ಖಾಲಿ ಹೊಟ್ಟೆಗೆ ಒಂದು ಚಮಚ ತುಪ್ಪ ಸೇವಿಸುವುದರಿಂದ ಏನು ಆಗುತ್ತೆ ಗೊತ್ತಾ.?

0
2

ಕೋಶಗಳು ಕಾರ್ಯನಿರ್ವಹಣೆಗೆ ಬಲ ನೀಡುವುದು

ವೇದಗಳ ಪ್ರಕಾರ ರಸ ಎನ್ನುವುದು ಸಂಪೂರ್ಣ ಕೋಶಗಳ ಪೋಷಣೆಗೆ ಬೇಕಾಗಿರುವಂತಹ ಪ್ರಮುಖ ಭಾಗವಾಗಿದೆ. ಇದು ಎಲ್ಲಾ ಕೋಶಗಳನ್ನು ಸಂಪರ್ಕಿಸುವುದು. ತುಪ್ಪ ಸೇವಿಸು ವುದರಿಂದ ಕೋಶಗಳಿಗೆ ಪೋಷಣೆ ಸಿಗುವುದು. ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಅದರಿಂದ ಕೋಶಗಳ ಪುನರುಜ್ಜೀವನಕ್ಕೆ ನೆರವಾಗುವುದು ಮತ್ತು ಇದರಿಂದ ದೇಹದ ಶಮನ ಕ್ರಿಯೆಗೆ ಇದು ಸಹಕಾರಿಯಾಗುವುದು.

ಚರ್ಮದ ಕಾಂತಿ

ವ್ಯಕ್ತಿಯ ನೈಸರ್ಗಿಕ ಸೌಂದರ್ಯವು ದೇಹದ ಒಳಗಿನಿಂದ ಬರುತ್ತದೆ ಎಂದು ಹೇಳಲಾಗುತ್ತದೆ. ನೀವು ಎಷ್ಟೇ ರೀತಿಯ ಕಾಸ್ಮೆಟಿಕ್ ಗಳನ್ನು ಬಳಸಿಕೊಂಡರೂ ಅದರಿಂದ ಯಾವುದೇ ರೀತಿಯ ಪ್ರಯೋಜನ ವಿಲ್ಲ. ಯಾಕೆಂದರೆ ನೀವು ಸರಿಯಾಗಿ ಆಹಾರ ಸೇವನೆ ಮಾಡದೆ ಇದ್ದರೆ ಆಗ ಚರ್ಮವು ಆರೋಗ್ಯವಾಗಿ ಇರುವುದಿಲ್ಲ. ನೀವು ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ತುಪ್ಪ ಹಾಕಿ ಸೇವನೆ ಮಾಡಿದರೆ ಅದರಿಂದ ಕೋಶಗಳು ಪುನರುಜ್ಜೀವನ ಗೊಳ್ಳುವುದು ಮತ್ತು ಚರ್ಮವು ಕೂಡ ಯೌವನ ಪಡೆಯುವುದು. ಚರ್ಮ ದಡಿಯಲ್ಲಿ ಕಾಲಜನ್ ಶೇಖರಣೆಯನ್ನು ಇದು ಹೆಚ್ಚು ಮಾಡುವುದು ಮತ್ತು ನೆರಿಗೆಯು ಮಾಯವಾಗುವುದು. ಚರ್ಮ ಮೊಶ್ಚಿರೈಸ್ ಆಗುವುದು ಮತ್ತು ಬಿಗಿಯಾಗಿ ಕಾಣುವುದರಿಂದ ಸೌಂದರ್ಯ ಹೆಚ್ಚಾಗುವುದು.

ಸಂಧಿವಾತ ಮತ್ತು ಗಂಟು ನೋವು ತಡೆಯುವುದು

ಇದು ನೈಸರ್ಗಿಕವಾಗಿರುವಂತಹ ಲ್ಯುಬ್ರಿಕೆಂಟ್ ಆಗಿದೆ. ತುಪ್ಪ ಸೇವನೆ ಮಾಡಿದರೆ ಆಗ ಅದರಿಂದ ಗಂಟುಗಳಲ್ಲಿ ಲ್ಯುಬ್ರಿಕೆಂಟ್ ಶೇಖರಣೆ ಆಗುವುದು ಮತ್ತು ಮೂಳೆಗಳು ಸರಿಯಾದ ರೀತಿಯಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಂತೆ ಮಾಡುವುದು. ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಇದೆ. ಇದು ಅಸ್ಥಿರಂಧ್ರತೆಯನ್ನು ತಡೆಯುವುದು. ಗಂಟಿನ ಮೂಳೆಗಳ ಅಂಗಾಂಶಗಳು ಜೀವನಪೂರ್ತಿ ತುಂಬಾ ಆರೋಗ್ಯವಾಗಿ ಇರುವುದು.

ಕೊಲೆಸ್ಟ್ರಾಲ್ ತಗ್ಗಿಸುವುದು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆ ಮಾಡುವ ಮೂಲಕ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಮೇಲೆ ಹೇಳಿರುವಂತೆ ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಅಧಿಕ ಪ್ರಮಾಣದಲ್ಲಿ ಇರುವ ಕಾರಣದಿಂದಾಗಿ ಇದು ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ತೆಗೆಯುವುದು. ಇದರಿಂದಾಗಿ ನಿಮ್ಮ ಹೃದಯ ವ್ಯವಸ್ಥೆಯು ತುಂಬಾ ಆರೋಗ್ಯವಾಗಿ ಇರುವುದು. ನಿಮ್ಮ ರಕ್ತದೊತ್ತಡ ಕೂಡ ಸಮತೋಲನದಲ್ಲಿ ಇರುವುದು.

ಮೆದುಳಿನ ಕೋಶಗಳ ಚಟುವಟಿಕೆ

ಮೆದುಳಿನ ಕೋಶಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೊಬ್ಬು ತುಂಬಾ ಮುಖ್ಯವಾಗಿ ಬೇಕು.. ತುಪ್ಪವು ಕೊಬ್ಬನ್ನು ಹೊಂದಿರುವಂತಹ ಪ್ರಮುಖ ಆಹಾರವಾಗಿದೆ ಮತ್ತು ಇದು ಮೆದುಳಿನ ಕೋಶಗಳು ಸರಿಯಾಗಿ ಕೆಲಸ ಮಾಡಲು ಮತ್ತು ಚಟುವಟಿಕೆಯಿಂದ ಇರಲು ನೆರವಾಗುವುದು. ತುಪ್ಪದಲ್ಲಿ ಇರುವಂತಹ ಕೊಬ್ಬು ನರಪ್ರೇಕ್ಷಕಗಳ ರಚನೆಗೆ ನೆರವಾಗುವುದು ಮತ್ತು ನರಗಳು ಸರಿಯಾಗಿ ಕೆಲಸ ಮಾಡುವಂತೆ ಮಾಡುವುದು. ಇದರಿಂದ ನೆನಪಿನ ಶಕ್ತಿಯು ಸರಿಯಾಗಿ ಇರುವುದು.

ಲ್ಯಾಕ್ಟೋಸ್ ಅಸಹಿಷ್ಣುತೆ ಮೆರೆತುಬಿಡಿ

ಹಾಲಿನ ಪ್ರೋಟೀನ್ ನ ಹೀರಿಕೊಳ್ಳುವ ಸಮಸ್ಯೆ ಇರುವಂತಹ ಜನರು ತುಪ್ಪವನ್ನು ಸೇವನೆ ಮಾಡಬಹುದು. ಇದರಿಂದ ಯಾವುದೇ ಚಿಂತೆ ಇಲ್ಲ ಮತ್ತು ಹಾಲಿನ ಲಾಭವನ್ನು ಇದರಿಂದ ಪಡೆಯಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆ ಮಾಡಿ ಮತ್ತು ಆರೋಗ್ಯ ಮತ್ತು ಚುರುಕಾಗಿರಿ.

LEAVE A REPLY

Please enter your comment!
Please enter your name here