ತಾರೆ. ಅವರು ನಟಿ ಗ್ರೀಷ್ಮಾ ಅವರನ್ನು ಮದುವೆಯಾಗಿ ಎರಡು ಮಕ್ಕಳ ತಂದೆಯೂ ಆಗಿದ್ದಾರೆ.

ಆದರೆ ಅವರ ಹಿಂದಿನ ಬದುಕಿನ ಕೆಲ ಘಟನೆಗಳನ್ನು ಮೆಲುಕು ಹಾಕಿದರೆ, ಕನ್ನಡದ ಖ್ಯಾತ ನಟಿ ವಿಜಯಲಕ್ಷ್ಮಿ ಜೊತೆಗೆ ಮದುವೆ ಗೊತ್ತಾಗಿತ್ತು ಎಂದು ಕೇಳಿದರೆ ನೀವು ಶಾಕ್‍ ಆಗ್ತೀರಾ…! ಆದರೆ ಸೃಜನ್‍ ಲೋಕೇಶ್‍ ಮತ್ತು ನಟಿ ವಿಜಯಲಕ್ಷ್ಮಿ ನಡುವಿನ ಸಂಬಂಧ ಮುರಿದುಬೀಳಲು ಇದೇ ಅಸಲಿ ಕಾರಣ ಎಂದು ತಿಳಿದಿರೆ ನೀವೂ ಆಶ್ಚರ್ಯ ಪಡುತ್ತೀರಿ.

 

 

View this post on Instagram

 

Maja Weekend starting from today. Pls note #Majaaweekend is on #colorskannada at 9 pm every Saturday and Sunday.

A post shared by Srujan Lokesh (@srujanlokesh) on

 

ಮೂರು ವರ್ಷಗಳ ಕಾಲ ಸೃಜನ್‍ ಲೋಕೇಶ್‍ ಮತ್ತು ವಿಜಯಲಕ್ಷ್ಮಿ ಪ್ರೀತಿಸಿದ್ದರು. ಅಲ್ಲದೇ, ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಇನ್ನೇನು ಮದುವೆ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಇವರ ನಡುವೆ ಬಿರುಕು ಮೂಡಿ ಮದುವೆ ಮುರಿದು ಬಿತ್ತು.

ಇದಕ್ಕೆ ಅಸಲಿ ಕಾರಣವನ್ನು ನಟಿ ವಿಜಯಲಕ್ಷ್ಮಿ ಬಿಚ್ಚಿಟ್ಟಿದ್ದಾರೆ. ನಿಶ್ಚಿತಾರ್ಥ ಆದ ನಂತರ ನನ್ನ ಮತ್ತು ಸೃಜನ್‍ ನಡುವೆ ಸ್ವಲ್ಪ ಮನಸ್ಥಾಪ ಆಯ್ತು. ನಾವಿಬ್ಬರೂ ಪ್ರೀತಿಸುತ್ತಿದ್ದರೂ, ನಮ್ಮ ಸುತ್ತಮುತ್ತಲಿನ ಜನರು ಮದುವೆ ಮಾಡಿಕೊಂಡು ಮನೆ ತುಂಬಿಸಿಕೊಳ್ಳಬೇಕೋ ಬೇಡವೋ ಅಂತಾ ಯೋಚನೆ ಮಾಡಲು ಪ್ರಾರಂಭಿಸಿದರು. ವಿವಾದಗಳು ನನ್ನ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಲು ಆರಂಭವಾಯಿತು ಎನ್ನುತ್ತಾರೆ ವಿಜಯಲಕ್ಷ್ಮಿ.

 

 

ವಿವಾದಗಳು ಎದ್ದ ಕೂಡಲೇ ಅವುಗಳ ಬಗ್ಗೆ ಮಾತನಾಡಿ, ಸ್ಪಷ್ಟನೆ ನೀಡಬೇಕಿತ್ತು. ಆದರೆ ನಾನು ಸುಮ್ಮನಾಗಿದ್ದು, ನನ್ನ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರಲು ಆರಂಭವಾಯಿತು. ಆದರೆ ಸೃಜನ್‍ ಲೋಕೇಶ್‍ ಬಗ್ಗೆ ಯಾವುದೇ ಬೇಸರ ಇಲ್ಲ. ಒಳ್ಳೆಯ ರೀತಿಯಲ್ಲೇ ಬೇರೆಯಾದೆವು.

ಈ ವೇಳೆ ಅವರನ್ನು ಎಳೆದು ತರುವುದು ತಪ್ಪು. ಅವರಿಗೆ, ಈಗಾಗಲೇ ಮದುವೆಯಾಗಿದೆ. ಅವರು ಚೆನ್ನಾಗಿರಲಿ ಎಂದು ನಟಿ ವಿಜಯಲಕ್ಷ್ಮಿ ಹಾರೈಸಿದರು.

ಇದಾದ ನಂತರ ಸಾಕಷ್ಟು ಮದುವೆ ಪ್ರಪೋಸಲ್‍ ನನಗೆ ಬಂದವು. ಸೃಜನ್‍ ಬಿಟ್ಟು ಬೇರೆಯವರ ಜೆನ್ಯೂನ್‍ ಆಗಿರಲಿಲ್ಲ. ಕೆಲವರಿಗೆ, ನನ್ನ ಕಮಿಟ್‍ಮೆಂಟ್‍ ಇಷ್ಟ ಆಗಲಿಲ್ಲ. ನಂತರ ಜಾತಿಯ ಮಾತು ಬರಲಾರಂಭಿಸಿತು. ಇಷ್ಟೆಲ್ಲಾ ರಂಪಾಟವಾದ ಮೇಲೆ ಮದುವೆಯಾಗಲು ಮನಸ್ಸು ಮಾಡಲಿಲ್ಲ. ಅಲ್ಲದೇ, ನನ್ನ ಕಣ್ಣ ಮುಂದೆಯೇ ನನ್ನ ಅಕ್ಕನ ಜೀವನ ಹಾಳಾಗಿರುವಾಗ ನಾನು ಯಾರನ್ನಾದರೂ ಮದುವೆಯಾಗಿ ಹೇಗೆ ಖುಷಿಯಾಗಿರಲಿ. ನನ್ನ ಅಕ್ಕನ ಜೀವನ ಸರಿಯಾಗುವ ತನಕ ನನ್ನ ಜೀವನದಲ್ಲಿ ಯಾರನ್ನೂ ಕರೆದುಕೊಂಡು ಬರುವುದಿಲ್ಲ ಎನ್ನುತ್ತಾರೆ ವಿಜಯಲಕ್ಷ್ಮಿ.

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here