8 ವರ್ಷದ ಮಗು ಮಾಡಿ ಪರಾರಿಹಾದ ಮಗ ! ಅವಳನ್ನು ಸಾಕಿ ಬೇರೆ ಹುಡುಗನಿಗೆ ಕನ್ಯಾಧಾನ ಮಾಡಿದ ತಂದೆ

0
1055

ಸಾಮಾನ್ಯವಾಗಿ ಅಪ್ಪ ಅಮ್ಮಂದಿರಿಗೆ ತಮ್ಮ ಮಕ್ಕಳು ತಮ್ಮ ಇಷ್ಟದಂತೆ ಮದುವೆಯಾಗಬೇಕು ಎಂದು ಆಸೆ ಇರುತ್ತದೆ, ಅದನ್ನು ಮೀರಿ ಮಕ್ಕಳು ತಮ್ಮ ಇಷ್ಟದಂತೆ ಮದುವೆಯಾದರೆ ಅಪ್ಪ ಅಮ್ಮಂದಿರು ವಿರೋಧಿಸುತ್ತಾರೆ.
ಆದರೆ ಕೇರಳದ ಕೊಟ್ಟಯಂನಲ್ಲಿ ತಂದೆಯೊಬ್ಬರು ಮಗ ಮನಸಾರೆ ಇಷ್ಟ ಪಟ್ಟು ಪ್ರೀತಿಸಿ ಮೋಸ ಮಾಡಿದ್ದ ಹುಡುಗಿಯನ್ನು ತಮ್ಮ ಸ್ವಂತ ಮಗಳ ರೀತಿಯಲ್ಲಿ ಸಾಕಿ ಸಲುಹಿ ಕೊನೆಗೆ ಬೇರೆ ಹುಡುಗನ ಜೊತೆ ಮದುವೆ ಮಾಡಿಸಿರುವ ಒಂದು ಅಪರೂಪದ ಘಟನೆ ನಡೆದಿದೆ.

ಈ ಘಟನೆ ಬಗ್ಗೆ ಸಂಧ್ಯಾ ಪಲ್ಲವಿ ಎನ್ನುವವರು ತಮ್ಮ ಫೇಸ್’ಬುಕ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದರು.
ಆ ಪೋಸ್ಟ್ ವೈರಲ್ ಆದ ನಂತರ ಆ ಪೋಸ್ಟನ್ನು ಡಿಲೀಟ್ ಮಾಡಿದ್ದಾರೆ.

 

 

ಸಂಧ್ಯಾ ಪಲ್ಲವಿ ಅನ್ನುವವರು ತಮ್ಮ ಸ್ನೇಹಿತೆಯೊಬ್ಬರ ಮದುವೆಗೆ ಹೋಗಿದ್ದರಂತೆ. ಅಲ್ಲಿ ಹೋದಾಗ ಇದು ಒಂದು ವಿಶೇಷ ಮದುವೆಯೆಂದು ತಿಳಿದಿದೆ. ಈ ವಿಶೇಷ ಮದುವೆ ಕೊಟ್ಟಯಂ ಜಿಲ್ಲೆಯ ತಿರುನಕ್ಕರ ಗ್ರಾಮದಲ್ಲಿ ನಡೆದಿದೆ. ಆದರೆ ಮಾಂಗಲ್ಯಧಾರಣೆ ವೇಳೆ ಕಣ್ಣೀರು ಬಂದಿತ್ತು ಎಂದು ಮೊದಲಿಗೆ ಹೇಳಿಕೊಂಡಿದ್ದಾರೆ.

ತಿರುನಕ್ಕರ ನಿವಾಸಿ ಶಾಜಿ ಮತ್ತು ಅವರ ಪತ್ನಿ ಮದುವೆಗೆ ಬಂದ ಅತಿಥಿಗಳನ್ನು ಬರಮಾಡಿಕೊಳ್ಳುವ ಕಾರ್ಯದಲ್ಲಿ ಬ್ಯುಸಿಯಾಗಿದ್ದರು. ಆರು ವರ್ಷಗಳ ಹಿಂದೆ ಶಾಜಿ ಅವರ ಮಗ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಈ ವೇಳೆ ತನ್ನ ಸಹಪಾಠಿಯೊಬ್ಬಳನ್ನು ಮನಸಾರೆ ಇಷ್ಟ ಪಟ್ಟು ಪ್ರೀತಿಸುತ್ತಿದ್ದನು.
ಇಬ್ಬರು ಮನಸಾರೆ ಇಷ್ಟ ಪಟ್ಟು ಒಬ್ಬರೊನ್ನಬ್ಬರು ಮೆಚ್ಚಿದ್ದರು. ನಂತರ ಗಟ್ಟಿ ನಿರ್ಧಾರ ಮಾಡಿ ಮನೆ ಬಿಟ್ಟು ಓಡಿ ಹೋಗಿದ್ದರು, ಇತ್ತ ಮಗಳು ಕಾಣೆಯಾಗಿದ್ದಾಳೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಅವರಿಬ್ಬರನ್ನು ಪತ್ತೆಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಆದರೆ ಹುಡುಗಿಯ ತಂದೆ ತಾಯಿ ಮಗಳನ್ನು ಕಷ್ಟ ಪಟ್ಟು ಸಾಕಿದ್ದರು ಅವರ ಮಮತೆ ವಾತ್ಸಲ್ಯಕ್ಕೆ ಬೆಲೆ ಕೊಡದೆ ಯಾವುದೋ ಬೇರೆ ಹುಡುಗನ ಜೊತೆಗೆ ಮನೆ ಬಿಟ್ಟು ಓಡಿ ಹೋಗಿದ್ದದಿಂದ ಇಂತ ಮಗಳು ನಮಗೆ ಬೇಡ ಎಂದು ಪೋಷಕರು ಬಿಟ್ಟು ಹೋದರು. ತಮ್ಮ ಮಕ್ಕಳು ಮೈನರ್ ಆಗಿರುವುದರಿಂದ 18 ವರ್ಷ ತುಂಬಿದ ಮೇಲೆ ಮದುವೆ ಮಾಡುತ್ತೇವೆ ಎಂದು ಹುಡುಗನ ತಂದೆ ತಾಯಿ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು.

ತಂದೆ ಶಾಜಿ ಮಗನನ್ನು ಹಾಸ್ಟೆಲಿಗೆ ಸೇರಿಸಿ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದರು.
ಇತ್ತ ಮಗ ಮನಸಾರೆ ಇಷ್ಟ ಪಟ್ಟು ಕರೆದುಕೊಂಡು ಬಂದಿರುವ ಹುಡುಗಿಯನ್ನು ಮನೆಯಲ್ಲಿ ಇರಿಸಿಕೊಂಡೆ ಓದು ಮುಂದುವರಿಯುವಂತೆ ನೋಡಿಕೊಂದಿದ್ದರು.ಈ ಮಧ್ಯೆ ಮಗ ಬೇರೊಂದು ಹುಡುಗಿಯನ್ನು ಇಷ್ಟ ಪಟ್ಟು ಪ್ರೀತಿ ಮಾಡಿದ್ದಾನೆ .ಅಷ್ಟೇ ಅಲ್ಲದೆ ಹುಡುಗಿಯನ್ನು ಪ್ರೀತಿ ಮಾಡಿದಲ್ಲದೆ ಕಳೆದ ವರ್ಷ ಹಾಸ್ಟೆಲ್ ನಿಂದ ಮರಳಿ ಊರಿಗೆ ಬರುವಾಗ ಬೇರೊಂದು ಹುಡುಗಿಯನ್ನು ಮದುವೆಯಾಗಿ ಬಂದಿದ್ದಾನೆ.

ಇತ್ತ ದ್ವಿತೀಯ ಪಿಯುಸಿ ಓದುತ್ತಿದ್ದಾಗ ಪ್ರೀತಿಸಿದ್ದ ಹುಡುಗಿ ಮನೆಯಲ್ಲಿರುವಾಗ ಮದುವೆ ಆಗಿ ಬಂದಿದ್ದರಿಂದ, ಮಗನು ಆಕೆಗೆ ಮೋಸ ಮಾಡಿದ್ದ ಕಾರಣ ಮಗನನ್ನು ತಮ್ಮ ಕುಟುಂಬದಿಂದ ಹೊರ ಹೋಇಗುವಂತೆ ಹೇಳಿದ್ದಾರೆ. ಇತ್ತ ಆತನಿಗಾಗಿ ಕಾಯುತ್ತಿದ್ದ ಹುಡುಗಿಗೆ ತನ್ನ ಮಗನಿಗೆ ಸೇರಬೇಕಿದ್ದ ಸಂಪೂರ್ಣ ಆಸ್ತಿಯನ್ನು ಆಕೆಯ ಬರೆದಿದ್ದಾರೆ. ಅಷ್ಟೇ ಅಲ್ಲದೆ ಕರುನಾಗಪಳ್ಳಿ ನಿವಾಸಿ ಅಜಿತ್ ಜೊತೆ ಆ ಹುಡುಗಿಯ ಮದುವೆ ಮಾಡಿಸಿದ್ದಾರೆ. ತಂದೆ-ತಾಯಿ ಸ್ಥಾನದಲ್ಲಿ ನಿಂತು ಮಗಳಂತೆ ಸಾಕಿದ್ದ ಹುಡುಗಿಯನ್ನು ತಿರುನಕ್ಕರ ದೇವಾಲಯದಲ್ಲಿ ಕನ್ಯಾದಾನ ಮಾಡಿಕೊಟ್ಟಿದ್ದಾರೆ.

ಈ ದಂಪತಿಗೆ ಇನ್ನೊಬ್ಬ 8 ವರ್ಷದ ಮಗನಿದ್ದಾನೆ ಎಂದು ವಿಶೇಷ ಮದುವೆಯ ಸಂಪೂರ್ಣ ವಿವರವನ್ನು ಬರೆದಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here