ಅಮೆರಿಕದಲ್ಲಿ K.G.F. ಕ್ರೇಜ್ ಕೆಟಿಎಂ ಡ್ಯೂಕ್​ ಆಯ್ತು ರಾಕಿ ಬೈಕ್ !

0
532

ಬೈಕ್ ಕ್ರೇಜ್ ಯಾರಿಗಿಲ್ಲ ಹೇಳಿ. ಅದರಲ್ಲೂ ಕೆಟಿಎಂ ಬೈಕುಗಳೆಂದರೆ ಒಂದಷ್ಟು ಯುವಕರಿಗೆ ಅಚ್ಚುಮೆಚ್ಚು. ಲುಕ್ ಮತ್ತು ಸಿಸಿ ಮೂಲಕ ರಸ್ತೆಯಲ್ಲಿ ಧೂಳೆಬ್ಬಿಸುವ ಕೆಟಿಎಂ ಬೈಕುಗಳನ್ನು ಹೆಚ್ಚಾಗಿ ಯಾರೂ ಕೂಡ ಮೊಡಿಫೈ ಮಾಡುವುದಿಲ್ಲ. ಏಕೆಂದರೆ ಕಂಪೆನಿಯೇ ಇದನ್ನು ಸ್ಪೋರ್ಟ್ಸ್​ ಬೈಕ್ ಮಾದರಿಯಲ್ಲಿ ಬಿಡುಗಡೆ ಮಾಡುತ್ತಿದೆ.

ಆದರೆ ಇದೀಗ ಕೆಟಿಎಂ ಬೈಕುಗಳನ್ನು ಆಲ್ಟರ್ ಮಾಡುವ ಕ್ರೇಜ್​ವೊಂದು ಅಮೆರಿಕದಲ್ಲಿ ಪ್ರಾರಂಭವಾಗಿದೆ. ಕೆಟಿಎಂ ಡ್ಯೂಕ್ 390 ಸಿಸಿ ಬೈಕನ್ನು ಆಫ್​ ರೋಡ್​ ಮಾದರಿಯಲ್ಲಿ ವಿನ್ಯಾಸಗೊಳಿಸಿರುವ ಫೋಟೋವೊಂದು ವೈರಲ್ ಆಗಿದೆ.

 

 

 

ಕ್ಯಾಲಿಫೋರ್ನಿಯಾದ ಬೈಕ್​ ಪ್ರಿಯನೊಬ್ಬ ತನ್ನ ಮೋಟರ್​ಸೈಕಲ್​ಗೆ ಹೊಸ ಟಚ್​ ನೀಡಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಫೋಟೋಗಳು ವೈರಲ್​ ಆಗುತ್ತಿದ್ದಂತೆ ಇದಕ್ಕೂ ಕನ್ನಡದ ಕೆ.ಜಿ.ಎಫ್ ಚಿತ್ರದ ಸಿನಿಮಾಗೂ ಸಂಬಂಧ ಕಲ್ಪಿಸಲಾಗುತ್ತಿದೆ. ಏಕೆಂದರೆ ಕೆ.ಜಿ.ಎಫ್​ ಚಿತ್ರದಲ್ಲಿ ನಾಯಕ ಯಶ್ ರಾಕಿ ಭಾಯ್ ಅವತಾರದಲ್ಲಿ ಎಂಟ್ರಿ ಕೊಡುವ ಬೈಕ್​ ಮಾದರಿಯಲ್ಲೇ ಇದನ್ನು ವಿನ್ಯಾಸಗೊಳಿಸಲಾಗಿದೆ.

ಅತ್ಯುತ್ತಮ ಗ್ರಿಪ್ಪಿಂಗ್ ಟೈರುಗಳು, ಯಾವುದೇ ಇಕ್ಕಟ್ಟಿನಲ್ಲೂ ನುಗ್ಗಿ ಸಂಚರಿಸಲು ಅನುಕೂಲವಾಗುವಂತಹ ಹ್ಯಾಂಡಲ್​, ಆಫ್​ ರೋಡ್​ಗೆ ಸರಿ ಹೊಂದುವ ಸೀಟನ್ನು ಈ ಬೈಕ್​ನಲ್ಲಿ ಅಳವಡಿಸಲಾಗಿದೆ. ಅಡ್ವೆಂಜರ್​ಗಾಗಿ ಮೋಡಿಫೈ ಮಾಡಲಾಗಿರುವ ಈ ಬೈಕಿನ ಅಸಲಿ ಬೆಲೆ 2.26 ಲಕ್ಷ ರೂ. 163 kg ಹೊಂದಿರುವ ಕೆಟಿಎಂ ಬೈಕ್ ಸಾಮಾನ್ಯವಾಗಿ 23 ಕಿ.ಮೀ ಮೈಲೇಜ್ ನೀಡುತ್ತದೆ. ಆದರೆ​ ಮೋಡಿಫೈ ಮಾಡಿದ ಬಳಿಕ ಇದರ ತೂಕ ಮತ್ತು ಮೈಲೇಜ್​ನಲ್ಲಿ ಭಾರೀ ಇಳಿಕೆಯಾಗಿರುತ್ತದೆ ಎನ್ನಲಾಗಿದೆ.

ಕೆ.ಜಿ.ಎಫ್​ ಚಿತ್ರದಲ್ಲೂ ಇದೇ ಮಾದರಿಯ ಬೈಕ್​ವೊಂದನ್ನು ಬಳಸಲಾಗಿತ್ತು. ಹೀಗಾಗಿ ಕೆಲವರು ಇದು ಕೆ.ಜಿ.ಎಫ್ ಚಿತ್ರದಿಂದ ಪ್ರೇರಿತಗೊಂಡು ವಿನ್ಯಾಸಗೊಳಿಸಲಾದ ಬೈಕ್ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಕನ್ನಡ ಸಿನಿಮಾಗೂ ಕ್ಯಾಲಿಫೋರ್ನಿಯಾ ಬೈಕ್​ಗೂ ನಂಟಿದೆಯೇ? ಎಂಬುದನ್ನು ಇಲ್ಲಿ ಎಲ್ಲೂ ಸ್ಪಷ್ಟಪಡಿಸಿಲ್ಲ. ಆದರೆ ಅಮೆರಿಕದಲ್ಲಿ ಮೋಡಿಫೈ ಮಾಡಿದ ಈ ಬೈಕ್ ಮಾತ್ರ ಕೆ.ಜಿ.ಎಫ್ ಚಿತ್ರದಲ್ಲಿ ಬಳಸಿದ ರಾಕಿ ಸ್ಟೈಲ್ ಬೈಕ್ ರೀತಿಯಲ್ಲಿರುವುದು ಕೂಡ ಸುಳ್ಳಲ್ಲ.

LEAVE A REPLY

Please enter your comment!
Please enter your name here