ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರಾ ಯಶ್- ರಾಮ್ ಚರಣ್​ತೇಜ

0
9

ಕೆಜಿಎಫ್’ ಸಿನಿಮಾದ ಬಳಿಕ ನ್ಯಾಷನಲ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ಟಾಲಿವುಡ್ ನಟ ರಾಮ್ ಚರಣ್​ತೇಜ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಅವರಿಬ್ಬರ ಭೇಟಿ.

ಇತ್ತೀಚೆಗಷ್ಟೆ ಚೆನ್ನೈನಲ್ಲಿ ನಡೆದ ಬಿಹೈಂಡ್​ವುಡ್ಸ್​ ಗೋಲ್ಡ್​ ಮೆಡಲ್ಸ್​ ಸಮಾರಂಭದಲ್ಲಿ ರಾಮ್​ ಚರಣ್​ ಹಾಗೂ ಯಶ್​ ಭಾಗವಹಿಸಿದ್ದರು. ಈ ವೇಳೆ ರಾಮ್​ ಚರಣ್​ ಪ್ರತ್ಯೇಕವಾಗಿ ಯಶ್​ ಅವರನ್ನು ಭೇಟಿ ಮಾಡಿದ್ದಾರಂತೆ. ಈ ವೇಳೆ ಇಬ್ಬರೂ ನಟರು ಕುಶಲೋಪರಿ ವಿಚಾರಿಸಿಕೊಂಡಿದ್ದು, ಜೊತೆಗೆ ತಮ್ಮ ಸಿನಿಮಾಗಳ ಬಗ್ಗೆಯೂ ಚರ್ಚೆ ಮಾಡಿದ್ದಾರಂತೆ.

ಹೀಗಾಗಿ ಇವರಿಬ್ಬರ ಭೇಟಿ ಟಾಲಿವುಡ್​ ಮತ್ತು ಸ್ಯಾಂಡಲ್​ವುಡ್​ನಲ್ಲಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಇವರಿಬ್ಬರು ಸಿನಿಮಾಗಾಗಿ ಕೈ ಜೋಡಿಸಿದ್ದು, ಅದರ ಹಿನ್ನಲೆಯಲ್ಲೇ ಈ ಭೇಟಿ ನಡೆದಿದೆ ಎನ್ನಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ನಟ ವಿಜಯ್​ ದೇವರಕೊಂಡ ಹಾಗೂ ಮಲಯಾಳಂ ನಟ ನಿವಿನ್​ ಸಹ ಭಾಗವಹಿಸಿದ್ದರಂತೆ. ರಾಮ್​ ಚರಣ್​ ಸದ್ಯ ರಾಜಮೌಳಿ ಅವರ ‘ಆರ್​ಆರ್​ಆರ್​’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಯಶ್ ‘ಕೆಜಿಎಫ್​ ಚಾಪ್ಟರ್​ 2′ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here