ಮದುವೆಯಾಗಿ ಮಾವನ ಮನೆಗೆ ಬಂದ ಸೊಸೆ ಇಡೀ ಕುಟುಂಬವನ್ನು ಪ್ರಜ್ಞೆ ತಪ್ಪಿಸಿದ ಬಳಿಕ ಮಾಡಿದ್ದನ್ನು ಕೇಳಿದರೆ ಶಾಕ್​ ಆಗ್ತಿರಾ!

0
3

ಹೊಸದಾಗಿ ಮನೆತುಂಬಿಸಿ ಕೊಂಡ ಸೊಸೆ ನಮ್ಮ ಬಾಳಿಗೆ ಬೆಳಕಾಗುವಳು ಎಂದು ನಂಬಿದ್ದ ಕುಟುಂಬವೊಂದಕ್ಕೆ ಆಕೆಯ ಕೃತ್ಯ ಕಂಡು ಇಂಥವಳೇ ನಮಗೆ ಸೊಸೆಯಾಗಿ ಬರಬೇಕಾ? ಎಂದು ಕಣ್ಣೀರಿಟ್ಟ ಆತಂಕಕಾರಿ ಘಟನೆಯೊಂದು ಉತ್ತರ ಪ್ರದೇಶದ ಬದೌನ್​ ಜಿಲ್ಲೆಯಲ್ಲಿ ನಡೆದಿದೆ.

ಆಗಿದ್ದೇನೆಂದರೆ… ಹೊಸದಾಗಿ ಮದುವೆಯಾಗಿ ಮಾವನ ಮನೆಗೆ ಬಂದ ಸೊಸೆ ರಾತ್ರಿಯ ಊಟಕ್ಕೆ ಮತ್ತು ಬರಿಸುವ ಮಾದಕ ವಸ್ತುಗಳನ್ನು ಬೆರಸಿ, ಇಡೀ ಕುಟುಂಬಕ್ಕೆ ಉಣಬಡಿಸಿದ ಬಳಿಕ ಮನೆಯಲ್ಲಿದ್ದ ನಗದ ಸೇರಿದಂತೆ ಚಿನ್ನಾಭರಣವನ್ನೆಲ್ಲಾ ದೋಚಿ ಪರಾರಿಯಾಗಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಈ ಘಟನೆ ಬದೌನ್​ ಜಿಲ್ಲೆಯ ದಟಗಾಂಜ್​ ಕೊಟ್ವಾಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಛೋಟಾ ಪರಾ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ನಡೆದಿದೆ ಎಂದು ನಗರ ಪೊಲೀಸ್​ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್​ ಶ್ರೀವಾತ್ಸವ್​ ಮಾಹಿತಿ ನೀಡಿದ್ದಾರೆ.

ಮದುವೆ ನಡೆದಿದ್ದು ಯಾವಾಗ?

ಡಿಸೆಂಬರ್​ 9ರಂದು ಪ್ರವೀಣ್​ ಜತೆ ಅಝಾಮ್​ಗಢದ ರಿಯಾ ಜತೆ ವಿವಾಹ ಕಾರ್ಯ ಜರುಗಿತು. ಬಳಿಕ ಮಾವನ ಮನೆಗೆ ಆಗಮಿಸಿದ ರಿಯಾ ಶುಕ್ರವಾರ ರಾತ್ರಿ ತನ್ನ ಚಾಲಾಕಿತನವನ್ನು ತೋರಿಸಿ, 70 ಸಾವಿರ ರೂ. ನಗದು ಮತ್ತು 3 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾಳೆ.

ಮಾವನ ಮನೆಯವರು ರಿಯಾ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರ್​ ಆರೋಪಿ ಪತ್ತೆಗೆ ಬಲೆಬೀಸಿದ್ದಾರೆ.

LEAVE A REPLY

Please enter your comment!
Please enter your name here