ಸಲ್ಮಾನ್ ಖಾನ್ ಬಾಡಿಗಾರ್ಡ್ ನ ʼಸಂಬಳʼ ಎಷ್ಟು ಕೋಟಿ ಗೊತ್ತಾ…?

0
315

ಬಾಲಿವುಡ್ ನಟ ಸಲ್ಮಾನ್ ಖಾನ್ ಅಂಗರಕ್ಷಕ ಶೇರಾ ಬಗ್ಗೆ ಎಲ್ಲರಿಗೂ ಗೊತ್ತು. ಸದಾ ಸಲ್ಮಾನ್ ಖಾನ್ ಹಿಂದಿರುವ ಶೇರಾ, ಸಲ್ಮಾನ್ ಖಾನ್ ಆಪ್ತರಲ್ಲಿ ಒಬ್ಬರು. ಕಳೆದ 20 ವರ್ಷಗಳಿಂದ ಸಲ್ಮಾನ್ ಖಾನ್ ಅಂಗರಕ್ಷಕರಾಗಿದ್ದಾರೆ ಶೇರಾ.

ಸಲ್ಮಾನ್ ಖಾನ್ ಗೆ ಬಾಡಿಗಾರ್ಡ್ ಆಗುವ ಮೊದಲು ಶೇರಾ ಭಾರತಕ್ಕೆ ಬರುವ ಸೆಲೆಬ್ರಿಟಿಗಳ ಬೆಂಗಾವಲಿರುತ್ತಿದ್ದರು. ಸಲ್ಮಾನ್ ಯಶಸ್ಸಿನ ಹಿಂದೆ ಸಿಖ್ ಕುಟುಂಬದಿಂದ ಬಂದಿರುವ ಶೇರಾರ ದೊಡ್ಡ ಕೈ ಇದೆ. ಚಂಡೀಗಢದಲ್ಲಿ ಅಭಿಮಾನಿಗಳ ಮಧ್ಯೆ ಸಲ್ಮಾನ್ ಸಿಕ್ಕಿಬಿದ್ದಾಗ ಸಲ್ಮಾನ್ ಗೊಂದು ಬಾಡಿಗಾರ್ಡ್ ಬೇಕು ಎಂಬ ಬಗ್ಗೆ ಸೋಹೆಲ್ ಖಾನ್ ಚರ್ಚೆ ನಡೆಸಿದ್ರು. ಆಗ ಬಂದ ಹೆಸರು ಶೇರಾ. ಅಲ್ಲಿಂದ ಶೇರಾ, ಸಲ್ಮಾನ್ ಬಾಡಿಗಾರ್ಡ್ ಆಗಿ ಕೆಲಸ ಮಾಡ್ತಿದ್ದಾರೆ.

ಸಲ್ಮಾನ್ ಖಾನ್ ಬಾಡಿಗಾರ್ಡ್ ಆಗೋದು ಸಣ್ಣ ವಿಷಯವಲ್ಲ. ಸೆಲೆಬ್ರಿಟಿಗಳ ಅಂಗರಕ್ಷಕರಾಗಿ ಕೆಲಸ ಮಾಡೋರಿಗೆ ಎಷ್ಟು ಹಣ ಸಿಗಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿರುತ್ತದೆ. ಸಲ್ಮಾನ್ ಖಾನ್ ಬಾಡಿಗಾರ್ಡ್ ಆದ್ರೆ ಸಂಬಳಕ್ಕೇನೂ ಕೊರತೆಯಿಲ್ಲ. ಸಲ್ಮಾನ್ ಖಾನ್ ತನ್ನ ನೆಚ್ಚಿನ ಅಂಗರಕ್ಷಕ ಶೇರಾಗೆ ಪ್ರತಿ ತಿಂಗಳು 15 ಲಕ್ಷ ರೂಪಾಯಿ ಸಂಬಳ ನೀಡ್ತಾರೆ. ಅಂದ್ರೆ ವರ್ಷಕ್ಕೆ ಸುಮಾರು 2 ಕೋಟಿ ರೂಪಾಯಿ ಸಂಬಳ ಪಡೆಯುತ್ತಾರೆ ಶೇರಾ. ಬಾಲಿವುಡ್ ನ ಯಾವ ಸ್ಟಾರ್ ಗಳ ಅಂಗರಕ್ಷಕರಿಗೂ ಇಷ್ಟು ಸಂಬಳ ಸಿಗೋದಿಲ್ಲ.

LEAVE A REPLY

Please enter your comment!
Please enter your name here