ಅಂಬರೀಶ್ ಅವರ ಪತ್ನಿ ಸುಮಲತಾ ಅವರ ಸಾಲ ಎಷ್ಟು ಗೊತ್ತಾ? ಸುದ್ದಿ ಓದಿ.

0
210

ಸುಮಲತಾ ಅಂಬರೀಶ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಅಂಬರೀಷ್ ಅವರು ನಿಧನ ಹೊಂದಿದ ನಂತರ ಬಂದಿರುವ ಲೋಕಸಭಾ ಚುನಾವಣೆಯ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

 

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ತಮ್ಮ ಸ್ಥಿರ ಹಾಗೂ ಚರಾಸ್ತಿಗಳ ಒಟ್ಟು ಮೌಲ್ಯ 23.50 ಕೋಟಿ ಎಂದು ಅಫಿಡವಿಟ್‌ನಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ. ಈ ಆಸ್ತಿಯಲ್ಲಿ ಪತಿ ದಿ.ಅಂಬರೀಶ್ ಹೆಸರಲ್ಲಿರುವ ಆಸ್ತಿಯೂ ಸೇರಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಒಂದು ಮನೆ, ಉತ್ತರಹಳ್ಳಿಯಲ್ಲಿ ಒಂದು ಮನೆ, ಪಾಲುದಾರಿಕೆಯಲ್ಲಿರುವ ಅಪಾರ್ಟ್‌ಮೆಂಟ್‌ ಸೇರಿದಂತೆ ಒಟ್ಟಾರೆ ಮೌಲ್ಯ 17.72 ಕೋಟಿ, ಅಲ್ಲದೇ ಒಂದೂವರೆ ಕೋಟಿ ರು. ಮೌಲ್ಯದ 5.6 ಕೆ.ಜಿ ಚಿನ್ನ, 12 ಲಕ್ಷ ರು. ಮೌಲ್ಯದ 31 ಕೆಜಿ ಬೆಳ್ಳಿ, ವಿವಿಧೆಡೆ 1.97 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ವಾಣಿಜ್ಯ ಮಳಿಗೆಗಳ ಒಟ್ಟು ಮೌಲ್ಯ 41 ಲಕ್ಷ ಎಂದು ಘೋಷಣೆ ಮಾಡಿಕೊಂಡಿದ್ದಾರೆ.

ತೀವ್ರ ಪೈಪೋಟಿಯ ನಡುವೆಯೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅವರು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ಮೌಲ್ಯವನ್ನು ಬಹಿರಂಗಪಡಿಸಿದ್ದಾರೆ. ಸುಮಲತಾ ಅವರ ಹೆಸರಿನಲ್ಲಿರುವ ಒಟ್ಟು ಸಾಲದ ಮೊತ್ತ 14 ಕೋಟಿ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here