ದಕ್ಷಿಣ ಭಾರತದ ಕಲ್ಪವೃಕ್ಷ ನುಗ್ಗೆೆಮರ ! ನುಗ್ಗೆೆ ಎಲೆ ಮತ್ತು ನುಗ್ಗೆೆ ಕಾಯಿಯ ಉಪಯೋಗಗಳು

0
125

ನುಗ್ಗೆೆಮರವು ಒಂದು ರೀತಿಯ ಕಲ್ಪವೃಕ್ಷ. ಈ ಸಸ್ಯದ ಎಲ್ಲಾ ಭಾಗಗಳೂ ಮನುಷ್ಯನಿಗೆ ಉಪಯುಕ್ತ! ನುಗ್ಗೆೆ ಗಿಡದ ಎಲೆಗಳಲ್ಲಿ ಇರುವ ಪೌಷ್ಟಿಕಾಂಶ ಮತ್ತು ಔಷಧೀಯ ಗುಣಗಳು ಅಪಾರ. ಈ ಗಿಡ ಎಲೆ, ಹೂವು, ತೊಗಟೆ, ಬೇರು ಮೊದಲಾದವುಗಳನ್ನು ಔಷಧದ ರೂಪದಲ್ಲಿ ಬಳಸುವ ಪರಿಪಾಠ ದಕ್ಷಿಣ ಭಾರತದಲ್ಲಿ ಇದೆ.
ಮೂಲತಃ ಏಷ್ಯಾ ಪ್ರದೇಶದ ಸಸ್ಯವಾಗಿರುವ ನುಗ್ಗೆೆಗಿಡವು, ತನ್ನ ಪೌಷ್ಟಿಕಾಂಶದ ಗುಣದಿಂದಾಗಿ ಜಗತ್ತಿನಾದ್ಯಂತ ಪ್ರಸಾರಗೊಂಡಿದೆ. ಕ್ಯೂಬಾ ದೇಶದವರು, ಇದರ ಪೌಷ್ಟಿಕಾಂಶ ಮತ್ತು ಔಷಧೀಯ ಗುಣಗಳನ್ನು ಕಂಡು, ಅಪಾರ ಪ್ರಮಾಣದ ಬೀಜಗಳನ್ನು ಕೊಂಡೊಯ್ದು, ಗಿಡ ಬೆಳೆಸಿ ಉಪಯೋಗ ಪಡೆದುಕೊಂಡಿದ್ದಾರೆ.        ನುಗ್ಗೆೆಯಲ್ಲಿರುವ ಜಿಂಕ್ ಅಂಶವು ಮನುಷ್ಯನಲ್ಲಿ ಸಂತಾನೋತ್ಪತ್ತಿಯ ಶಕ್ತಿಯನ್ನು ದೃಢಗೊಳಿಸುತ್ತದೆ.
ನುಗ್ಗೆೆಯಲ್ಲಿರುವ ಹೇರಳವಾಗಿರುವ ಪೌಷ್ಟಿಕಾಂಶಗಳು : ಜಿಂಕ್, ಕ್ಯಾಲ್ಶಿಯಂ, ಮೆಗ್ನೀಷಿಯಂ, ಮ್ಯಾಂಗನೀಸ್ 0.36 ಮಿಲಿಗ್ರಾಂ. ಪೊಟಾಶಿಯಂ 337 ಮಿಲಿಗ್ರಾಂ. ಕಬ್ಬಿಣ 4 ಮಿಲಿಗ್ರಾಂ. ಗಂಧಕ 112 ಮಿಲಿಗ್ರಾಂ. ವಿಟಮಿನ್ ಬಿ1, ಬಿ12, ಎ, ನಿಯಾಸಿನ್, ವಿಟಮಿನ್ ಬಿ6, ವಿಟಮಿನ್ ಸಿ ಮತ್ತಿತರ ಅಂಶಗಳೂ ಇದರಲ್ಲಿವೆ. ನುಗ್ಗೆೆ ಎಲೆ ಮತ್ತು ನುಗ್ಗೆೆ ಕಾಯಿಯನ್ನು ಪಡೆಯಬಹುದು.

 

 

ನುಗ್ಗೆೆಯನ್ನು ಸೇವಿಸುವ ವಿಧಾನ:

1. ನುಗ್ಗೆೆ ಕಾಯಿಯ ಸಾಂಬಾರು: ಇತರ ತರಕಾರಿಯ ಸಾಂಬಾರು ಮಾಡಿದಂತೆಯೇ ಇದರ ಸಾಂಬಾರು ಮಾಡಬಹುದು. ಆಲೂಗಡ್ಡೆೆ ಅಥವಾ ಬದನೆಕಾಯಿಯನ್ನು ತುಸು ಬೆರೆಸಿದರೆ ರುಚಿ ಜಾಸ್ತಿ.

2. ವಿವಿಧ ರೀತಿಯ ಸಲಾಡ್ ಜೊತೆಯಲ್ಲಿ, ನುಗ್ಗೆೆಯ ಎಲೆಯನ್ನು ಚಿಕ್ಕದಾಗಿ ಹೆಚ್ಚಿ ಸರ್ವ್ ಮಾಡಬಹುದು. ನುಗ್ಗೆ ಹೂವನ್ನು ಸಹ ಇತರ ತರಕಾರಿಗಳ ಸಲಾಡ್ ಜೊತೆ ಮಿಶ್ರಣ ಮಾಡಬಹುದು.

3. ನುಗ್ಗೆೆ ಎಲೆ ಮತ್ತು ಈರುಳ್ಳಿಯನ್ನು ಚೆನ್ನಾಗಿ ಹೆಚ್ಚಿಕೊಂಡು, ದೋಸೆ ಅಥವಾ ಆಮ್ಲೆಟ್ ಮಾಡಲು ಸಾಧ್ಯ.

4. ನುಗ್ಗೆೆ ಕಾಯಿಯ ಪಲ್ಯವನ್ನು ಮಾಡಿ ಸೇವಿಸಿದರೆ, ತ್ವರಿತವಾಗಿ ಹೆಚ್ಚು ಪೌಷ್ಟಿಕಾಂಶವನ್ನು ಪಡೆಯಲು ಸಾಧ್ಯ.

5. ಒಣಗಿಸಿದ ನುಗ್ಗೆೆ ಬೀಜಗಳನ್ನು, ಹದವಾಗಿ ಹುರಿದು, ಕಡಲೆ ಬೀಜದ ರೀತಿಯೇ ತಿನ್ನಬಹುದು.

6. ನುಗ್ಗೆೆಗಿಡದ ಬೇರನ್ನು ಅಸ್ತಮಾ, ಹೊಟ್ಟೆೆಯ ತೊಂದರೆ, ಅಸಿಡಿಟಿ ಮೊದಲಾದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಬಹುದು.

7. ನುಗ್ಗೆೆ ಬೀಜವು ಉತ್ತಮ ಜಲಪರಿಷೋಧಕ. ನೀರಿನಲ್ಲಿ ನಾಲ್ಕಾಾರು ನುಗ್ಗೆೆ ಬೀಜಗಳನ್ನು ಹಾಕಿ ಇಟ್ಟರೆ, ನೀರು ಶುದ್ಧವಾಗುತ್ತದೆ.

8. ನುಗ್ಗೆೆ ಎಲೆಗಳನ್ನು ಉತ್ತಮ ಆರೋಗ್ಯಕ್ಕಾಾಗಿ, ಪೌಷ್ಟಿಕತೆಗಾಗಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಉಪಯೋಗಿಸಬಹುದು. ಭಾರತದ ಹಲವು ಪ್ರದೇಶಗಳಲ್ಲಿ ನುಗ್ಗೆೆ ಎಲೆಗಳನ್ನು, ಎಲೆಯ ರಸವನ್ನು ಔಷಧವಾಗಿಯೂ ಉಪಯೋಗಿಸುವರು. ಎಲೆಗಳನ್ನು ಆಹಾರದ ರೂಪದಲ್ಲಿ ಸೇವಿಸುವುದರಿಂದ, ಕ್ಯಾಲ್ಷಿಯಂ, ಪೊಟಾಶಿಯಂ ಮತ್ತು ಹಲವು ವಿಟಮಿನ್‌ಗಳನ್ನು ಪಡೆಯಬಹುದು.

9. ಆಯುರ್ವೇದ ಮತ್ತು ನಾಟಿ ಔಷಧ ಪದ್ದತಿಯಲ್ಲಿ ನುಗ್ಗೆೆ ಬೀಜ, ನುಗ್ಗೆ ಎಲೆಗಳ ಉಪಯೋಗ ಬಹಳ.

10. ನುಗ್ಗೆಕಾಯಿ ಮತ್ತು ನುಗ್ಗೆೆ ಸೊಪ್ಪನ್ನು ಅಡುಗೆಯಲ್ಲಿ ಬಳಸುವ ಮೂಲಕ ನುಗ್ಗೆೆಯಲ್ಲಿರುವ ವಿವಿಧ ಸ್ವರೂಪದ ಪೌಷ್ಟಿಕಾಂಶಗಳನ್ನು ಸುಲಭವಾಗಿ ಪಡೆಯಬಹುದು.

LEAVE A REPLY

Please enter your comment!
Please enter your name here