ಹುತಾತ್ಮ ಯೋಧರಿಗೆ ಆರ್ಥಿಕ ನೆರವು ನೀಡಿದ ನಟಿ ರಶ್ಮಿಕಾ ಮಂದಣ್ಣ!

0
203

ಕೊಡಗಿನ ಬೆಡಗಿ ರಶ್ಮಿಕಾ ತಮ್ಮ ವತಿಯಿಂದ ಯೋಧರ ಕುಟುಂಬಕ್ಕೆ ಧನ ಸಹಾಯ ಮಾಡಿದ್ದು, ಕೇಂದ್ರ ಗೃಹ ಸಚಿವಾಲಯ ರಶ್ಮಿಕಾ ಕೊಡುಗೆ ಮೆಚ್ಚಿ ಪ್ರಮಾಣ ಪತ್ರ ನೀಡಿದೆ. ಆದರೆ ಎಷ್ಟು ಮೊತ್ತ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. ಇದನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿರುವ ರಶ್ಮಿಕಾ ಸ್ವಲ್ಪ ತಡವಾಗಿದೆ. ಹಾಗಿದ್ದರೂ ನಮ್ಮನ್ನು ಕಾಯುವ ಸಾಹಸಿಗಳಿಗೆ ನಾನು ಮಾಡಬಹುದಾದ ಸಣ್ಣ ಕಾಣಿಕೆ ಇದು ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಸರ್ಕಾರಿ ವೆಬ್ ಸೈಟ್ ಲಿಂಕ್ ನೀಡಿ ಈ ಲಿಂಕ್ ಮೂಲಕ ನೀವೂ ಸೈನಿಕರಿಗೆ ಆರ್ಥಿಕ ನೆರವು ನೀಡಿ ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಬಾಲಿವುಡ್ ನಟ ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್, ಕ್ರಿಕೆಟಿಗರಾದ ಶಿಖರ್ ಧವನ್, ಮೊಹಮ್ಮದ್ ಶಮಿ, ಸೆಹ್ವಾಗ್ ಮುಂತಾದವರು ಯೋಧರಿಗೆ ಆರ್ಥಿಕವಾಗಿ ನೆರವು ನೀಡಿದ್ದಾರೆ.

LEAVE A REPLY

Please enter your comment!
Please enter your name here