ಮದುವೆಯಾದ ಒಂದು ವರ್ಷಕ್ಕೆ ಮೊದಲೇ ಗಂಡನಿಂದ ಬೇರ್ಪಟ್ಟ ನಟಿ ಶ್ವೇತಾ ಬಸು

0
7

ಬಾಲಿವುಡ್ ನಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡು ಇದೀಗ ಕಿರುತೆರೆಗಳಲ್ಲಿ ಮಿನುಗುತ್ತಿರುವ ನಟಿ ಶ್ವೇತಾ ಬಸು ಕಳೆದ ವರ್ಷ ಡಿಸೆಂಬರ್ 13 ರಂದು ರೋಹಿತ್ ಮಿತ್ತಲ್ ಅವರನ್ನು ವಿವಾಹವಾಗಿದ್ದರು, ಆದರೆ ಈಗ ಮದುವೆಯಾಗಿ 1 ವರ್ಷಕ್ಕಿಂತ ಮೊದಲೇ ಶ್ವೇತಾ ತನ್ನ ಗಂಡನಿಂದ ಬೇರೆಯಾಗುವುದಾಗಿ ಘೋಷಿಸಿದ್ದಾರೆ.

ಶ್ವೇತಾ ಇನ್ಸ್ಟಾಗ್ರಾಮ್ನಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ರೋಹಿತ್ ಮಿತ್ತಲ್ ಮತ್ತು ನಾನು ಪರಸ್ಪರ ಒಪ್ಪಿಗೆಯೊಂದಿಗೆ ನಮ್ಮ ವೈವಾಹಿಕ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ. ಹಲವಾರು ತಿಂಗಳುಗಳವರೆಗೆ ಅದರ ಬಗ್ಗೆ ಯೋಚಿಸಿದ ನಂತರ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

 

View this post on Instagram

 

A post shared by Shweta Basu Prasad (@shwetabasuprasad11) on

ಪ್ರತಿ ಪುಸ್ತಕವನ್ನು ಅದರ ಕವರ್ ನೋಡುವ ಮೂಲಕ ಓದಬಾರದು, ಇದರರರ್ಥ ಪುಸ್ತಕ ಸರಿ ಇಲ್ಲ. ಯಾರೂ ಅದನ್ನು ಓದಿಲ್ಲವೆಂದು ಅರ್ಥವಲ್ಲ. ಆದರೆ ಕೆಲವು ವಿಷಯಗಳನ್ನು ಹಾಗೇಯೇ ಬಿಡುವುದು ಉತ್ತಮ ಎಂದು ಶ್ವೇತಾ ಬರೆದಿದ್ದಾರೆ. ಅಂತಹ ಒಳ್ಳೆಯ ನೆನಪುಗಳನ್ನು ನನಗೆ ನೀಡಿದ ರೋಹಿತ್ ಅವರಿಗೆ ಧನ್ಯವಾದಗಳು. ನೀವು ನನಗೆ ಸ್ಫೂರ್ತಿ ನೀಡಿದ್ದೀರಿ. ನಿಮ್ಮ ಜೀವನವನ್ನು ಆನಂದಿಸಿ ಎಂದು ಬರೆದಿದ್ದಾರೆ.

LEAVE A REPLY

Please enter your comment!
Please enter your name here