ಮಗನ ಓದಿಗಾಗಿ ಗೋವಾಕ್ಕೆ ಗುಳೆ ಹೋದ ಪಾಲಕರು–ಪ್ರೀತಿಗಾಗಿ ಆತ್ಮಹತ್ಯೆ ಮಾಡಿಕೊಂಡ ಮಗ

0
6

ಮಗ ಚನ್ನಾಗಿ ಓದಿ ದೊಡ್ಡ ವ್ಯಕ್ತಿಯಾಗಲಿ ಎಂದು ಕನಸು ಕಂಡು ಗೋವಾಕ್ಕೆ ಗುಳೆ ಹೋದರೆ, ಇತ್ತ ಮಗ ಪ್ರೀತಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹುನಗುಂದ ತಾಲೂಕಿನ ತುರಡಗಿ ಗ್ರಾಮದ ಚಂದ್ರಶೇಖರ್ ಮಾದರ(18) ಪ್ರೀತಿಗಾಗಿ ನೇಣಿಗೆ ಕೊರಳೊಡ್ಡಿದ ಯುವಕ. ಪ್ರೀತಿಸುವುದು ಬಿಟ್ಟು ಚನ್ನಾಗಿ ಓದು ಎಂದು ಬುದ್ಧಿವಾದ ಹೇಳಿದ್ದೇ ಈಗ ಪಾಲಕರಿಗೆ ಮಗನನ್ನು ಕಳೆದುಕೊಳ್ಳುವ ದುಃಖ ನೀಡಿದೆ. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ವಿಜಯಪುರದಲ್ಲಿ ಡಿಪ್ಲೊಮಾ ಓದುತ್ತಿದ್ದ. ಮಾವನ ಮಗಳನ್ನೇ ಪ್ರೀತಿ ಮಾಡುತ್ತಿದ್ದು, ಇವನ ಪ್ರೀತಿ ವಿಚಾರ ಸಂಬಂಧಿಕರಿಗೆ ಗೊತ್ತಾಗಿದೆ. ಅದಕ್ಕೆ ಚಂದ್ರಶೇಖರ್‌ನನ್ನು ಮನೆಗೆ ಕರೆಸಿ ಚಿಕ್ಕವಯಸ್ಸಿಗೆ ಪ್ರೀತಿ, ಪ್ರೇಮ ಎಂದು ಸುತ್ತಾಡಬೇಡ. ಚನ್ನಾಗಿ ಓದಿ ದೊಡ್ಡ ವ್ಯಕ್ತಿಯಾಗಲಿ ಎಂದು ಕನಸು ಕಾಣುತ್ತಿದ್ದೇವೆ. ಹೀಗಾಗಿಯೇ ಗೋವಾಕ್ಕೆ ಗುಳಿ ಹೋಗಿ ನೀನಗಾಗಿ ದುಡಿಯುತ್ತಿದ್ದೇವೆ ಎಂದು ಬುದ್ಧಿವಾದ ಹೇಳಿದ್ದಾರೆ. ಇದಕ್ಕೆ ಬೇಸರ ವ್ಯಕ್ತಪಡಿಸಿದ ಚಂದ್ರಶೇಖರ್, ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಂಜೆ ಊರಿನಿಂದ ಹೊರಟ್ಟಿದ್ದ ಚಂದ್ರಶೇಖರ್, ದಾರಿ ಮಧ್ಯೆ ಗದ್ದನಕೇರಿ ಕ್ರಾಸ್ ಬಳಿ ವಿದ್ಯುತ್ ಕಂಬದ ಆ್ಯಂಕಲ್‍ಗೆ ಬ್ಯಾಗ್ ಸಮೇತ ನೇಣು ಹಾಕಿಕೊಂಡಿದ್ದಾನೆ. ಚಂದ್ರಶೇಖರ್ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆಂದು ಹೇಳಲಾಗುತ್ತಿದೆ. ಮಾಹಿತಿ ತಿಳಿದು ಬಾಗಲಕೋಟೆ ಗ್ರಾಮೀಣ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here