ಬ್ರಹ್ಮ ತನ್ನ ಮಗಳಾದ ಸರಸ್ವತಿಯನ್ನು ಮದುವೆಯಾದ ಕಥೆ…!

0
322

ಬ್ರಹ್ಮನನ್ನು ಸೃಷ್ಟಿಯ ರಚನೆಗಾರ ಎಂದು ಕರೆಯಲಾಗುತ್ತದೆ ಹಾಗೂ ಬ್ರಹ್ಮದೇವರ ಪತ್ನಿ ವಿದ್ಯಾ ದೇವಿ ಸರಸ್ವತಿ ಎಂದು ಎಲ್ಲರಿಗೂ ಗೊತ್ತೇ ಇದೆ. ಇನ್ನು ಹಿಂದೂ ಧರ್ಮದ ಪ್ರಕಾರ ಸರಸ್ವತಿ ಪುರಾಣ ಹಾಗೂ ಮತ್ಸ್ಯ ಪುರಾಣ ಎಂಬ ಪ್ರಮುಖ ಗ್ರಂಥಗಳಿವೆ ಈ ಎರಡೂ ಗ್ರಂಥಗಳ ಪ್ರಕಾರ ಬ್ರಹ್ಮದೇವನು ತನ್ನದೇ ಮಗಳಾದ ಸರಸ್ವತಿಯನ್ನೇ ವರಿಸಿದ್ದರು ಆದರೆ ಬ್ರಹ್ಮದೇವನು ತನ್ನದೇ ಮಗಳಾದ ಸರಸ್ವತಿಯನ್ನು ಏಕೆ ಮದುವೆಯಾದ ಎಂದು ತಿಳಿಯೋಣ ಬನ್ನಿ..

ಸರಸ್ವತಿ ಪುರಾಣದ ಪ್ರಕಾರ ಬ್ರಹ್ಮದೇವನು ತನ್ನ ಶಕ್ತಿಯಿಂದ ಸರಸ್ವತಿಯನ್ನು ಸೃಷ್ಟಿಸುತ್ತಾನೆ, ಸರಸ್ವತಿ ಮಾತೆಯನ್ನು ವಿದ್ಯೆ ನೀಡುವ ಮಾತೆ ಎಂದು ಕೂಡ ಹೇಳಲಾಗುತ್ತದೆ ಹಾಗೂ ಸರಸ್ವತಿಗೆ ತಾಯಿ ಯಾರು ಇರಲಿಲ್ಲ ಕೇವಲ ತನ್ನ ತಂದೆ ಬ್ರಹ್ಮನಾಗಿದ್ದ ಮತ್ಸ್ಯ ಪುರಾಣದ ಪ್ರಕಾರ ಬ್ರಹ್ಮನಿಗೆ ಐದು ತಲೆ ಇತ್ತು ಎಂದು ಹೇಳಲಾಗುತ್ತದೆ. ಬ್ರಹ್ಮ ತನಗಿದ್ದ ಶಕ್ತಿಯಿಂದ ಸೃಷ್ಟಿ ರಚನೆ ಮಾಡುವಾಗ ಬ್ರಹ್ಮ ಒಬ್ಬರೆ ಇದ್ದರಂತೆ ಆಗ ಅವರು ಸರಸ್ವತಿ, ಸಾಂಧೆ, ಬ್ರಾಹ್ಮಿಯನ್ನು ಸೃಷ್ಟಿಸಿದ್ದರಂತೆ, ಅದರಲ್ಲಿ ಸರಸ್ವತಿ ಅತಿ ಸುಂದರಿಯಾಗಿದ್ದರಂತೆ ಹಾಗಾಗಿ ಸರಸ್ವತಿಯ ಸೌಂದರ್ಯಕ್ಕೆ ಬ್ರಹ್ಮನು ಮಾರಿ ಹೋಗಿದ್ದರಂತೆ.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

#laxmi #saraswati

A post shared by Akaash (@rohanrishi3) on

ಹಾಗೂ ತನ್ನ ದೃಷ್ಟಿಯನ್ನು ಸರಸ್ವತಿಯ ಮೇಲೆ ಸದಾ ಇರಿಸಿದ್ದರಂತೆ.ಈ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸರಸ್ವತಿ ನಾಲ್ಕು ದಿಕ್ಕುಗಳಲ್ಲಿ ಅಡಗಿ ಕೊಳ್ಳುತ್ತಿದ್ದಳಂತೆ ಆದರೆ ಬ್ರಹ್ಮದೇವ ಸರಸ್ವತಿ ಎಲ್ಲಿಯೇ ಅಡಗಿಕೊಂಡಿದ್ದರು ತನ್ನ ಐದನೇ ತಲೆಯ ಶಕ್ತಿಯಿಂದ ಕಂಡು ಹಿಡಿಯುತ್ತಿದ್ದರಂತೆ ಅದಾದ ಮೇಲೆ ಸರಸ್ವತಿ ಆಕಾಶದಲ್ಲಿಯೂ ಅಡಗಿ ಕುಳಿತಿದ್ದಳಂತೆ ಆದರೆ ಬ್ರಹ್ಮದೇವನು ಅಲ್ಲಿಯೂ ಕಂಡು ಹಿಡಿದನಂತೆ
ಇದಾದ ಮೇಲೆ ಇವರಿಬ್ಬರಿಗೂ ಮದುವೆ ಕೂಡ ಆಗುತ್ತೆ. ಇವರಿಬ್ಬರಿಗೂ ಮನು ಎಂಬ ಪುತ್ರ ಹುಟ್ಟುತ್ತಾನೆ ಹಾಗೂ ಮನು ಸೃಷ್ಟಿಯಲ್ಲಿ ಹುಟ್ಟಿರುವ ಮೊದಲ ಮಾನವ ಎಂದು ಕೂಡ ಹೇಳಲಾಗುತ್ತದೆ.

 

View this post on Instagram

 

The Supreme Brahma God #BrahmaGod

A post shared by Mela Theoryna (@melatheoryna) on

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here