ಪ್ರೇಮಲೋಕದ ವಿಜಯ್ ಸೂರ್ಯ ಹೀರೋಯಿನ್‍ ಯಾರು ಗೊತ್ತಾ? ಇಲ್ಲಿದೆ ನೋಡಿ

0
237

ಕಲರ್ಸ್‍ ವಾಹಿನಿಯಲ್ಲಿ ಪ್ರಸಾರವಾಗುವ ಮೋಸ್ಟ್‍ ಪಾಪುಲರ್‍ ಧಾರವಾಹಿ ಅಗ್ನಿಸಾಕ್ಷಿ. ಈ ಧಾರವಾಹಿಯ ಮೂಲಕ ಸಾವಿರಾರು ಹುಡುಗಿಯರ ಮನಸ್ಸನ್ನು ಗೆದ್ದಿದ್ದ ಗುಳಿಕೆನ್ನೆಯ ಚೆಲುವ ವಿಜಯ್‍ ಸೂರ್ಯ ಅಲಿಯಾಸ್‍ ಸಿದ್ದಾರ್ಥ್‍ ಈಗ ಮತ್ತೊಂದು ಧಾರವಾಹಿಯಲ್ಲಿ ನಾಯಕನಾಗಿ ವಾಪಸ್‍ ಆಗಿದ್ದಾರೆ. ಸ್ಟಾರ್‍ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಪ್ರೇಮಲೋಕಕ್ಕೆ ಪಾದರ್ಪಣೆ ಮಾಡಿದ್ದಾರೆ.

ಈಗಾಗಲೇ ಪ್ರೇಮಲೋಕ ಧಾರವಾಹಿಯ ಪ್ರೋಮೋ ವಾಹಿನಿಯಲ್ಲಿ ಸದ್ದು ಮಾಡುತ್ತಿದೆ. ಪ್ರೋಮೋದಲ್ಲಿ ವಿಜಯ್‍ ಸೂರ್ಯ ಅವರು ಸಂಗೀತಗಾರನಾಗಿ ಎಂಟ್ರಿ ಕೊಟ್ಟಿರುವುದು ಅಭಿಮಾನಿಗಳಿಗೆ ಸಾಕಷ್ಟು ಸಂತೋಷವನ್ನುಂಟು ಮಾಡಿದೆ. ಅಲ್ಲದೇ, ಪ್ರೇಮಲೋಕ ಪ್ರೋಮೋ ಸಾಕಷ್ಟು ಜನರ ಗಮನ ಸೆಳೆದಿದೆ. ಧಾರವಾಹಿ ಹೇಗಿರಲಿದೆ ಎಂಬ ಕುತೂಹಲ ಪ್ರೇಕ್ಷಕರ ಮನಸ್ಸಿನಲ್ಲಿ ಮನೆ ಮಾಡಿದೆ.

 

 

View this post on Instagram

 

PREMALOKHA’s better half 😇..! All the best 👍🏼

A post shared by Vijay Suriya (@vijaysuriya_07) on

 

ಪ್ರೋಮೋ ಮೂಲಕವೇ ಸಾಕಷ್ಟು ಯುವ ಮನಸ್ಸುಗಳನ್ನು ಸೆಳೆದಿರುವ ವಿಜಯ್‍ ಧಾರವಾಹಿಯಲ್ಲಿ ಮತ್ತಷ್ಟು ಸರ್ಪೈಸ್‍ ಗಳನ್ನು ನೀಡುವ ಮೂಲಕ ಪ್ರೇಕ್ಷಕರನ್ನು ಸೆಳೆಯಲಿದ್ದಾರೆ ಎಂಬುದು ಸದ್ಯಕ್ಕಿರುವ ಸುದ್ದಿ. ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ವಿಜಯ್‍ ಸೂರ್ಯ ಮಾತ್ರ ಕಾಣಿಸಿಕೊಂಡಿದ್ದು, ಹಿರೋಯಿನ್‍ ಯಾರು ಎಂಬ ಕುತೂಹಲ ಹಾಗೆಯೇ ಇದೆ. ಈ ಕುರಿತು ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳಲ್ಲಿ ಈಗಾಗಲೇ ಎದ್ದಿದೆ.

ಮುದ್ದುಮುಖದ ಚೆಲುವೆಯೊಬ್ಬಳು ಈಗಾಗಲೇ ಸಿದ್ದಾರ್ಥ ಅಲಿಯಾಸ್‍ ವಿಜಯ್‍ ಸೂರ್ಯ ಅವರಿಗೆ ಜೋಡಿಯಾಗಿದ್ದಾರಂತೆ. ಆದರೆ ಆ ಚೆಲುವೆ ಯಾರು ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ವಿಜಯ್‍ಗೆ ನಾಯಕಿಯಾಗಿ ಯಾರು ಬರಲಿದ್ದಾರೆ ಎಂಬ ಪ್ರಶ್ನೆ ಎದ್ದಿರುವಾಗಲೇ ಸದ್ಯದಲ್ಲಿಯೇ ನಾಯಕಿಯಿರುವ ಪ್ರೋಮೋವನ್ನು ಬಿಡುಗಡೆ ಮಾಡಲಿರುವುದಾಗಿ ಸುವರ್ಣ ವಾಹಿನಿ ಸುಳಿವು ನೀಡಿದೆ.

 

 

View this post on Instagram

 

Well..! Since I couldn’t stay away for long .!! Here it is ..! My next .! PREMALOKHA 😇🙏🏼

A post shared by Vijay Suriya (@vijaysuriya_07) on

 

ಪ್ರೇಮಲೋಕ ಧಾರವಾಹಿ ಹಿಂದಿ ಧಾರವಾಹಿಯ ರಿಮೇಕ್‍ ಎಂಬುದು ಈಗಾಗಲೇ ತಿಳಿದಿರುವ ವಿಚಾರವೇ ಆಗಿದೆ. ಸ್ಟಾರ್ ವಾಹಿನಿಯಲ್ಲಿ ಸಾಕಷ್ಟು ಹಿಟ್‍ ಆಗಿದ್ದ ಕಸೂತಿ ಜಿಂದಗೀಕೆ ಧಾರವಾಹಿಯನ್ನೇ ಕನ್ನಡದ ತೆರೆ ಮೇಲೆ ತರಲಾಗುತ್ತಿದೆ. ಈ ಧಾರವಾಹಿಯಲ್ಲಿ ಅನುರಾಗ್‍ ಪಾತ್ರ ಬಹಳ ಜನಪ್ರಿಯತೆಯನ್ನು ಗಳಿಸಿಕೊಂಡಿತ್ತು. ಈಗ ಅದೇ ಅನುರಾಗ್‍ ಪಾತ್ರದಲ್ಲಿ ಸಿದ್ದಾರ್ಥ ಅಲಿಯಾಸ್ ವಿಜಯ್‍ ಸೂರ್ಯ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರೇಮಲೋಕ ಧಾರವಾಹಿಯಲ್ಲಿ ನಟಿಸಲು ಸಹಿ ಮಾಡಿದ ನಂತರ ಕಸೂತಿ ಜಿಂದಗೀಕೆ ಧಾರವಾಹಿಯ ಒಂದಷ್ಟು ದೃಶ್ಯಗಳನ್ನು ಈಗಾಗಲೇ ವಿಜಯ್ ಸೂರ್ಯ ವೀಕ್ಷಿಸಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ.

ಕಲರ್ಸ್‍ ವಾಹಿನಿಯ ಅಗ್ನಿಸಾಕ್ಷಿ ಧಾರವಾಹಿಯಿಂದ ವಿಜಯ್‍ ಸೂರ್ಯ ಹೊರಬಂದಾಗ ವೀಕ್ಷಕರಿಗೆ ದೊಡ್ಡ ಶಾಕ್‍ ಆಗಿತ್ತು. ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸಿದ್ದಾರ್ಥ ಪಾತ್ರದಲ್ಲಿ ಇವರು ಮನೆ ಮಾತಾಗಿದ್ದರು. ಅಲ್ಲದೇ, ವಿಜಯ್‍ ಮುಂದೆ ಧಾರವಾಹಿಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಮಾತು ಕೇಳಿ ಅಭಿಮಾನಿಗಳಿಗೆ ಬಹಳ ಬೇಸರವಾಗಿತ್ತು.

 

 

View this post on Instagram

 

Rama navamia shubhashaya 🙏🏼

A post shared by Vijay Suriya (@vijaysuriya_07) on

 

ಆದರೆ ಪ್ರೇಮಲೋಕದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಮತ್ತೊಮ್ಮೆ ತೆರೆ ಮೇಲೆ ತಮ್ಮ ನೆಚ್ಚಿನ ನಟನನ್ನು ನೋಡುವ ಅವಕಾಶ ಸಿಕ್ಕಿರುವುದಕ್ಕೆ ಸಖತ್‍ ಖುಷಿಯಾಗಿದ್ದಾರೆ. ಇನ್ನು ಮುಂದೆ ವಿಜಯ್‍ ಪ್ರತಿದಿನ ಹೊಸ ಹೊಸ ಗೆಟಪ್‍ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಲಿರುವುದಂತೂ ಸತ್ಯ.

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here