ನೀರಿಗೆ ಉಪ್ಪನ್ನು ಹಾಕಿ ಮನೆ ಒರೆಸಿದ್ರೆ ಏನೆಲ್ಲಾ ಲಾಭ ಇದೆ ಗೊತ್ತಾ.?

0
27

ಇಂದಿಗೂ ಕೂಡ ಹಳ್ಳಿಗಳಲ್ಲಿ ಸಂಜೆ ಆರು ಗಂಟೆಯ ನಂತರ ಕೆಲವು ಸ್ಥಳಗಳಿಗೆ ಹೋಗುವಾಗ ಹಿರಿಯರು ‘ಅಲ್ಲಿ ಹೋಗಬೇಡಿ, ಅದು ಒಳ್ಳೆಯ ಸ್ಥಳವಲ್ಲ’ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಒಳ್ಳೆಯ ಸ್ಥಳವಲ್ಲ ಎಂದರೆ ಅಲ್ಲಿ ಭೂತಪ್ರೇತಗಳಿವೆ, ಅದರಿಂದ ತೊಂದರೆಯಾಗಬಹುದು ಮನೆಯಲ್ಲಿ ಸುಖ ಹಾಗೂ ಸಮೃದ್ಧಿ ನೆಲೆಸಲೆಂದು ಅವರು ಮುನ್ನೆಚ್ಚರಿಕೆ ನೀಡುತ್ತಾರೆ.

ಋಣಾತ್ಮಕ ಶಕ್ತಿಗಳ ಪ್ರಭಾವ ಇದರಿಂದಾಗಿ ಮನೆಯ ಒಳಗಡೆ ಬರಬಹುದು ಎನ್ನುವುದಾಗಿ ಹಿರಿಯರು ಮಾಡಿರುವ ಅನೇಕ ಪದ್ದತಿಗಳನ್ನು ಈಗಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಹಾಗೆ ಋಣಾತ್ಮಕ ಶಕ್ತಿ ಮನೆಯನ್ನು ಆವರಿಸಿದಷ್ಟೂ ಹೆಚ್ಚು ಉದ್ವೇಗ, ಆತಂಕ, ದುಗುಡಗಳು ಆವರಿಸುತ್ತವೆ. ಈ ಋಣಾತ್ಮಕ ಶಕ್ತಿಗಳನ್ನು ಹೊರಹಾಕಲು ಮನೆಯಲ್ಲಿ ಈಗಲೂ ಆ ಪದ್ಧತಿಗಳು ಜಾರಿಯಲ್ಲಿವೆ. ಅಂತಹ ಮನೆಯಲ್ಲಿ ಸದಾ ಸುಖ- ಸಮೃದ್ಧಿ ನೆಲೆಸಿರುತ್ತದೆ.

 

 

View this post on Instagram

 

Tried this last night and I am obsessed! #pinksalt #pink #salt #himalayansalt #himalayan

A post shared by Coach Kiki (@coachkiki0303) on

ಆ ಮನೆ ಸುತ್ತಮುತ್ತ ಯಾವುದೇ ಕೆಟ್ಟ ಶಕ್ತಿಗಳು ಸುಳಿಯುವುದಿಲ್ಲ ಎಂಬ ನಂಬಿಕೆ ಇದೆ. ಸಾಮಾನ್ಯ ಉಪ್ಪನ್ನು ಬಳಸಿ ಈ ಋಣಾತ್ಮಕ ಶಕ್ತಿಗಳ ಪ್ರಭಾವವನ್ನು ಇಲ್ಲದಂತಾಗಿಸುವುದು ಮಾತ್ರವಲ್ಲ ಈ ಮೂಲಕ ಮನೆಯಿಂದ ದಾರಿದ್ರ್ಯವನ್ನೂ ಹೊರಹಾಕಲು ಸಾಧ್ಯ.ಇದು ನಿಜವೋ ಸುಳ್ಳೋ ಬೇರೆ ಪ್ರಶ್ನೆ, ಆದರೆ ಹಲವೆಡೆ ಜನರು ಅತೀಂದ್ರಿಯ ಶಕ್ತಿ (ಕೆಟ್ಟ ಶಕ್ತಿ), ಹಾಗೂ ಭೂತಗಳಿರುವಿಕೆಯನ್ನು ಗಮನಿಸಿದ್ದಾರೆ. ಇದಕ್ಕೆ ಸೂಕ್ತವಾದ ವಿವರಣೆ ಇದುವರೆಗೆ ಲಭ್ಯವಾಗಿಲ್ಲ.

ಋಣಾತ್ಮಕ ಶಕ್ತಿಗಳಿಂದ ಮುಕ್ತಿ ಪಡೆಯಲು ಉಪ್ಪನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತಿದೆ.

ಕಲ್ಲುಪ್ಪು ಬೆರೆಸಿದ ನೀರಿನಿಂದ ನೆಲ ಒರೆಸಿ

‘ವಾಸ್ತು ಶಾಸ್ತ್ರದ’ ಪ್ರಕಾರ ಪ್ರದಿಯೊಂದು ಮನೆಯ ಕೋಣೆಯನ್ನು ಕಲ್ಲುಪ್ಪು ಬೆರೆಸಿದ ನೀರಿನಿಂದ ಒರೆಸಬೇಕು. ಮೊದಲು ಮನೆಯ ಹಿಂಭಾಗದಿಂದ ಪ್ರಾರಂಭಿಸಿ ಮನೆಯ ಒಳಗಣ ಪ್ರತಿ ಕೋಣೆಯ ನೆಲದ ಒಂದಿಂಚನ್ನೂ ಬಿಡದಂತೆ ಒರೆಸುತ್ತಾ ಮನೆಯ ಹೊಸ್ತಿಲಿನಲ್ಲಿ ಕೊನೆಯಾಗುವಂತೆ ಒರೆಸುವ ಮೂಲಕ ಋಣಾತ್ಮಕ ಶಕ್ತಿಯನ್ನು ಹೊರಹಾಕುವ ಮೂಲಕ ದಾರಿದ್ರ್ಯದ ಲಕ್ಷಣಗಳನ್ನೂ ನಿವಾರಿಸಬಹುದು. ಈ ವಿಧಾನವನ್ನು ಭಾನುವಾರದ ಹೊರತು ಇತರ ದಿನಗಳಲ್ಲಿ ಆಚರಿಸಬಹುದು.

ಒಂದು ಲೋಟ ನೀರಿಗೆ ಚಿಟಿಕೆಯಷ್ಟು ಉಪ್ಪು

ಒಂದು ಗಾಜಿನ ಲೋಟದಲ್ಲಿ ನೀರಿನ ಜೊತೆಗೆ ಚಿಟಿಕೆಯಷ್ಟು ಕಲ್ಲುಪ್ಪು ಬೆರೆಸಿ ನಿಮ್ಮ ಮನೆಯ ಪ್ರತಿ ಮೂಲೆಯಲ್ಲಿ ಇರಿಸಿ. ಈ ಮೂಲಕ ಮನೆಯಲ್ಲಿದ್ದ ದಾರಿದ್ರ್ಯ ಹೊರಹೋಗಲು ಸಾಧ್ಯವಾಗುತ್ತದೆ. ಇದರೊಂದಿಗೆ ಈ ಲೋಟದಲ್ಲಿ ನೀರು ಒಣಗುತ್ತಿದ್ದಂತೆಯೇ ಮತ್ತೊಮ್ಮೆ ಉಪ್ಪು ಬೆರೆಸಿದ ನೀರನ್ನು ತುಂಬಿಸುತ್ತಾ ಇರಬೇಕು.

ದಾರಿದ್ರ್ಯದಿಂದ ಪಡೆಯಲು ರಕ್ಷಣೆ ಬೋಗುಣಿಯಲ್ಲಿ ಒಂದು ಮುಷ್ಟಿಯಷ್ಟು ಕಲ್ಲುಪ್ಪು
ನಿಮ್ಮ ಮನೆಯ ಸ್ನಾನಗೃಹದ ನೀರು ಬೀಳದ ಮೂಲೆಯಲ್ಲಿ ಒಂದು ಬೋಗುಣಿಯಲ್ಲಿ ಒಂದು ಮುಷ್ಟಿಯಷ್ಟು ಕಲ್ಲುಪ್ಪನ್ನು ಹಾಕಿ ಇರಿಸಬೇಕು. ಈ ಉಪ್ಪನ್ನು ನಿಯಮಿತವಾಗಿ ಬದಲಿಸುತ್ತಲೂ ಇರಬೇಕು.

ಋಣಾತ್ಮಕ ಶಕ್ತಿಯಿಂದ ರಕ್ಷಣೆ

ಒಂದು ಚಿಕ್ಕ ಕೆಂಪು ಬಣ್ಣದ ಬಟ್ಟೆಯಲ್ಲಿ ಕೊಂಚ ಉಪ್ಪನ್ನು ಹಾಕಿ ಗಂಟುಕಟ್ಟಿ ಈ ಗಂಟನ್ನು ನಿಮ್ಮ ಮನೆಯ ಪ್ರಧಾನ ಬಾಗಿಲಿನ ಮೇಲೆ ನೇತುಹಾಕಿ. ಈ ಮೂಲಕ ನಿಮ್ಮ ಮನೆಗೆ ಪ್ರವೇಶಿಸುವ ಯಾವುದೇ ಋಣಾತ್ಮಕ ಶಕ್ತಿಯಿಂದ ರಕ್ಷಣೆ ಪಡೆದಂತಾಗುತ್ತದೆ ಹಾಗೂ ನಿಮ್ಮ ಮನೆಯೊಳಗೆ ಸಮೃದ್ಧಿ ಹಾಗೂ ಶುಭಶಕುನಗಳನ್ನು ಆಹ್ವಾನಿಸಲು ಸಾಧ್ಯವಾಗುತ್ತದೆ.

ಊಟದ ಮೇಜಿನ ಮೇಲೆ ಸದಾ ಉಪ್ಪಿನ ಇಟ್ಟಿರಿ

ನಿಮ್ಮ ಮನೆಯ ಊಟದ ಮೇಜಿನ ಮೇಲೆ ಸದಾ ಉಪ್ಪಿನ ಭರಣಿಯನ್ನು ಇರಿಸಿರುವ ಮೂಲಕ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ ಹಾಗೂ ಮನೆಯಲ್ಲಿ ಎಂದಿಗೂ ಹಣಕಾಸಿನ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.

ಸ್ನಾನ ಮಾಡುವ ಮುನ್ನ ಸ್ನಾನ ಮಾಡುವ ಮುನ್ನ ಬಾತ್ ಟಬ್ ನಲ್ಲಿರುವ ನೀರಿಗೆ ಒಂದು ಕಪ್ ಅಥವಾ ಎರಡು ಕಪ್ ಕಲ್ಲುಪ್ಪನ್ನು ಸೇರಿಸಿ ಕಲಕಿ ಈ ನೀರಿನಿಂದ ಸ್ನಾನ ಮಾಡುವ ಮೂಲಕ ದೇಹದಿಂದ ವಿಷಕಾರಿ ವಸ್ತುಗಳು ನಿವಾರಣೆಯಾಗುತ್ತದೆ. ಅಷ್ಟೆಯಾಕೆ ಚರ್ಮ ವ್ಯಾಧಿಗಳು ನಿವಾರಣೆಯಾಗುವುದಲ್ಲದೆ ದೇಹಕಾಂತಿಯು ಕೂಡ ಹೆಚ್ಚುತ್ತದೆ. ಮತ್ತು ಇದರಿಂದ ದೇಹವನ್ನು ಆವರಿಸಿದ್ದ ಋಣಾತ್ಮಕ ಶಕ್ತಿಗಳೆಲ್ಲ ನೀರಿನಲ್ಲಿ ಕರಗಿ ಹೊರಹೋಗುತ್ತವೆ. ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸುತ್ತದೆ.

ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here