ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಶ್ರದ್ಧಾ ಕಪೂರ್

0
7

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. 2020 ಶ್ರದ್ಧಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಶ್ರದ್ಧಾ ಕಪೂರ್ ತನ್ನ ಬಹುಕಾಲದ ಗೆಳೆಯ ರೋಹನ್ ರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ಈ ವಿಚಾರವಾಗಿ ಕೆಲ ದಿನಗಳ ಹಿಂದೆ ರೋಹನ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ನಾನು ಹಾಗೂ ಶ್ರದ್ಧಾ 9 ವರ್ಷಗಳಿಂದ ಪರಿಚಯರಿದ್ದೇವೆ. ಈಗ ಅದನ್ನು ಮುಂದೆ ತೆಗೆದುಕೊಂಡು ಹೋಗಬೇಕೆಂದು ಮನಸ್ಸು ಮಾಡಿದ್ದೇವೆ. ಮದುವೆ ದಿನಾಂಕ ಇನ್ನು ಖಚಿತವಾಗಿಲ್ಲ. ಆದರೆ 2020 ರಲ್ಲೇ ಮದುವೆ ಅಗಬೇಕೆಂದು ಮನಸ್ಸು ಮಾಡಿದ್ದೇವೆ ಎಂದಿದ್ದರು.

ಕೆಲ ವರ್ಷಗಳಿಂದ ಶ್ರದ್ಧಾ–ಫರಾನ್ ಅಖ್ತರ್ ಜೊತೆ ಅನೈತಿಕ ಸಂಬಂಧವಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅದರಿಂದ ಮನನೊಂದ ಶ್ರದ್ಧಾ ಪೋಷಕರೊಂದಿಗೆ ಮನೆ ಬದಲಾಯಿಸಿ ಹೊಸ ಜೀವನ ಆರಂಭಿಸಿದ್ದರು. 33 ವರ್ಷದ ಶ್ರದ್ಧಾಳಿಗೆ ತಂದೆ ತಾಯಿ ಮದುವೆ ಆಗುವಂತೆ ಒತ್ತಾಯ ಮಾಡಿದ್ದಕ್ಕೆ ತನ್ನ ಆಪ್ತ ಸ್ನೇಹಿತನೊಂದಿಗೆ ಮದುವೆ ಆಗಲು ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here