ಎರಡನೇ ಮಗುವಿನ ಬಗ್ಗೆ ರಾಧಿಕಾ ಪಂಡಿತ್ ಹೇಳಿದ್ದೇನು ಗೊತ್ತಾ ? ಯಶ್ ತುಂಬಾ ವೇಗ ಅಂತೆ

0
768

ರಾಮಾಚಾರಿ ಚಿತ್ರದ ಹಾಡಿನಂತೆ ವರ್ಷಕ್ಕೊಂದು ಪಾಪು ಕೊಡಲು ತಯಾರಾಗಿರುವ ರಾಧಿಕಾ ಪಂಡಿತ್‍

ಸ್ಯಾಂಡಲ್‍ ವುಡ್‍ ನಲ್ಲಿ ಸುದ್ದಿಗಳಿಗೇನು ಬರವಿರುವುದಿಲ್ಲ. ಸದಾಕಾಲ ಒಂದಿಲ್ಲೊಂದು ಸುದ್ದಿ ಇದ್ದೇ ಇರುತ್ತದೆ. ಅವುಗಳಲ್ಲಿ ಕೆಲವೊಂದು ಸಕತ್‍ ಸುದ್ದಿ ಮಾಡಿದರೆ, ಮತ್ತೆ ಕೆಲವು ಸಪ್ಪೆಯಾಗಿರುತ್ತದೆ. ಆದರೆ ರಾಕಿಂಗ್‍ ಸ್ಟಾರ್‍ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಇತ್ತೀಚೆಗೆ ಒಂದಲ್ಲಾ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ.

ಕಳೆದ ವಾರವಷ್ಟೇ ಅವರು ತಮ್ಮ ಮಗಳಿಗೆ ನಾಮಕರಣ ಮಾಡಿ ಮಗಳಿಗೆ ಐರಾ ಎಂದು ಹೆಸರು ಇಡುವ ಮೂಲಕ ಅಭಿಮಾನಿಗಳಲ್ಲಿ ಮೂಡಿದ್ದ ಕುತೂಹಲವನ್ನು ತಣಿಸಿದ್ದರು. ಇದೇ ಹೊತ್ತಿನಲ್ಲಿ ಮತ್ತೊಂದು ಸಿಹಿ ಸುದ್ದಿಯನ್ನು ಯಶ್‍ ಅವರು ನೀಡಿದ್ದರು. ಆ ಸುದ್ದಿ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ವೈರಲ್‍ ಆಗಿತ್ತು.

 

 

View this post on Instagram

 

Round 2.. 🤗 #radhikapandit #nimmaRP

A post shared by Radhika Pandit (@iamradhikapandit) on

 

ಅದೇನೆಂದರೆ ಕೆಜಿಎಫ್‍ 2 ಚಿತ್ರದ ಚಿತ್ರೀಕರಣಕ್ಕೂ ಮುನ್ನವೇ ಯಶ್‍ ಅವರು ಮತ್ತೊಂದು ಮಗುವಿಗೆ ತಂದೆಯಾಗಲಿದ್ದಾರೆ ಎಂಬ ಸುದ್ದಿ ಶಾಕಿಂಗ್‍ ಜೊತೆಗೆ ಖುಷಿಯನ್ನು ದುಪ್ಪಟ್ಟು ಮಾಡಿತ್ತು. ಈ ಸಂಬಂಧ ಫೇಸ್ಬುಕ್‍ ಖಾತೆಗಳಲ್ಲಿ ದಂಪತಿಗಳಿಬ್ಬರೂ ಮಾಹಿತಿಯನ್ನು ಹಂಚಿಕೊಂಡಿದ್ದರು.

ಈಗ ರಾಧಿಕಾ ಪಂಡಿತ್‍ ಅವರು ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ತಮ್ಮ ಎರಡನೇ ಮಗುವಿನ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮೊದಲನೇ ಬಾರಿಗೆ ಮಗಳು ಹುಟ್ಟಿದಾಗ ಬಹುತೇಕ ಜನರು ಲಕ್ಷ್ಮಿ ಹುಟ್ಟಿದಳು ಎಂದೇ ಹೇಳುತ್ತಿದ್ದರು. ಹಾಗಾಗಿ ಲಕ್ಷ್ಮಿಯ ಹೆಸರನ್ನೇ ನಮ್ಮ ಮಗಳಿಗೆ ಇಡಬೇಕೆಂದು ನಾವು ಯೋಚನೆ ಮಾಡಿದೆವು. ಅಲ್ಲದೇ, ಅಭಿಮಾನಿಗಳು ಕೂಡ ಯಶಿಕಾ, ವೈಆರ್‍ ಅಂತೆಲ್ಲಾ ಹೆಸರನ್ನು ಸೂಚಿಸಿದ್ದರು. ಈಗಲೂ ಕೂಡ ಯಶ್‍ ಮತ್ತು ರಾಧಿಕಾ ಎರಡೂ ಹೆಸರನ್ನು ಸೂಚಿಸುವಂತೆ ಐರಾ ಎಂದೇ ಹೆಸರಿಟ್ಟಿದ್ದೇವೆ. ಐರಾ ಎಂದರೆ ಐರಾವತಿ ಎಂದರ್ಥ. ಇದು ಕೂಡ ಲಕ್ಷ್ಮಿಯ ಹೆಸರುಗಳಲ್ಲಿ ಒಂದಾಗಿದೆ ಎಂದು ರಾಧಿಕಾ ತಮ್ಮ ಮೊದಲ ಮಗಳ ಹೆಸರಿನ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.

 

 

ಈಕೆ ನಮ್ಮ ಅಂಶ ಆಗಿರುವುದರಿಂದ ನಮ್ಮ ಹೆಸರು ಕೂಡ ಅವಳ ಹೆಸರಿನ ಜೊತೆಗೆ ಸೇರಿಕೊಳ್ಳಬೇಕು ಎಂಬುದು ನಮ್ಮ ಆಲೋಚನೆಯಾಗಿತ್ತು. ಹಾಗಾಗಿ ಇಬ್ಬರ ಹೆಸರನ್ನು ಸೇರಿಸಿ ಸ್ವಲ್ಪ ಯೂನಿಕ್ ಆಗಿರುವಂತಹ ಹೆಸರನ್ನು ಇಟ್ಟಿದ್ದೇವೆ. ರಾಮಾಚಾರಿ ಚಿತ್ರದಲ್ಲಿ ಒಂದು ಹಾಡಿದೆ, ಅದೇ ರೀತಿ ನಮ್ಮ ಜೀವನದಲ್ಲಿ ಮತ್ತೊಂದು ಸಿಹಿ ಕ್ಷಣ ಬಂದಿದೆ. ನಮ್ಮ ಕುಟುಂಬಕ್ಕೆ ಇದೊಂದು ಆರ್ಶೀವಾದ ಎಂದು ಹೇಳಲು ನನಗೆ ಖುಷಿಯಾಗುತ್ತಿದೆ ಎಂದು ಖುಷಿಯಿಂದಲೇ ಹೇಳುತ್ತಾರೆ ರಾಧಿಕಾ ಪಂಡಿತ್‍.

ನಮ್ಮ ಮಗಳು ಹಿಟ್ಟಿದ ಮೇಲೆ ಎಲ್ಲವೂ ಒಳ್ಳೆಯದಾಗಿದೆ. ಮುಂದೆಯೂ ಒಳ್ಳೆಯದಾಗುತ್ತೆ ಎಂಬುದು ನಮ್ಮ ಆಶಯ. ಮೊದಲನೇ ಮಗು ಹೆಣ್ಣು. ಒಳ್ಳೆದನ್ನೇ ತಂದಿದೆ ಎಂಬುದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ. ಆದರೆ ನಮಗೆ ಹೆಣ್ಣು ಮಗು ಅಥವಾ ಗಂಡು ಮಗು ಅಂತಾ ಯಾವುದೇ ಬೇಧವಿಲ್ಲ ಎಲ್ಲವೂ ಒಂದೇ. ಮಗು ಎಂಬುದೇ ಒಂದು ಕುಟುಂಬವನ್ನು ಪರಿಪೂರ್ಣವಾಗಿಸುವ ಒಂದು ಅಂಶ ಎಂದಿದ್ದಾರೆ.

 

 

View this post on Instagram

 

Have a great weekend everyone 🤗 #radhikapandit #nimmaRP

A post shared by Radhika Pandit (@iamradhikapandit) on

 

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here