ಮನೆಯಲ್ಲಿ ಬೆಳ್ಳಿ ಪಾತ್ರೆ ಇಟ್ಟುಕೊಂಡರೆ ಏನಾಗುತ್ತೇ ಗೊತ್ತಾ ?

0
591

ಹೆಚ್ಚಿನ ಶ್ರೀಮಂತರು ತಮ್ಮ ಮನೆಯಲ್ಲಿ ಚಿನ್ನದ ಪಾತ್ರೆ, ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಚಿನ್ನಕ್ಕಿಂತ ಬೆಳ್ಳಿಯ ಬೆಲೆ ಕಡಿಮೆಯಾದರೂ ಮನೆಯಲ್ಲಿ ಬೆಳ್ಳಿ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಮನುಷ್ಯನ ಅದೃಷ್ಟ ಬದಲಾಗುತ್ತದೆ.

ಜ್ಯೋತಿಷ್ಯದ ಪ್ರಕಾರ ಚಂದ್ರ ಹಾಗೂ ಶುಕ್ರ ಬೆಳ್ಳಿಯ ಮೇಲೆ ಅಧಿಪತಿಗಳಾಗಿರುವುದರಿಂದ ಯಾವ ವ್ಯಕ್ತಿ ಬೆಳ್ಳಿ ವಸ್ತುಗಳನ್ನು ಬಳಸ್ತಾನೋ ಆ ವ್ಯಕ್ತಿಯ ಜಾತಕದಲ್ಲಿ ಚಂದ್ರ ಹಾಗೂ ಶುಕ್ರ ಪ್ರಬಲರಾಗ್ತಾರೆ. ಯಾರ ಮನೆಯಲ್ಲಿ ಬೆಳ್ಳಿ ಪಾತ್ರೆ ಇರುತ್ತದೆಯೋ ಅಲ್ಲಿ ಸುಖ, ಶಾಂತಿ ಇರುತ್ತದೆ. ಧನ-ಸಂಪತ್ತು ಕೂಡ ನಿರಂತರವಾಗಿ ಹೆಚ್ಚಳವಾಗುತ್ತದೆ.

ಕರ್ಕ, ವೃಶ್ಚಿಕ, ಮೀನ ರಾಶಿಯವರಿಗೆ ಬೆಳ್ಳಿ ಶುಭ ಪರಿಣಾಮ ನೀಡುತ್ತದೆ. ಮೇಷ, ಸಿಂಹ ಮತ್ತು ಧನು ರಾಶಿಯವರಿಗೆ ಬೆಳ್ಳಿ ಒಳ್ಳೆಯದಲ್ಲ. ಉಳಿದ ರಾಶಿಯವರಿಗೆ ಸಾಮಾನ್ಯ ಪರಿಣಾಮ ಬೀರುತ್ತದೆ. ಬೆಳ್ಳಿ ಪಾತ್ರೆಯಲ್ಲಿ ಆಹಾರ ಸೇವನೆ ಮಾಡುವುದು ತನು, ಮನ, ಧನಕ್ಕೆ ಬಹಳ ಒಳ್ಳೆಯದು. ಇದು ದೇಹಕ್ಕೆ ತಂಪು ನೀಡಿ ಶರೀರದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.

LEAVE A REPLY

Please enter your comment!
Please enter your name here