BBC ನ್ಯೂಸ್ ವರದಿ:-300ಕ್ಕೂ ಅಧಿಕ ಉಗ್ರರು ಸತಿಲ್ಲ ಇದು ಸುಳ್ಳು ಸುದ್ದಿ, ಭಾರತವನ್ನ ಜೋಕರ್ ಮಾಡಿದ ಮಾಧ್ಯಮಗಳು

0
908

ತುಂಬಾ ಸೀರಿಯಸ್ ವಿಷಯ…

ಇಂದು ಭಾರತದ ಮಾನ ಮರ್ಯಾದೆಯನ್ನ ಮೂರಾಬಟ್ಟೆ ಮಾಡಿದ ಕೀರ್ತಿ ನಮ್ಮ ಮಾಧ್ಯಮಗಳಿಗೆ ಸಲ್ಲಬೇಕು..

ಮೊನ್ನೆ ನಡೆದ ವಾಯುಸೇನಾ ದಾಳಿಯಲ್ಲಿ 300 ಜನ ಉಗ್ರರು ಸತ್ತಿದ್ದಾರೆ , ಪಾಕ್ ಭಯಭೀತ ಗೊಂಡಿದೆ , ತಕ್ಕ ಪ್ರತ್ಯುತ್ತರ ನೀಡಿದೆ ನಮ್ಮ ಭಾರತ… ಹೀಗೆಲ್ಲ ಮಾತನಾಡಿ . ರಾತ್ರಿ ಪೂರ ಮೋದಿ ಈ ಸರ್ಜಿಕಲ್ ಸ್ಟ್ರೈಕ್ ನೋಡುತ್ತಲೇ ಇದ್ದರು ಅಂತಲೂ ತೋರಿಸಿ “ಸರ್ಜಿಕಲ್‌ಸ್ಟ್ರೈಕ್ 2.0” ಅಂತ ನಾಮಕರಣವೂ ಮಾಡಿದ್ದರು…
ಯಾವುದೊ ಹಳೇ ವೀಡಿಯೊವನ್ನು ತೋರಿಸಿ . ಇದೇ ವಾಯುಸೇನೆಯಿಂದಾದ ದಾಳಿ ಅಂತೆಲ್ಲಾ ಜನರನ್ನ ಯಾಮಾರಿಸಿದರು.. ಎಷ್ಟು ಬೇಜವಾಬ್ದಾರಿ ನಾಲಾಯಕ್ ಮಾಧ್ಯಮಗಳು ಅಂದ್ರೆ ಇವುಗಳಿಗೆ ಪತ್ರಿಕೋದ್ಯಮದ ಮೌಲ್ಯಗಳೇ ತಿಳಿದಿಲ್ಲವೇನೊ ಎನ್ನುವಷ್ಟರ ಮಟ್ಟಿಗೆ ಅಯೋಗ್ಯರಾಗಿಬಿಟ್ಟಿದ್ದಾರೆ….

ನಿಜಕ್ಕೂ ಪಾಕಿಸ್ಥಾನದಲ್ಲಿ ಯಾವುದೇ ಸಾವು ಸಂಭವಿಸಿಲ್ಲ… ಇದನ್ನ BBC ನ್ಯೂಸ್ ವರದಿ ಮಾಡಿದೆ… ರಾತ್ರಿ ಸುಮಾರು ಎರಡು ಗಂಟೆಯ ತನಕ ಪಾಕಿಸ್ತಾನದ ಕರಾಚಿ,ಲಾಹೋರ್ ಸುಮಾರು 100+ ಫೇಸ್ಬುಕ್ ಅಕೌಂಟ್ ಗಳನ್ನ ನೋಡಿದೆ…
ಒಂದೇ ಒಂದು ಶ್ರದ್ಧಾಂಜಲಿ ಪೋಸ್ಟ್ ಇಲ್ಲ ..

ಬದಲಾಗಿ… ತುಂಬಾ ಟ್ರೋಲ್ ಮಾಡಿದ್ದಾರೆ… ತುಂಬಾ ಬೇಜಾರು ಸಿಟ್ಟು ಬರತ್ತೆ.. ಆ ಮಟ್ಟಿಗೆ ಇಡೀ ಭಾರತವನ್ನ ಟ್ರೋಲ್ ಮಾಡ್ತಿದಾರೆ…

ಒಬ್ಬ ಯಾವ್ದೊ ವೀಡಿಯೊ ಹಾಕಿ ಟ್ರೋಲ್ ಮಾಡಿದಾನೆ… ಮತ್ತೊಬ್ಬ ಸ್ವಚ್ಛಭಾರತ್ ರೀತಿ ನಮ್ಮ ಸ್ಥಳವನ್ನೂ ಸ್ವಚ್ಛಮಾಡಿದ್ದಕ್ಕೆ ಥ್ಯಂಕ್ಸ್ ಹೇಳ್ತಾನೆ.
ಇನ್ನೊಬ್ಬ 400kg rdx = 44 ಸೈನಿಕರು,
1000kg rdx= 10 ಮರಗಳು.. ಅಂತ ಬರೀತಾನೆ.. ( ತುಂಬಾ ಬೇಸರವಾದ ಕಮೆಂಟಿದು).
ನಮ್ಮ ಸೈನ್ಯಕ್ಕೆ ತಾಖತ್ತು ಇಲ್ಲ ಪಾಕ್ ನ ಹೊಡೆಯೋಕೆ ಎಂದು ಕೇಕೆ ಹಾಕ್ತಿದಾರೆ…

ಇನ್ನೊಬ್ಬ “ಭಾರತ ಸದ್ಯಕ್ಕೆ ಪ್ರಪಂಚಕ್ಕೆ ಒಳ್ಳೆ ಎಂಟರ್‌ಟೈನ್‌ಮೆಂಟ್ ಕೊಡ್ತಿದೆ. ಅಂತ ಬರೆದವ್ನೆ… ಕತ್ತಲಲ್ಲೇ 300 ಹೆಣಗಳನ್ನ ನೋಡಿದ ಭಾರತ ಎಂಬಂತೆಯೂ ಮಾತನಾಡಿ
ಭಾರತವನ್ನ ಜೋಕರ್ ರೀತಿ ಮಾಡಿದ್ದಾರೆ… ಇನ್ನೂ ಮೋದಿಯನ್ನ ಎಷ್ಟು ಆಡಿಕೊಳ್ತಿದಾರೆ ಎಂಬುದನ್ನ ಹೇಳಲೇ ಬೇಕಿಲ್ಲ…

ಇದೆಲ್ಲದ್ದಕ್ಕೂ ಕಾರಣ ಕೆಲವೊಂದು ಹೇಸಿಗೆ ತಿನ್ನುವ ಮಾಧ್ಯಮಗಳು… ದೇಶದ ಮರ್ಯಾದೆಯನ್ನ ಅಂತರಾಷ್ಟ್ರ ಮಟ್ಟದಲ್ಲಿ ಹರಾಜಿಗೆ ಇಟ್ಟುಬಿಟ್ರು… ದೇಶ ಪ್ರೇಮಿಗಳು ಅಂತ ಯಾರು ಯಾರು ಇದ್ದೀರೊ ದಯವಿಟ್ಟು ಇಂತಹ ಚಾನಲ್ ಗಳನ್ನ ನೋಡಬೇಡಿ. ಮೊದಲು ಪೆಂಗಣ್ಣ , ಸುವರ್ಣ ನೋಡುವುದನ್ನ ಬಿಟ್ಟುಬಿಡಿ ದಯವಿಟ್ಟು‌‌‌…

ಭಾರತದ ಮರ್ಯಾದೆ ಕಳೆದ ಮೀಡಿಯಾಗಳಿಗೆ ನನ್ನದೊಂದು ಯಕ್ಕಡ…

– Murali Maluru

LEAVE A REPLY

Please enter your comment!
Please enter your name here