ದಿನಾ ʼಚಪಾತಿʼ ತಿನ್ನುವುದರಿಂದ ಲಾಭವೇನು ಗೊತ್ತಾ.?

0
8

ಪ್ರತಿ ಮನೆಯಲ್ಲಿಯೂ ಚಪಾತಿಯನ್ನು ಮಾಡುತ್ತಾರೆ. ಅದರಲ್ಲಿಯೂ ಮನೆಯಲ್ಲಿ ಮಧುಮೇಹಿಗಳಿದ್ದರೆ ಇದೇ ಫುಡ್. ಯಾಕೆಂದರೆ ಗೋಧಿಯಲ್ಲಿ ಹಲವಾರು ಪೌಷ್ಟಿಕಾಂಶವಿದ್ದು, ಆರೋಗ್ಯಕ್ಕೆ ಒಳಿತು ಉಂಟು ಮಾಡುತ್ತದೆ. ಚಪಾತಿಯಲ್ಲಿ ವಿಟಮಿನ್ ಬಿ, ಇ, ಸತು, ಅಯೋಡಿನ್, ಸಿಲಿಕಾನ್, ಪೊಟ್ಯಾಷಿಯಮ್, ಕ್ಯಾಲ್ಸಿಯಂ ಮತ್ತು ಇನ್ನಿತರ ಅಂಶಗಳಿವೆ. ಇವು ಮನುಷ್ಯ ಆರೋಗ್ಯದಿಂದಿರಲು ಸಹಕರಿಸುತ್ತದೆ.

ಹಾಗೇ ಚರ್ಮ ಆರೋಗ್ಯದಿಂದ ಇರಲು ಗೋಧಿ ಬೇಕು. ಇದರಲ್ಲಿರುವ ಸತು ಮತ್ತು ಇನ್ನಿತರ ಅಂಶಗಳು ಸ್ಕಿನ್ ಆರೋಗ್ಯದಿಂದ ಇರಲು ಸಹಕರಿಸುತ್ತದೆ. ಇದರಿಂದ ಸ್ಕಿನ್ ಗ್ಲೋ ಆಗುತ್ತದೆ. ಪ್ರತಿದಿನ ಮುಂಜಾನೆ ಉಳಿದ ಚಪಾತಿಯನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಬೇಕು. ಇದು ರಕ್ತದೊತ್ತಡವನ್ನು ನಿವಾರಿಸುತ್ತದೆ. ಚಪಾತಿ ಮತ್ತು ಹಾಲು ಸೇವನೆ ಗ್ಯಾಸ್ಟ್ರಿಕ್‌ಗೆ ಒಳ್ಳೆ ಮದ್ದು.

 

View this post on Instagram

 

#keralanadanfood #brakefast #chapathi

A post shared by sreekanth (@iamsreekanth_satheesan) on

ಚಪಾತಿಯ ಪೌಷ್ಟಿಕಾಂಶಗಳು ಫಿಟ್ ಆಗಿರಲು ಸಹಕರಿಸುತ್ತದೆ. ಅಲ್ಲದೆ ಹೆಚ್ಚು ಸುಸ್ತು, ಆಯಾಸ ಉಂಟಾಗುವುದಿಲ್ಲ.ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಆರೋಗ್ಯದಿಂದಿರಲು ಸಹಕರಿಸುತ್ತದೆ. ಗೋಧಿ ಚಪಾತಿ ಸೇವಿಸಿದರೆ ಬೇಗ ಹಸಿವಾಗುವುದಿಲ್ಲ. ಜೊತೆಗೆ ಕೊಲೆಸ್ಟ್ರಾಲ್ ದೇಹ ಸೇರುವುದಿಲ್ಲ.

LEAVE A REPLY

Please enter your comment!
Please enter your name here