ಎರಡು ಕೋಟಿ ಸಂಭಾವನೆಯ ಸೌಂದರ್ಯ ವರ್ಧಕ ಜಾಹೀರಾತು ತಿರಸ್ಕರಿಸಿ ನಟಿ ಸಾಯಿ ಪಲ್ಲವಿ ಹೇಳಿದ ಮಾತು ಅದ್ಬುತ

0
12

ಖ್ಯಾತ ಮಲಯಾಳಂ ನಟಿ ಸಾಯಿ ಪಲ್ಲವಿ ಸಿನಿಮಾಗಳಲ್ಲಿ ಮೇಕಪ್ ಇಲ್ಲದೆ ನಟಿಸಿ ಜನರ ಮನಸ್ಸು ಗೆದ್ದವರು. ಪ್ರೇಮಂ ಖ್ಯಾತಿಯ ಸಾಯಿ ಪಲ್ಲವಿ ಎರಡು ಕೋಟಿಯ ಜಾಹೀರಾತು ತಿರಸ್ಕರಿಸಿದ ಬಗ್ಗೆ ಅದ್ಬುತವಾದ ಮಾತುಗಳನ್ನಾಡಿ ಮತ್ತೆ ಭಾರತೀಯರ ಮನಸ್ಸಿನಲ್ಲಿ ಸ್ಥಾನ ಗಟ್ಟಿಯಾಗಿಸಿಕೊಂಡಿದ್ದಾರೆ.

ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ತಮ್ಮ ನಿರ್ಧಾರದ ಹಿಂದಿನ ಉದ್ದೇಶವನ್ನು ತಿಳಿಸಿದರು. ಇದು ನಮ್ಮ ಭಾರತೀಯರ ಬಣ್ಣವಾಗಿದೆ. ನೀವೇಕೆ ಬೆಳ್ಳಗಿದ್ದೀರಾ ಎಂದು ವಿದೇಶಿಯರ ಬಳಿ ಹೋಗಿ ಕೇಳಲು ಆಗುವುದಿಲ್ಲ. ಸೌಂದರ್ಯವರ್ಧಕದಿಂದ ಕ್ಯಾನ್ಸರ್​ಗೆ ತುತ್ತಾಗಿದ್ದರೆ ಅವರ ಬಳಿ ಅದನ್ನು ಕೇಳಲು ಸಾಧ್ಯವೇ? ನಾವು ಅವರನ್ನು ನೋಡಿ, ಅವರ ಬಣ್ಣಕ್ಕೆ ಮಾರುಹೋಗಿ, ನಮಗೆ ಅವರು ಬಳಸುವ ಸೌಂದರ್ಯವರ್ಧಕ ಬೇಕೆನ್ನಬಾರದು. ಅದು ಅವರ ಚರ್ಮದ ಬಣ್ಣ. ಇದು ನಮ್ಮ ಚರ್ಮದ ಬಣ್ಣವಾಗಿದೆ. ಆಫ್ರಿಕಾದವರು ಕೂಡ ಅವರದ್ದೇಯಾದ ಬಣ್ಣವನ್ನು ಹೊಂದಿದ್ದು, ಅವರೂ ಕೂಡ ಸುಂದರವಾಗಿದ್ದಾರೆ ಎಂದು ತಿಳಿಸಿದ್ದಾರೆ.

 

View this post on Instagram

 

🌸

A post shared by Sai Pallavi (@saipallavi.senthamarai) on

ಇಂತಹ ಜಾಹೀರಾತುವಿನಿಂದ ಬರುವ ಹಣವನ್ನಿಟ್ಟುಕೊಂಡು ನಾನೇನು ಮಾಡಲಿ? ನಾನು ಮನೆಗೆ ಹೋಗಿ ಕೇವಲ ಮೂರು ಚಪಾತಿ ಹಾಗೂ ಸ್ವಲ್ಪ ಅನ್ನವನ್ನು ತಿನ್ನುತ್ತೇನೆ. ಬಳಿಕ ನನ್ನ ಕಾರನ್ನು ಏರಿ ಒಂದು ಸುತ್ತು ಬರುತ್ತೇನೆ. ಇದಕ್ಕಿಂದ ದೊಡ್ಡ ಆಸೆ ನನಗೆ ಯಾವುದು ಇಲ್ಲ. ನನ್ನ ಸುತ್ತಲಿನ ಜನರ ಸಂತೋಷಕ್ಕೆ ನಾನು ಏನು ಮಾಡಬೇಕೆಂಬುದನ್ನು ನೋಡುತ್ತೇನೆ. ನಾನು ನೋಡುತ್ತಿರುವ ಇಂತಹ ಮಾನದಂಡಗಳು ತಪ್ಪು ಎಂದು ಹೇಳುತ್ತೇನೆ ಎಂದು ಜಾಹೀರಾತು ನಿರಾಕರಣೆಗೆ ಕಾರಣ ಹೇಳಿ ಮತ್ತೆ ಅಭಿಮಾನಿಗಳಲ್ಲಿ ಹೆಮ್ಮೆಯ ಭಾವ ಮೂಡಿಸಿದ್ದಾರೆ.

LEAVE A REPLY

Please enter your comment!
Please enter your name here