ನೀವು ಮೋದಿ ಫ್ಯಾನ್ ಎಂಬ ಪ್ರಶ್ನೆಗೆ ದರ್ಶನ್ ಅವರು ನಾನು ಯಾರ ಪ್ಯಾನ್ ಅಲ್ಲ, ನಿಂಗ್ಯಾಕೆ ..?

0
254

ನಟಿ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವಾತಂತ್ರ ಅಭ್ಯರ್ಥಿಯಾಗಿದ್ದಾರೆ. ನಟ ದರ್ಶನ್ ಹಾಗೂ ಯಶ್ ಅವರ ಪರ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಈಗ ದರ್ಶನ್ ಅಲ್ಲಿಗೆ ಕೊಂಚ ಬಿಡುವು ಮಾಡಿಕೊಂಡು ಸೋಮವಾರ ಬೆಂಗಳೂರಿಗೆ ಬಂದಿದ್ರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ದರ್ಶನ್ ಭಾಗಿಯಾಗಿದ್ದರು ಈ ವೇಳೆ ದರ್ಶನ್ ಗೆ  ನೀವು ಮೋದಿ ಅಭಿಮಾನಿ ಎಂಬ ಪ್ರಶ್ನೆ ಕೂಡ ಕೇಳಲಾಯಿತು ಅದಕ್ಕೆ ಯಾವ ಉತ್ತರ ನೀಡಿದ್ದಾರೆ ದರ್ಶನ್ ಅಂತ ಹೇಳ್ತೀವಿ ಕೇಳಿ..

 

ನಟ ದರ್ಶನ್ ಬೆಂಗಳೂರಿನ ಕೇಂದ್ರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರವಾಗಿ ಪ್ರಚಾರ ಮಾಡಿದ್ದಾರೆ ಈ ವೇಳೆ ಬಿಜೆಪಿ ಕಾರ್ಯಕರ್ತರು ದರ್ಶನ್ ಕೂಡಾ ಮೋದಿ ಫ್ಯಾನ್ ಅಂತ ಮಾತನಾಡಿ ಕೊಳ್ತಿದ್ರು
ಇದೇ ಪ್ರಶ್ನೆಯನ್ನು ಸುದ್ದಿವಾಹಿನಿಯ ವರದಿಗಾರ್ತಿಯೊಬ್ಬರು ದರ್ಶನ್ ಮುಂದೆ ಇಟ್ಟಿದ್ರು ನೀವು ಮೋದಿ ಫ್ಯಾನ್ ಅಂತ ಕಾರ್ಯಕರ್ತರು ಹೇಳ್ತಿದ್ದಾರೆ ಅದು ಹೌದೇ ಎಂಬ ಪ್ರಶ್ನೆಗೆ  ಉತ್ತರ ನೀಡಿದ ದರ್ಶನ್

ನಾನು ಯಾರ ಪ್ಯಾನ್ ಕೂಡ ಅಲ್ಲ ನನಗೆ ಗೊತ್ತಿರುವವರು ಪರಿಚಯ ಇರುವವರು ನಾನು ಇಷ್ಟಪಡುವವರಿಗಾಗಿ ಪ್ರಚಾರ ಮಾಡ್ತೀನಿ ಅಷ್ಟೇ ಅಂತ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ದರ್ಶನ್ ತಮಗೆ ಪಕ್ಷ ಮುಖ್ಯ ಅಲ್ಲ ವ್ಯಕ್ತಿ ಮುಖ್ಯ ಎನ್ನುವುದು ಸ್ಪಷ್ಟಪಡಿಸಿದ್ದಾರೆ
ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ನನಗೆ ಬಹಳ ಒಳ್ಳೆಯ ಸ್ನೇಹಿತರು ಹಲವು ಬಾರಿ ನನಗೆ ಸಹಾಯ ಮಾಡಿದ್ದಾರೆ ಜನರಿಗೆ ಒಳ್ಳೆ ಕೆಲಸವನ್ನು ಮಾಡಿದ್ದಾರೆ ಹಾಗಾಗಿ ಅವರ ಪರ ಪ್ರಚಾರಕ್ಕೆ ಬಂದೆ ಅಂತ ದರ್ಶನ್ ಅವರು ಹೇಳಿ ಕೊಂಡಿದ್ದಾರೆ.

ಮತ್ತಷ್ಟು ಸುದ್ದಿಗಳಿಗೆ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು..

LEAVE A REPLY

Please enter your comment!
Please enter your name here