ಆತನ ಕೆನ್ನೆ ಹಿಂಡಬೇಕು ಎಂದು ಆಸೆ ಪಟ್ಟ ರಮ್ಯಾ..! ಯಾರು ಆತ ಗೊತ್ತಾ?

0
295

ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ, ಮೋಹಕ ತಾರೆ ನಟಿ ರಮ್ಯಾ ಅವರು ಆಗಾಗ ಒಂದೊಂದು ಟ್ವೀಟ್ ಮಾಡುವ ಮೂಲಕ ದೊಡ್ಡ ದೊಡ್ಡ ವಿವಾದಗಳನ್ನು ಸೃಷ್ಟಿಸುತ್ತಾರೆ. ಸದಾ ಮೋದಿ ಅವರ ಕಾಲನ್ನು ಎಳೆಯುವುದರಲ್ಲಿ ನಟಿ ರಮ್ಯಾ ಅವರು ನಿರತರಾಗಿರುತ್ತಾರೆ. ಇನ್ನು ಕೇರಳದ ವೈನಾಡಿನ ಲೋಕಸಭಾ ಅಭ್ಯರ್ಥಿ ರಾಹುಲ್ ಗಾಂಧಿ ಅವರ ಪರ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ರಮ್ಯಾ ಅವರು ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡುವುದರ ಮೂಲಕ ಮತ್ತೊಮ್ಮೆ ವಿವಾದವನ್ನು ಸೃಷ್ಟಿಸಿದ್ದಾರೆ.

ಪುಟ್ಟ ಬಾಲಕರ ಗುಂಪೊಂದು ಕಾಂಗ್ರೆಸ್ ಧ್ವಜ ಹಿಡಿದು ‘ಚೌಕಿದಾರ್ ಚೋರ್ ಹೈ’ ಎಂದು ಘೋಷಣೆಯನ್ನು ಕೂಗುತ್ತಿರುವ ವಿಡಿಯೊ ಒಂದನ್ನು ರಮ್ಯಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವುದರ ಮೂಲಕ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ. ಚಿಕ್ಕ ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ ಎಂದು ರಮ್ಯಾ ಅವರನ್ನು ನೆಟ್ಟಿಗರು ಫುಲ್ ಟ್ರಾಲ್ ಮಾಡುತ್ತಿದ್ದಾರೆ.

ಇನ್ನು ಈ ವಿಡಿಯೋ ಅಪ್ಲೋಡ್ ಮಾಡಿರುವ ರಮ್ಯಾ ಅವರು ಆ ಪುಟ್ಟ ಬಾಲಕ ಎಷ್ಟು ಕ್ಯೂಟ್ ಆಗಿ ಇದ್ದಾನೆ ಆತನ ಕೆನ್ನೆಯನ್ನು ಹಿಂಡಬೇಕು ಎಂದು ಬರೆದುಕೊಳ್ಳುವ ಮೂಲಕ ಪ್ರಧಾನಿ ಮೋದಿ ಅವರನ್ನು ಪರೋಕ್ಷವಾಗಿ ಟ್ರೋಲ್ ಮಾಡಿದ್ದಾರೆ ನಟಿ ರಮ್ಯಾ.

LEAVE A REPLY

Please enter your comment!
Please enter your name here