ಕಿಚ್ಚ ಸುದೀಪ್‍ ಗೆ ಮೊದಲನೇ ಬಾರಿಗೆ ಲವ್‍ ಆಗಿದ್ದು ಈ ನಟಿ ಮೇಲೆ0ತೆ ! ಯಾರು ಗೊತ್ತಾ ..?

0
240

ಕನ್ನಡ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್‍ ಎಂದರೆ ಯಾರಿಗೆ ಗೊತ್ತಿಲ್ಲಾ ಹೇಳಿ. ಸ್ಯಾಂಡಲ್‍ ವುಡ್‍ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ 6 ಅಡಿಯ ನಟ. ಇವರು ಕನ್ನಡದಲ್ಲಿ ಅಷ್ಟೇ ಅಲ್ಲ, ಬೇರೆ ಬೇರೆ ಭಾಷೆಯ ಚಿತ್ರಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಇಡೀ ಭಾರತ ಅಷ್ಟೇ ಅಲ್ಲದೇ, ಬೇರೆ ದೇಶದ ಹಾಲಿವುಡ್‍ ಸಿನಿಮಾದಲ್ಲೂ ಸುದೀಪ್‍ ನಟಿಸುತ್ತಿದ್ದಾರೆ. ಆದರೆ ಇವರು ರಹಸ್ಯವಾಗಿ ಟಾಪ್‍ ಹೀರೋಯಿನ್‍ ನನ್ನು ಪ್ರೀತಿಸುತ್ತಿದ್ದರು ಎಂದರೆ ಆಶ್ಚರ್ಯವಾಗಬಹುದು.

 

 

View this post on Instagram

 

#No1YaariShivanna #KicchaSudeep #Prem #TheVillain #CiniCuts

A post shared by Cini_Cuts (@cini_cuts) on

 

ಹೌದು ನಟ ಸುದೀಪ್‍ ಅವರಿಗೂ ಈ ಟಾಪ್‍ ನಟಿಯ ಮೇಲೆ ಲವ್‍ ಆಗಿತ್ತು. ಕನ್ನಡ ಚಿತ್ರರಂಗದಲ್ಲಿ ನಿಮಗೆ ಯಾವ ಹೀರೋ ಮೇಲೆ ಕ್ರಶ್‍ ಆಗಿದೆ? ಎಂದು ಕೇಳಿದ ಪ್ರಶ್ನೆಗೆ ಬಹುತೇಕ ನಟಿಯರು ಸುದೀಪ್‍ ಹೆಸರನ್ನೇ ಹೇಳುತ್ತಾರೆ. ಸುದೀಪ್‍ ಇರುವ ಎತ್ತರ, ವಾಯ್ಸ್‍, ಸ್ಟಂಟ್ಸ್‍, ನಟನೆ ಎಂತಹ ಹುಡುಗಿಯರ ನಿದ್ರೆಯನ್ನೂ ಕೆಡಿಸುತ್ತದೆ. ಈ ಸುರಸುಂದರಾಂಗ, ಸ್ಟೈಲ್‍ ಐಕಾನ್‍ಗೆ ಕನ್ನಡ ಚಿತ್ರರಂಗದ ನಟಿ ಮೇಲೆ ಕ್ರಶ್‍ ಆಗಿತ್ತಂತೆ.

ಯಾರಿರಬಹುದು ಅಂತಾ ತಲೆಕೆಡಿಸಿಕೊಳ್ಳುತ್ತಿದ್ದೀರಾ? ಕನಸಿನ ರಾಣಿ ಮಾಲಾಶ್ರೀ ಅವರ ಮೇಲೆ ಸುದೀಪ್‍ ಗೆ ಕ್ರಶ್‍ ಆಗಿತ್ತಂತೆ. ಹಾಗೆಂದು ಸ್ವತಃ ಸುದೀಪ್‍ ಅವರೇ ಹೇಳಿಕೊಂಡಿದ್ದಾರೆ. ಸ್ಟಾರ್‍ ಸುವರ್ಣ ವಾಹಿನಿಯಲ್ಲಿ ಶಿವರಾಜ್‍ಕುಮಾರ್‍ ನಡೆಸಿಕೊಡುತ್ತಿದ್ದ, ನಂ.1 ಯಾರಿ ವಿತ್‍ ಶಿವಣ್ಣ ಕಾರ್ಯಕ್ರಮದಲ್ಲಿ ಈ ಮಾಹಿತಿಯನ್ನು ರಿವೀಲ್‍ ಮಾಡಿದ್ದರು.

ಕನ್ನಡ ಚಿತ್ರರಂಗದಲ್ಲಿ ನಿಮ್ಮ ಫಸ್ಟ್‍ ಕ್ರಶ್‍ ಯಾರು ಎಂದು ಶಿವಣ್ಣ ಕೇಳಿದ ಪ್ರಶ್ನೆಗೆ ಮಾಲಾಶ್ರೀ ಎಂದು ಉತ್ತರಿಸಿದ್ದರು.

 

 

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here