ಧ್ರುವಾ ಸರ್ಜಾ ಅವರ ಪೊಗರು ಚಿತ್ರ ರಿಲೀಸ್ ಆಗೋದು ಯಾವಾಗ ..? 2 ರಿಂದ 3 ವರ್ಷಕ್ಕೆ ಆಕ್ಷನ್ ಪ್ರಿನ್ಸ್ ಪೊಗರು ಪ್ರಮೋಷನ್.!

0
171

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ಸ್ ಸಿನಿಮಾಗಳು ಬರ್ತಿಲ್ಲ ಅಂತ ವಿತರಕರು ಪ್ರದರ್ಶಕರು ಬೊಂಬಡ ಬಾರಿಸುತ್ತಿದ್ದಾರೆ.ಆದರೆ ನಮ್ಮ ಸ್ಟಾರ್ ನಟರೊಬ್ಬರು ಎರಡು ವರ್ಷಕ್ಕೊಂದು ಮೂರು ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ ಹಾಗಾದರೆ ಯಾರದು ಆ ಪುಣ್ಯಾತ್ಮ ಯಾಕೆ ಅವರು ಎರಡು ವರ್ಷಕ್ಕೆ ಮೂರು ವರ್ಷಕ್ಕೆ ತಡವಾಗಿ ಸಿನಿಮಾ ಮಾಡ್ತಾರೆ ಈ ಬಗ್ಗೆ ಒಂದು ಪೊಗರ್ದಸ್ತ್ ಪಿಕ್ಚರ್ ಕಹಾನಿ ಹೇಳ್ತೀವಿ ಮುಂದೆ ಓದಿ.

ಮಾಡಿದ್ದು ಮೂರು ಸಿನಿಮಾ ತೆಗೆದುಕೊಂಡಿದ್ದು ಆರು ವರ್ಷ ಮೊದಲ ಮೂರು ಸಿನಿಮಾಗಳಿಂದ ಮೊದಲ ಮೂರು ಸಿನಿಮಾಗಳಿಂದ ಆಕ್ಷನ್ ಪ್ರಿನ್ಸ್ ಪಟ್ಟ ಒಬ್ಬ ಸೃಜನಾತ್ಮಕ ನಿರ್ದೇಶಕ ವಿಭಿನ್ನ ಚಿತ್ರವನ್ನು ತೆರೆಯ ಮೇಲೆ ಬಿಡಿಸೋಕೆ ಸಾಕಷ್ಟು ಸಮಯ ತೆಗೆದುಕೊಳ್ತಾರೆ. ಖಂಡಿತ ಕ್ರಿಯೇಟಿವಿಟಿಗೆ ಅಷ್ಟೊಂದು ಟೈಮ್ ಬೇಕೇ ಬೇಕಾಗುತ್ತೆ ಅಷ್ಟಾದ್ರೂ ಕೂಡಾ ವರ್ಷಕ್ಕೆರಡು ವರ್ಷಕ್ಕೊಂದು ಸಿನಿಮಾಗಳನ್ನು ಮಾಡುತ್ತಾ ತನ್ನ ಗುರಿಯನ್ನು ಸಾಧಿಸಿದ್ದಾರೆ ಡೈರೆಕ್ಟರ್ ಸಾಂಡಲ್ ವುಡ್ ಸ್ಟಾರ್ ನಟರ ಪೈಕಿ ಯಂಗ್ ಅಂಡ್ ಎನರ್ಜಿಟಿಕ್ ಹೀರೋ ಒಬ್ರು ಮಾಡಿದ್ದು ಮೂರು ಮತ್ತೊಂದು ಸಿನಿಮಾ ಆದ್ರೂ ಅದಕ್ಕೆ ಅವರು ತೆಗೆದುಕೊಂಡಿರುವ ಸಮಯ ಬರೋಬರಿ ಆರು ವರ್ಷ.

 

 

View this post on Instagram

 

Pogaru look 😉😉#druvasarja #pogaru #sandalwoodadda #sandalwood #kannadaprajegalu

A post shared by Kannada Prajegalu (@kannadaprajegalu.news) on

 

ಅವರೇ ಅಭಿಮಾನಿಗಳ ಪಾಲಿನ ಆಕ್ಷನ್ ಪ್ರಿನ್ಸ್ ವೀರ ಹನುಮ ಭಕ್ತ ಧ್ರುವ ಸರ್ಜಾ ಚಿತ್ರರಂಗಕ್ಕೆ ಬಂದು ಹತ್ತು ವರ್ಷ ಆದ್ರೂ ಮಾಡಿದ್ದು ಮೂರು ಚಿತ್ರ  ಸಾಂಡಲ್ ವುಡ್ ನಲ್ಲಿ ಇರುವ ಧ್ರುವ ಸರ್ಜಾ ನಿರ್ಧಾರವೇ ವಿಚಿತ್ರ
ಧ್ರುವ ಸರ್ಜಾ ಎನರ್ಜಿಟಿಕ್ ಪವರ್ಫುಲ್ ಆಕ್ಷನ್ ಹೀರೋ ಅವರಿಗೆ ಈ ವರ್ಷದ ಅಕ್ಟೋಬರ್ 6 ನೇ ತಾರೀಖು ಬಂದರೆ 30 ವರ್ಷ ತುಂಬಿ 31 ಕ್ಕೆ ಬೀಳುತ್ತೆ ಈಗಿನ ಚಿತ್ರ ಜಗತ್ತಿನ ಪರಿಸ್ಥಿತಿಗೆ ಒಂದು ಸಿನಿಮಾ ಹಿಟ್ ಆದರೆ ಸಾಕು ಅದೊಂದು ಹೆಸರಿನಲ್ಲಿ ಹತ್ತು ಸಿನಿಮಾ ಮಾಡುವ ಭೂಪರ ಕಾಲ ಇದು.

 

 

ಆದ್ರೆ ಧ್ರುವ ಸರ್ಜಾ ಅವರ ನಟನೆಯ ಆ ಮೂರು ಸಿನಿಮಾ ಸೂಪರ್ ಹಿಟ್ ಆದರೂ ಮಾಡಿದ್ದು ಮಾತ್ರ ಮೂರು ಮತ್ತೊಂದು ರಾಕ್ ಸ್ಟಾರ್ ಆಗ್ಬೇಕು ಅಂತ ಕನಸು ಕಂಡವರು ಧ್ರುವ ಸರ್ಜಾ ಮೈಸೂರಿನಲ್ಲಿ ಚಂದನ್ ಶೆಟ್ಟಿ ಜೊತೆ ಮ್ಯೂಸಿಕ್ ಗ್ಯಾಂಗ್ ಕಟ್ಟಿಕೊಂಡು ಬ್ಯಾಂಗ್ ಮಾಡೋಕೆ ಹೊರಟಿದ್ದರು ಆದರೆ ಮೈಯಲ್ಲಿ ಹರಿವ ರಕ್ತ ಸಿನಿಮಾದಲ್ವಾ ಸಿನಿಮಾ ರಂಗಕ್ಕೆ ನಟನಾಗಿ 2012ರಲ್ಲಿ ಕನ್ನಡದಲ್ಲಿ ಅದ್ಧೂರಿ ಚಿತ್ರದ ಮೂಲಕ ಅದ್ದೂರಿಯಾಗಿ ಎಂಟ್ರಿ ಕೊಟ್ಟುಬಿಟ್ಟರು.

ಧ್ರುವ ಸರ್ಜಾ ಫಸ್ಟ್ ಸಿನಿಮಾವೇ ಬ್ಲಾಕ್^ಬಸ್ಟರ್ ಆಗಿತ್ತು ಇನ್ಮುಂದೆ ಸಾಲು ಸಾಲು ಸಿನಿಮಾಗಳು ಧ್ರುವ ತೆಕ್ಕೆಗೆ ಬರುತ್ತೆ ಎಂದು ಗಾಂಧಿನಗರದ ಪಂಡಿತರು ಪಂಚಾಂಗ ನುಡಿದಿದ್ರು ಆದರೆ ಆಗಿದ್ದೇ ಬೇರೆ ಎರಡು ವರ್ಷದ ನಂತರ  2014 ರಲ್ಲಿ ಅನೇಕ ಏಳು ಬೀಳಿನ ನಡುವೆ ಪ್ರೇಕ್ಷಕರ ಮುಂದೆ ಬಂದಿದ್ದು ಬಹದ್ದೂರ್ ಬಹದ್ದೂರ್ ಕೂಡ ಮಾಸಿವ್ ಹಿಟ್ಟಾಯ್ತು, ಸಾಲು ಸಾಲು ಅವಕಾಶಗಳು ಧ್ರುವ ಸರ್ಜಾ ಮನೆ ಬಾಗಿಲಿಗೆ ಬಂದವು ಆದರೆ ಧ್ರುವ ಮಾಡಿದ್ದು ಭರ್ಜರಿ ಮಾತ್ರ 2014 ರಲ್ಲಿ ಬಹದೂರ್ ತೆರೆ ಕಂಡರೆ
2017 ರಲ್ಲಿ ಭರ್ಜರಿ ತೆರೆಕಂಡಿತು.

 

 

ಮೂರು ವರ್ಷ ಗ್ಯಾಪ್ ಆದ್ರೂ ಸಿನಿಮಾ ಜಯಭೇರಿ ಭಾರಿಸಿತ್ತು ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಹಿಟ್ ಕೊಟ್ಟಿದ್ದಕ್ಕೆ ಹ್ಯಾಟ್ರಿಕ್ ಆಕ್ಷನ್ ಪ್ರಿನ್ಸ್ ಪಟ್ಟವೂ ಸಿಕ್ಕಿತು,ಇನ್ನು ಎರಡು ವರ್ಷದಿಂದ ನಡಿತಾ ಇದೆ ಪೊಗರು ಶೂಟಿಂಗ್ ಎರಡು ವರ್ಷದಿಂದ ಮೂರು ವರ್ಷಕ್ಕೆ ಧ್ರುವ ಪ್ರಮೋಷನ್2012 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅರ್ಜುನ್ ಸರ್ಜಾ ಅವರ ಎರಡನೆ ಸೋದರ ಅಳಿಯ ದ್ರುವ ಸರ್ಜಾ ಎಂಟು ವರ್ಷದಲ್ಲಿ ಮಾಡಿದ್ದು ಮೂರೇ ಮೂರು ಸಿನಿಮಾ  ಕಳೆದ ಎರಡು ವರ್ಷದಿಂದ ನಂದ ಕಿಶೋರ್ ಕಲ್ಪನೆಯಲ್ಲಿ ಪೊಗರು ಚಿತ್ರ ಕ್ಯಾಮೆರಾದಲ್ಲಿ ರೋಲ್ ಆಗ್ತಾನೇ ಇದೆ.

 

 

View this post on Instagram

 

#pogaru #villains😎 @dhananjaya_ka #daali #specialstar #Natarakshasa #dhruvasarja #Dhananjaya

A post shared by Dhananjaya_Biggest_fans_club (@dhananjaya_biggest_fans_club) on

 

ಇನ್ನು ಸಿನಿಮಾ ರಿಲೀಸ್ ಮಾತು ಇರ್ಲಿ ಯಾವಾಗ ಶೂಟಿಂಗ್ ಕಂಪ್ಲೀಟ್ ಮಾಹಿತಿಯೂ ಇಲ್ಲ ಹೀಗಾದ್ರೆ ಹೇಗೆ ಸ್ವಾಮಿ ಅಂತಿದ್ದಾರೆ ಕನ್ನಡ ಮಣ್ಣಿನ ವಿತರಕರು ಪ್ರದರ್ಶಕರು.ಅಣ್ಣಾ ವರ್ಷಕ್ಕೆ ಮೂರು-ನಾಲ್ಕು ಸಿನಿಮಾ ಆದ್ರೆ ತಮ್ಮ ಒಂದೇ ಒಂದು ಅಣ್ಣಾ ಸಿನಿಮಾಗಳಲ್ಲಿ ಮುಂದು ತಮ್ಮ ಸಕ್ಸಸ್ ನಲ್ಲಿ ಮುಂದೆ ಇದೆ ಧ್ರುವ ಸರ್ಜಾರ ಅಣ್ಣ ಈಗಾಗಲೇ 25 ಸಿನಿಮಾಗಳನ್ನು ಮುಗಿಸಿದ್ದಾರೆ ಕಳೆದ ವರುಷ ನಾಲ್ಕು ಸಿನಿಮಾಗಳಲ್ಲಿ ಮಿಂಚಿದ್ದಾರೆ
ಈ ವರ್ಷ ಆರು ಸಿನಿಮಾಗಳಲ್ಲಿ ಚಿರು ಸರ್ಜಾ ಬ್ಯುಸಿಯಾಗಿದ್ದಾರೆ ಆದರೆ ಸಹೋದರ ಧ್ರುವ ಸರ್ಜಾ ಮಾತ್ರ ಒಂದೇ ಸಿನಿಮಾದಲ್ಲಿ ಹನುಮ ಭಜನೆ ಮಾಡ್ತಿದ್ದಾರೆ.

 

 

View this post on Instagram

 

#boss #engagement #exclusive #pics #classycaptures

A post shared by SARJA Fc (@sarja_fc_) on

 

ಧ್ರುವ ಸರ್ಜಾ ನಟನೆಯ ಪೊಗುರು ಸುಮ್ಮನೆ ಲೇಟ್ ಆಗ್ತಿಲ್ಲ ಅದಕ್ಕೆ ಕಾರಣ ಇದೆ ಈ ಚಿತ್ರದಲ್ಲಿ ಎಂಟನೇ ತರಗತಿ ಹುಡುಗನಾಗಿ 30 ಕೇಜಿ ಇಳಿಸಿ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿದ್ದಾರೆ. ಆಗಾಗ ಅನೇಕ ಕಾರಣಗಳಿಂದ ಶೂಟಿಂಗ್ ನಿಂತಿದೆ.ಈ ಮೊದಲು ಕೂಡ ಧ್ರುವ ನಟನೆಯ ತಮ್ಮ ಸಿನಿಮಾಗಳು ಅನೇಕ ಅಡೆತಡೆಗಳನ್ನು ದಾಟಿ ಗೆದ್ದಿದೆ, ಸದ್ಯ ಪೊಗರು ಚಿತ್ರದ ಸೆಕೆಂಡ್ ಹಾಫ್ ಶೂಟಿಂಗ್ ನಡೀತಾ ಇದೆ ಧ್ರುವ ಸರ್ಜಾರಿಗೆ ಜೋಡಿಯಾಗಿ ಸೌತ್ ಇಂಡಿಯನ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಪೊಗರು ಬಳಗದಿಂದ
ಸಿಹಿ ಸಂದೇಶ ಬರುವ ನಿರೀಕ್ಷೆಯಿದೆ ಆದರೆ ಬಹಳ ತಡವಾಗ್ತಿದೆ ಅನ್ನೋದು ಅಭಿಮಾನಿಗಳ ಮಾತು.

 

 

ಮತ್ತಷ್ಟು ಇಂಟರೆಸ್ಟಿಂಗ್ ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು .

LEAVE A REPLY

Please enter your comment!
Please enter your name here