ಟಿಕೆಟ್ ನೀಡದ ಬಿಜೆಪಿ ವಿರುದ್ಧ ಕೆಂಡಕಾರಿದ ಶತ್ರುಘ್ನ ಸಿನ್ಹಾ ! ಏನ್ ಅಂತ ಬೈದ್ರೂ ಗೊತ್ತಾ ..?

0
286

ಬಿಜೆಪಿಯಲ್ಲಿ ಟಿಕೆಟ್ ಹಂತ ಹಂತವಾಗಿ ಬಿಡುಗಡೆಯಾಗ್ತಿದ್ದಂತೆ, ಅಸಮಾಧಾನ ಭುಗಿಲೇಳ್ತಿದೆ. ಟಿಕೆಟ್ ವಂಚಿತ ಹಾಲಿ ಸಂಸದ ಶತ್ರುಘ್ನ ಸಿನ್ಹಾ ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ತಮಗೆ ಟಿಕೆಟ್ ಸಿಕ್ಕಿಲ್ಲ ಅಂದ್ರೂ ಪರವಾಗಿಲ್ಲ. ಆದ್ರೆ ಬಿಜೆಪಿಯ ಹಿರಿಯ ನಾಯಕ ಎಲ್‍.ಕೆ.ಅಡ್ವಾಣಿಯವರಿಗೆ ಟಿಕೆಟ್ ನೀಡದೆ, ಪಕ್ಷ ದೊಡ್ಡ ಅನ್ಯಾಯ ಮಾಡಿದೆ ಅಂತಾ ಹರಿಹಾಯ್ದಿದ್ದಾರೆ.

 

 

ಬಿಹಾರದ 17 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ರೂ, ಹಾಲಿ ಸಂಸದ ಶತ್ರುಘ್ನ ಸಿನ್ಹಾ ಅವರಿಗೆ ಟಿಕೆಟ್‍ ನೀಡಿಲ್ಲ. ಹಾಗೆಯೇ ಗುಜರಾತ್‍ನ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಎಲ್‍.ಕೆ. ಅಡ್ವಾಣಿಯವರ ಬದಲು ಅಮಿತ್ ಶಾ ಅವರನ್ನು ಕಣಕ್ಕಿಳಿಸಲಾಗ್ತಿದೆ. ಇದು ಶತ್ರುಘ್ನ ಸಿನ್ಹಾರನ್ನು ಕೆರಳಿಸಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿನ್ಹಾ, ಕ್ರಿಯೆಗೆ ಪ್ರತಿಕ್ರಿಯೆ ಸಿಕ್ಕೇ ಸಿಗುತ್ತೆ, ಇದೂವರೆಗೂ ಬಿಜೆಪಿಯಲ್ಲಿದ್ದೆ, ಮುಂದೆ ಏನಾಗುತ್ತೆ ಅನ್ನೋದನ್ನ ಕಾದು ನೋಡಿ ಅಂತಾ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ. ಇದೇ ವೇಳೆ ಅಡ್ವಾಣಿಯವರಿಗೆ ಅನ್ಯಾಯವಾಗಿದ್ದನ್ನು ನಾನು ಖಂಡಿಸುತ್ತೇನೆ ಅಂತಾ ಆಕ್ರೋಶ ಹೊರಹಾಕಿದ್ದಾರೆ

LEAVE A REPLY

Please enter your comment!
Please enter your name here