ಹಾಟ್ ನಟಿ ರಾಕುಲ್ ಪ್ರೀತ್ ಸಿಂಗ್ ಜಿಮ್ ಮಾಡಿತ್ತಿರುವ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ

0
26

ಬಹುತೇಕ ನಟ-ನಟಿಯರಿಗೆ ಅಂದದ ಜೊತೆಗೆ ಫಿಟ್ನೆಸ್ ಸಹ ಮುಖ್ಯ. ಅದಕ್ಕಾಗಿಯೇ ಅವರು ತಮ್ಮ ಆಹಾರ ಕ್ರಮದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಜತೆಗೆ ದೇಹದ ತೂಕ ಜಾಸ್ತಿ ಆದರೆ, ಜಿಮ್​ಗೆ ಹೋಗಿ ಬೆವರಳಿಸಿ ಫಿಟ್ನೆಸ್ ಕಾಯ್ದುಕೊಳ್ಳುತ್ತಾರೆ. ಅದರಲ್ಲೂ ಸಿನಿಮಾಗಳಲ್ಲಿನ ಪಾತ್ರಕ್ಕೆಂದೇ ತೂಕ ಇಳಿಸಿಕೊಳ್ಳುವ ಹಾಗೂ ಹೆಚ್ಚಿಸಿಕೊಳ್ಳುವುದನ್ನು ಮಾಡುತ್ತಿರುತ್ತಾರೆ.

ಈಗೇಕೆ ನಾವು ತೂಕ ಹೆಚ್ಚಿಸಿ ಹಾಗೂ ಇಳಿಸಿಕೊಳ್ಳುವ ಬಗ್ಗೆ ಮಾತನಾಡುತ್ತೀದ್ದೇವೆ ಅಂದುಕೊಳ್ಳುತ್ತಿದ್ದೀರಾ? ಅದಕ್ಕೂ ಕಾರಣ ಇದೆ. ಇಲ್ಲೊಬ್ಬರು ನಟಿ ಸಿನಿಮಾದಲ್ಲಿನ ಪಾತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದಾರೆ. ಯಾರು ಆ ನಟಿ? ಚಂದನವನದಲ್ಲಿ ‘ಗಿಲ್ಲಿ’ ಸಿನಿಮಾದ ಮೂಲಕ ಸಿನಿ ಪಯಣ ಆರಂಭಿಸಿದ ನಟಿ ರಾಕುಲ್ ಪ್ರೀತ್ ಸಿಂಗ್ ಕೂಡ ಇದಕ್ಕೆ ಹೊರತಾಗಿಲ್ಲ. ಸದ್ಯ ಅಜಯ್ ದೇವಗನ್ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

 

ವಿಶೇಷ ಎಂದರೆ ಈ ಚಿತ್ರಕ್ಕಾಗಿ ಅವರು 9 ಕೆಜಿ ತೂಕ ಇಳಿಸಿಕೊಂಡು, ಸ್ಲಿಮ್ ಆಗಿದ್ದಾರೆ. ಅವರ ಲುಕ್ ನೋಡಿ ಅಭಿಮಾನಿಗಳೇ ದಂಗಾಗಿದ್ದಾರೆ. ಈ ಸಿನಿಮಾದಲ್ಲಿ ಅವರು ಫುಲ್​ ಸ್ಲಿಮ್​ ಆಗಿ ಕಾಣಿಸಿಕೊಳ್ಳಬೇಕೆಂಬ ಕಾರಣಕ್ಕೆ ರಾಕುಲ್​, ನಿರಂತರವಾಗಿ ವರ್ಕೌಟ್ ಮಾಡಿ ಬೆವರು ಹರಿಸುತ್ತಿದ್ದಾರೆ. ಫಿಟ್ನೆಸ್ ಟ್ರೇನರ್ ಕುನಾಲ್ ಗಿರ್ ಗರಡಿಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಕುನಾಲ್ ವಿಶೇಷ ಡಯಟ್ ಕ್ರಮಗಳನ್ನು ರಾಕುಲ್​ಗೆ ಸೂಚಿಸಿದ್ದು, ಅದನ್ನು ರಾಕುಲ್ ಚಾಚು ತಪ್ಪದೆ ಅನುಸರಿಸುತ್ತಿದ್ದಾರಂತೆ.

 

View this post on Instagram

 

Sky above , sand below ,peace within!! ❤️ happiness all around ! #ibizadiaries @flirtatious_india

A post shared by Rakul Singh (@rakulpreet) on

 

ಬಾಲಿವುಡ್ ಬ್ಯೂಟಿ ರಾಕುಲ್ ಪ್ರೀತ್ ಸಿಂಗ್ ಕೂಡ ಯಾರಿಗೂ ಹಿಂದೆ ಬಿದ್ದಿಲ್ಲ. ಫಿಟ್ನೆಸ್​ಗಾಗಿ ರಾಕುಲ್​ ಯೋಗ, ಜಿಮ್​ ಎಂದು ತುಂಬಾ ಸಮಯ ಕೊಡುವುದರ ಜೊತೆಗೆ ಇನ್​ಸ್ಟಾಗ್ರಾಂನಲ್ಲಿ ತಮ್ಮ ಫ್ಯಾನ್ಸ್​ಗಾಗಿ ​ಸದಾ ವರ್ಕ್​ಔಟ್​ ವಿಡಿಯೋಗಳನ್ನ ಹಂಚಿಕೊಳ್ತಾರೆ. ಸದ್ಯ ರಾಕುಲ್ ಈ ಬಾರಿ ಹೊಸದಾಗಿ ಪೋಸ್ಟ್ ವರ್ಕೌಟ್ ವಿಡಿಯೋ, ಫಿಟ್​ನೆಸ್​ ಪ್ರಿಯರಿಗೆ ಸ್ಪೂರ್ತಿ ನೀಡುತ್ತಿದೆ.

‘ನನ್ನ ಫಿಟ್​ನೆಸ್​ ಫಾರ್ಮ್​ ಅನ್ನು ಪರ್ಫೆಕ್ಟ್​ ಆಗಿರಿಸಿಕೊಳ್ಳಲು ನನ್ನ ಇನ್ನೊಂದು ಪ್ರಯತ್ನ. ಈ ಬಾರಿ 175 ಪೌಂಡ್ಸ್ ಡೆಡ್​ಲಿಫ್ಟ್ ಮಾಡುತ್ತಿದ್ದೇನೆ ಅಂತಾ ಸ್ಟ್ರಾಂಗ್ ಈಸ್ ಸೆಕ್ಸಿ ಎಂಬ ಹ್ಯಾಷ್​ಟ್ಯಾಗ್ ಬಳಸಿ ಡೆಡ್​ಲಿಫ್ಟಿಂಗ್ ವಿಡಿಯೋವನ್ನ ರಾಕುಲ್ ಪೋಸ್ಟ್ ಮಾಡಿದ್ದಾರೆ.ಫಾರ್ಮ್ ಅನ್ನು ಪರ್ಫೆಕ್ಟ್ ಆಗಿರಿಸಿಕೊಳ್ಳಲು ರಾಕುಲ್ ಪ್ರತಿನಿತ್ಯ ಜಿಮ್​ನಲ್ಲಿ ವೇಯ್ಟ್​ಲಿಫ್ಟಿಂಗ್ ಅಭ್ಯಾಸ ಮಾಡ್ತಾರಂತೆ. ಈ ಬಾರಿ ಅವರು 175 ಪೌಂಡ್ಸ್​ ಅಂದ್ರೆ ಸುಮಾರು 80 ಕೆಜಿ ಡೆಡ್​​ಲಿಫ್ಟ್ ಮಾಡಿರುವ ವಿಡಿಯೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

 

ಎರಡು ವಾರಗಳ ಹಿಂದೆ 77 ಕೆಜಿ ತೂಕದ ಡೆಡ್​ಲಿಫ್ಟ್ ಮಾಡಿದ ವಿಡಿಯೋವೊಂದನ್ನು ರಾಕುಲ್​ ಇನ್​ಸ್ಟಾದಲ್ಲಿ ಶೇರ್ ಮಾಡಿದ್ದರು. ದಿನಕಳೆದಂತೆ ಫಾರ್ಮ್ ಅನ್ನು​ ಉತ್ತಮಗೊಳಿಸಿಕೊಳ್ಳಬೇಕು ಎನ್ನುವ ರಾಕುಲ್,​ ಡೆಡ್​ಲಿಫ್ಟ್​ ತೂಕವನ್ನು ಹೆಚ್ಚಿಸಿಕೊಳ್ತಿದ್ದಾರೆ. ಸದ್ಯ ಹಾಟ್​ ಚೆಲುವೆ ರಾಕುಲ್ ಪ್ರೀತ್ ಸಿಂಗ್ ಅವರ ವರ್ಕೌಟ್​ ವಿಡಿಯೋ ಸೌಂದರ್ಯ ಆರಾಧಕರ ಕಣ್ಣಿಗೆ ತಂಪು ನೀಡುತ್ತಿದೆ.

ರಾಕುಲ್ ಇಷ್ಟು ದಿನ ಟಾಲಿವುಡ್​ನಲ್ಲಿ ಬ್ಯುಸಿ ಆಗಿದ್ದರು. ಆದ್ರೆ ಸದ್ಯ ಅಲ್ಲಿ ಅವಕಾಶ ಕಡಿಮೆಯಾಗಿರೋದ್ರಿಂದ ಬಾಲಿವುಡ್​ನತ್ತ ಹೆಚ್ಚು ಗಮನ ಹರಿಸಿದ್ದಾರೆ. ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here