ಚಂದನವನದ ನಟಿ ಶುಭಾ ಪೂಂಜಾ ಸ್ಟ್ರೆಸ್ ಆದಾಗ ಏನು ಮಾಡ್ತಾರೆ ಗೊತ್ತಾ?

0
16

ನಟಿ ಶುಭಾ ಪೂಂಜಾ ಸಾಕಷ್ಟು ಕಸರತ್ತುಗಳನ್ನು ಮಾಡಿ ಈಗ ದೇಹವನ್ನು ಫಿಟ್‌ಆಗಿ ಕಾಯ್ದುಕೊಂಡಿದ್ದಾರೆ. ಹೊಟ್ಟೆ ಭಾಗದಲ್ಲಿ ಬೊಜ್ಜು ಹೆಚ್ಚಾಗಿ, ನೋಡಲು ಚಂದ ಕಾಣುತ್ತಿಲ್ಲ, ಸ್ಕ್ರೀನ್ ಮೇಲೆಯೂ ಚೆಂದುಳ್ಳಿ ಚೆಲುವೆಯಾಗಿ ಕಾಣುತ್ತಿಲ್ಲ ಎಂದು ಆರು ತಿಂಗಳಿಂದ ಕಟ್ಟುನಿಟ್ಟಾಗಿ ಯೋಗ ಮಾಡುತ್ತಿದ್ದಾರೆ.

ತೂಕ ಕಡಿಮೆ ಮಾಡಿಕೊಳ್ಳುವುದು ಮುಖ್ಯವಲ್ಲ, ದೇಹ ಫಿಟ್ ಆಗಿರುವುದು ಮುಖ್ಯ ಎನ್ನುತ್ತಾರೆ ಅವರು. ‘ಆರು ತಿಂಗಳ ಹಿಂದೆ ಹೊಟ್ಟೆ ಭಾಗದಲ್ಲಿ ಬೊಜ್ಜು ಬಂದಿತ್ತು. ಸಿನಿಮಾ ಕ್ಷೇತ್ರದಲ್ಲಿ ಇರುವುದರಿಂದ ದೇಹದ ಫಿಟ್ನೆಸ್ ಮುಖ್ಯವಾಗುತ್ತದೆ. ದೇಹದ ಅನಗತ್ಯ ಕೊಬ್ಬು ಕರಗಿಸಿದ್ದರಿಂದ ಆಕ್ಟೀವ್ ಆಗಿದ್ದೇನೆ ಅನಿಸುತ್ತಿದೆ. ನಾನು ತೆಳ್ಳಗಿದ್ದಾಗ ಹಾಕಿಕೊಳ್ಳುತ್ತಿದ್ದ ಬಟ್ಟೆಗಳು ಈಗ ಬಳಸುತ್ತಿದ್ದೇನೆ. ಸ್ಕ್ರೀನ್ ಮೇಲೆ ನೋಡಲು ಚಂದ ಕಾಣುತ್ತಿದ್ದೇನೆ’ ಎನ್ನುತ್ತಾರೆ ಶುಭಾ.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

My world in my arms .

A post shared by shubha Poonja . (@shubhapoonja) on

ಇಂತಿಪ್ಪ ಶುಭಾ, ತಮ್ಮ ದೇಹದ ಫಿಟ್ನೆಸ್ಗಾಗಿ ಏನೆಲ್ಲಾ ಮಾಡಿದ್ದಾರೆ ಗೊತ್ತಾ?

ಬೆಳಿಗ್ಗೆ ಒಂದು ಗಂಟೆ ಯೋಗ ಮಾಡುತ್ತಾರೆ, ಸೂರ್ಯ ನಮಸ್ಕಾರ ಸೇರಿದಂತೆ ಹಲವು ಸರಳ ಆಸನಗಳನ್ನು ಮಾಡುತ್ತಾರಂತೆ. ಚಿತ್ರೀಕರಣದ ಸಂದರ್ಭದಲ್ಲಿ ಬಿಡುವು ಸಿಕ್ಕರೆ ಈಜುತ್ತಾರೆ. ಸೈಕಲ್ ಓಡಿಸುವುದು, ವಾಕಿಂಗ್ ಮಾಡುವುದನ್ನು ತಪ್ಪಿಸುವುದಿಲ್ಲವಂತೆ.

 

View this post on Instagram

 

@snabhi.#instgram #instadaily #kannadamovies #southmovies #

A post shared by shubha Poonja . (@shubhapoonja) on

 

ಆಹಾರ ಕ್ರಮ: ಬೆಳಿಗ್ಗೆ ಕುಚಿಲಕ್ಕಿ ಅನ್ನ, ಗಂಜಿ, ಮಧ್ಯಾಹ್ನ ನವಣೆ ಅಕ್ಕಿ ‍ಪೊಂಗಲ್, ಸಂಜೆ ಎರಡು ಚಪಾತಿ, ತರಕಾರಿ ಪಲ್ಯ. ಸಂಜೆ 7.30ಕ್ಕೆ ಚಪಾತಿ ಪಲ್ಯ. ಶುಭಾ ಸ್ಟ್ರೆಸ್ ನಿಂದ ಹೊರಬರಲು ತಮ್ಮ ಸಾಕುಪ್ರಾಣಿಗಳೊಂದಿಗೆ ಯಾರಿಗೂ ಹೇಳದೆ ಲಾಂಗ್ ಡ್ರೈವ್ ಹೋಗುತ್ತಾರಂತೆ. ಸುಮಾರು 2 ಗಂಟೆಗಳ‌ ಕಾಲ ಲಾಂಗ್ ಡ್ರೈವ್ ಮಾಡಿ ಆರಾಮ ಪಡೆದುಕೊಳ್ಳುತ್ತಾರಂತೆ.

 

View this post on Instagram

 

Beautiful #shubapoonja

A post shared by Cinema Step (@cinema.step) on

ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here