ಶತ್ರುದೇಶದ ರೇಡಾರ್ ಪತ್ತೆ ಹಚ್ಚಬಲ್ಲ ಎಮಿಸ್ಯಾಟ್ ಯಶಸ್ವಿ ಉಡಾವಣೆ

0
151

ಶತ್ರು ರಾಷ್ಟ್ರಗಳ ನೆಲೆಗಳಲ್ಲಿರುವ ರೇಡಾರ್ ಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿರುವ ಎಮಿಸ್ಯಾಟ್ ಉಪಗ್ರಹ ಸೇರಿದಂತೆ 29 ನ್ಯಾನೋ ಉಪಗ್ರಹಗಳನ್ನು ಇಸ್ರೋ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ,

ಇಸ್ರೋದ ಪಿಎಸ್ ಎಲ್ ವಿ-ಸಿ45 ರಾಕೆಟ್ ಮೂಲಕ ಡಿಆರ್ ಡಿಒ ಅಭಿವೃದ್ಧಿ ಪಡಿಸಿದ ಎಮಿಸ್ಯಾಟ್, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಸೆಟಲೈಟ್ ಸೇರಿದಂತೆ ಅಮೆರಿಕದ 24, ಸ್ವಿರ್ಟ್ಜರ್ ಲೆಂಡ್ ನ 01, ಸ್ಪೇನ್ 1, ಲಿಥುಯೇನಿಯಾದ 02 ಹೊತ್ತೊಯ್ದಿದ್ದು, 3 ಕಕ್ಷೆಗಳಲ್ಲಿ ಈ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ.

ಪಿಎಸ್​ಎಲ್​ವಿ 45 ಉಡಾಹಕ ನಿಗದಿಯಂತೆ 9.30ಕ್ಕೆ ಸರಿಯಾಗಿ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು, ಉಡಾಹಕವು ನಿಗದಿತ ಗಮ್ಯದತ್ತ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದೆ.
ಎಮಿಸ್ಯಾಟ್ ಉಪಗ್ರಹವನ್ನು ಡಿಆರ್ ಡಿಒ ಅಭಿವೃದ್ಧಿ ಪಡಿಸಿದೆ, ಮೊದಲ ಬಾರಿ ಮೂರು ವಿವಿಧ ಕಕ್ಷೆಗಳಲ್ಲಿ ರಾಕೆಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ ಎಂದು ಇಸ್ರೋ ಅಧ್ಯಕ್ಷ ಕೆ,ಶಿವನ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here