ಈ ನಟಿ ಕುಟುಂಬಗೋಸ್ಕರ ಮೈ ಮಾರಿ ಕೊಂಡಳು ನೋಡಿದ್ರೆ ಕುಟುಂಬವೇ ಆಕೆಯ ಹಣವನ್ನೆಲ್ಲ ಕಬಳಿಸಿತ್ತು! ಶಕೀಲಾ ಲೈಫ್ ಸ್ಟೋರಿ ಕೇಳಿದರೆ ಕಣ್ಣಲ್ಲಿ ನೀರು ಬರುತ್ತೆ!

0
1833

90ರ ದಶಕದಲ್ಲಿ ಮುದುಕರಿಂದ ಹಿಡಿದು ಯುವಕರ ವರೆಗೂ ನಿದ್ದೆ ಕೆಡಿಸಿ ಬಿಟ್ಟಿದ್ದ , ಈ ನಟಿ ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ಲು. ಪೋರ್ನ್ ಸ್ಟಾರ್ ಎನಿಸಿಕೊಂಡಿದ್ದ ಈಕೆಯ ಸಿನಿಮಾ ನೇಪಾಳಿ, ಚೀನಾ, ಸಿಂಹಿಳಿ ಸೇರಿದಂತೆ ವಿವಿಧ ವಿದೇಶಿ ಭಾಷೆಗಳಿಗೂ ಕೂಡ ಡಬ್ ಆಗ್ತಿತ್ತು. ಇದರಿಂದಾಗಿ ಆಕೆಗೆ ವಿದೇಶಗಳಲ್ಲಿಯೂ ಕೂಡಾ ಅಭಿಮಾನಿಗಳು ಹುಟ್ಟಿಕೊಂಡು ಬಿಟ್ಟಿದ್ರು ಯುವಕರ ಪಾಲಿನ ಕನಸಿನ ರಾಣಿಯಾಗಿದ್ಲು. ಈ ನಟಿ ಬೇರಾರೂ ಅಲ್ಲ ಅವರೇ ಶಕೀಲಾ ಬೇಗಮ್. ಇಂದಿನ ಲೇಖನದಲ್ಲಿ ಇವರ ಬಗ್ಗೆ ಮಾಹಿತಿಯನ್ನು ಹೇಳ್ತೀವಿ ಕೇಳಿ.

1975ರಲ್ಲಿ ಹೈದರಾಬಾದ್ನಲ್ಲಿ ಜನಿಸಿದ ಶಕೀಲ ಆರಂಭದ ಬದುಕು ಹೇಗಿತ್ತು..? ಆಕೆಯ ನಟನೆಯಿಂದ ಹಣ ಹೆಸರು ಮಾಡಿಕೊಂಡ ಘಟಾನುಘಟಿಗಳೇ ಮೋಸ ಮಾಡಿಬಿಟ್ಟಿದ್ರು ತೆರೆ ಮೇಲೆ ಮಿಂಚಿದ್ದ ಶಕೀಲ ಅವರ ನಿಜ ಜೀವನ ಗ್ಲಾಮರಸ್ ಆಗಿರಲಿಲ್ಲ.

 

 

ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ ಶಕೀಲ ಬಡತನದಲ್ಲಿಯೇ ಬೆಳೆದಿದ್ದವರು. ತಂದೆ ಕೂಲಿ ಕೆಲಸ ಮಾಡ್ತಿದ್ರು ತಾಯಿ ಗೃಹಿಣಿಯಾಗಿದ್ದರು ಪೋಷಕರ ದುಡಿಮೆಯಿಂದ ಹೊಟ್ಟೆ ಹೊರೆದುಕೊಳ್ಳುವುದು ಕಷ್ಟವಾಗುತ್ತಿತ್ತು.ಇಂತಹ ಸಂದರ್ಭದಲ್ಲಿ ಶಾಲೆಗೆ ಗುಡ್ ಬಾಯ್ ಹೇಳಿದ್ದ ಶಕೀಲಾ ಕುಟುಂಬದ ನೆರವಿಗಾಗಿ ದುಡಿಯಲು ಮುಂದಾಗ್ತಾರೆ. 1980ರ ದಶಕದ ಕೊನೆಯಲ್ಲಿ ಶಕೀಲಾ ತನ್ನ ಕುಟುಂಬ ನಿರ್ವಹಣೆಗೆ ಬೇಕಾದಷ್ಟು ದುಡಿಮೆ ಸಿಗದೇ ಕಷ್ಟ ಪಡ್ತಿದ್ರು.ಇವೆಲ್ಲಕ್ಕಿಂತ ಆಘಾತಕಾರಿಯಾದ ವಿಷಯ ಅಂದ್ರೆ ಹಣಕ್ಕಾಗಿ ವೇಶ್ಯಾವೃತ್ತಿ ನಡೆಸುವಂತೆ ತಾಯಿ ಶಕೀಲಾ ಅವರನ್ನು ಒತ್ತಾಯಿಸಿದ್ದರಂತೆ.

ಇದರ ಮಧ್ಯೆ ಆಕೆಯ ಮೈಮಾಟ ಮತ್ತು ಮುಖದ ಸೌಂದರ್ಯದ ಬಗ್ಗೆ ಹೊಗಳಿಕೆಗಳು ಕೇಳಿ ಬರತೊಡಗಿತು
ಇದರಿಂದಾಗಿ ಸಿನಿಮಾರಂಗ ಪ್ರವೇಶಿಸುವ ಬಗ್ಗೆ ಶಕೀಲಾ ಕನಸು ಕಾಣತೊಡಗಿದ್ಲು. ಇನ್ನು ಶಕೀಲಾ ಅವರ ಮೇಲೆ ಅಂದು ಹಾಟ್ ಬೆಡಗಿಯಾಗಿ ಸೆಕ್ಸ್ ಬಾಂಬ್ ಎಂದೇ ಖ್ಯಾತಿ ಗಳಿಸಿದ್ದ ಸಿಲ್ಕ್ ಸ್ಮಿತಾ ಪ್ರಭಾವ ಸಾಕಷ್ಟು ಬೀರಿತ್ತು.
ಬಿ ಗ್ರೇಡ್ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ಶಕೀಲಾಗೆ ಬಿಡುವಿಲ್ಲದಷ್ಟು ಶೂಟಿಂಗ್ ವಿಪರ್ಯಾಸ ಏನಂದ್ರೆ ಅವೆಲ್ಲವೂ ನೀಲಿ ಚಿತ್ರಗಳಾಗಿದ್ವು.

 

 

ಸಿಕ್ಕ ಅವಕಾಶ ಬಿಡಬಾರದು ಅಂತ ಶಕೀಲ ಒಂದರ ಹಿಂದೆ ಒಂದು ಎಂಬುವಂತೆ ವಯಸ್ಕರ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಇದರಿಂದ ಯಾವುದೇ ಹೆಸರು ಕೂಡ ಬರಲಿಲ್ಲವಾಗಿತ್ತು.ಆರಂಭದಲ್ಲಿ ಶಕೀಲಾ ನೀಲಿ ಚಿತ್ರಗಳಲ್ಲಿ ಸಂಭಾವನೆ ಪಡೆಯದೇ ನಟಿಸ್ತಿದ್ದರಂತೆ. ಬಳಿಕ ನಿಧಾನಕ್ಕೆ ಶಕೀಲಾ ಜನಪ್ರಿಯವಾಗ ತೊಡಗಿದರು. 1986 ರಲ್ಲಿ ಕನ್ನಡಾದ ಆಫ್ರಿಕಾದಲ್ಲಿ ಶೀಲಾ, ತಮಿಳಿನ ರಂಗನಾಯಕಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
2000 ನೇ ಇಸವಿಯಲ್ಲಿ ಮಲಯಾಳಂನಲ್ಲಿ ತೆರೆಕಂಡಿದ್ದ ಕಿನ್ನರ ತುಂಬಿಗಳ್ ಶಕೀಲಾ ಸಿನಿ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಕೊಟ್ಟಿತ್ತು.

ಇದಕ್ಕೂ ಮುನ್ನ ಜಲ್ಲಿಕಟ್ಟು, ಖಾಲಿ ಮತ್ತಷ್ಟು ಸಿನಿಮಾಗಳಲ್ಲಿ ಜನಪ್ರಿಯತೆ ತಂದುಕೊಟ್ಟಿತ್ತು. 2002 ರಲ್ಲಿ ಶಕೀಲಾ ಅವರು ತೆಲುಗು ಸಿನಿಮಾ ರಂಗದಲ್ಲಿ ಹೆಸರು ಮಾಡಿದರು. ಇನ್ನು ಶಕೀಲ ಮಲೆಯಾಳಂ ಸಿನಿಮಾ ರಂಗದಲ್ಲಿ ಅದೆಷ್ಟು ಖ್ಯಾತಿ ಗಳಿಸಿದ್ದಾರೆ ಅಂದ್ರೆ ಆಕೆ ನಟಿಸಿದ್ದ ಸಿನಿಮಾಗಳಿಂದ ನಷ್ಟದ ಮಾತೇ ಇಲ್ಲ ಎಂಬಂತಾಗಿತ್ತು. ಹೀಗಾಗಿ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾ ಪ್ರದರ್ಶನ ಕಾಣದ ಸಂದರ್ಭದಲ್ಲಿ ಶಕೀಲಾ ಅವರ ಸಿನಿಮಾ ಹೌಸ್ಫುಲ್ ಆಗ್ತಿತ್ತಂತೆ . ದೊಡ್ಡ ಬಜೆಟ್ ಸಿನಿಮಾ ಮಾಡಿ ಕೈಸುಟ್ಟುಕೊಂಡಿದ್ದ ನಿರ್ಮಾಪಕರು ಕೂಡ ಸದ್ದಿಲ್ಲದೆ ಶಕೀಲಾ ಬಳಿ ಬಂದು ನಟಿಸುವಂತೆ ಕೇಳಿಕೊಂಡು ಸಿನಿಮಾ ಮಾಡಿ ಹಣ ಗಳಿಸುತ್ತಿದ್ರು.
ಕೆಲವರು ತಮ್ಮ ಮನೆಗೆ ಆಕೆಯ ಹೆಸರನ್ನು ಕೂಡ ಇಟ್ಟಿದ್ದಾರಂತೆ.

 

 

2001 ರಿಂದ 2002 ರವರೆಗೆ ಶಕೀಲಾ ಮಲೆಯಾಳಂನಲ್ಲಿ ಬರೋಬ್ಬರಿ 40 ವಯಸ್ಕರ ಸಿನಿಮಾಗಳಲ್ಲಿ ನಟಿಸಿದ್ದರು. ಅನಧಿಕೃತವಾಗಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಶಕೀಲಾ ಅವರನ್ನು ಮದುವೆಯಾಗಲು ನಾ ಮುಂದು ತಾ ಮುಂದು ಅಂತ ನಿರ್ಮಾಪಕರು, ಹಲವು ನಟರು ಮುಗಿಬಿದ್ರಂತೆ. ಆಕೆಯ ಜೀವನದ ಬಗ್ಗೆ ಹಿನ್ನೆಲೆ ಬಗ್ಗೆ ಹಲವರಿಗೆ ಬಹಳಷ್ಟು ಕುತೂಹಲವಾಗಿತ್ತು ಅದೆಲ್ಲದಕ್ಕೂ ಉತ್ತರ ಕೊಟ್ಟಿದ್ದು ಆಕೆಯ ಆತ್ಮಕಥೆ ಪುಸ್ತಕ, ಆಕೆಯಿಂದ ಅದೆಷ್ಟು ಮಂದಿ ಲಾಭ ಪಡೆದಿದ್ರು
ಅದೆಷ್ಟು ಜನರು ಹಣಕಾಸಿನ ಸಹಾಯ ಪಡೆದಿದ್ರು.

ಆದ್ರೆ ಕೊನೆಗೆ ಎಲ್ಲರೂ ಆಕೆಯನ್ನು ನಡು ನೀರಿನಲ್ಲಿ ಕೈಬಿಟ್ಟು ಬಿಟ್ಟಿದ್ದರಂತೆ ಇನ್ನು ಸೆಕ್ಸ್ ನಟಿಯಾಗಿ ಲಕ್ಷಾಂತರ ಪ್ರೇಕ್ಷಕರ ಮನಗೆದ್ದಿದ್ದ ಶಕೀಲಾ ವೈಯಕ್ತಿಕ ಬದುಕಿನಲ್ಲಿ ನೋವು ಉಂಡಿದ್ದೆ ಹೆಚ್ಚು. ಆಕೆಯ ಕುಟುಂಬದವರು ಕೂಡ ಆಕೆ ಯಾವುದೇ ಸಮಾರಂಭಕ್ಕೆ ಬಾರದಂತೆ ದೂರವೇ ಇಟ್ಟಿದ್ದರಂತೆ. ಸಹೋದರಿಯ ಮಗಳ ಮದುವೆಗೂ ಕೂಡ ಆಹ್ವಾನ ನೀಡಿರಲಿಲ್ಲವಾಗಿತ್ತು, ನಿಮ್ಮಂತಹ ಸೆಕ್ಸ್ ನಟಿಯರಿಗೆ ಆಹ್ವಾನ ಇಲ್ಲ ಅಂತ ಸಹೋದರಿ ಹೇಳಿದ್ಳಂತೆ.ಇಂತಹ ಅವಮಾನಗಳಿಂದ ಹೊರಬರಲು ತಾನು ಬೇರೆ ಸಿನಿಮಾಗಳಲ್ಲಿ ನಟಿಸುವುದಾಗಿ ಶಕೀಲಾ ಹೇಳಿಕೊಂಡಿದ್ದಾರೆ.

 

 

ಮನೆಯವರು ಕೂಡ ಈಕೆಯ ಹಣಕ್ಕಾಗಿ ಜೊತೆಗೆ ಸೇರಿಕೊಂಡಿದ್ದರೂ, ಕೊನೆಗೆ ಆಕೆಯ ಹಣವನ್ನೆಲ್ಲ ತಮ್ಮ ಸುಪರ್ತಿಗೆ ತೆಗೆದುಕೊಂಡಿದ್ದಾರಂತೆ. ಅಷ್ಟೇ ಅಲ್ಲ ಆಕೆಯ ಬಯೋಪಿಕ್ ಸಿನಿಮಾ ಕೂಡ ತೆರೆಗೆ ಬರಲು ಸಜ್ಜಾಗಿದೆ ಈ ಸಿನಿಮಾದಲ್ಲ ಬಾಲಿವುಡ್ ನಟಿ ರೀಚ ಚಾಧ ಶಕೀಲಾ ಪಾತ್ರ ನಿರ್ವಹಿಸಲಿದ್ದಾರಂತೆ .

ಇದೇ ರೀತಿ ಮತ್ತಷ್ಟು ಇಂಟರೆಸ್ಟಿಂಗ್ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here