ಪಾಂಡವಪುರ ಅಕ್ಷತಾ ಈಗ ಮಾಡುತ್ತಿರುವುದು ಏನು ಗೊತ್ತಾ ??

0
552

ಬಿಗ್ ಬಾಸ್ ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲೊಂದು,ಕಿಚ್ಚಾ ಸುದೀಪ್ ನಿರೂಪಣೆ ಇರುವ ಈ ಕಾರ್ಯಕ್ರಮ 6 ಸೀಸನ್ ಗಳನ್ನ ಯಶಸ್ವಿಯಾಗಿ ಮುಗಿಸಿದೆ.ಅನೆಕ ಸ್ಪರ್ಧಿಗಳು ಬಿಗ್ ಬಾಸ್ ಪ್ರವೆಶಿಸಿದ ನಂತರ ಉತ್ತಮವಾದ ಆವಕಾಶಳನ್ನ ಪಡೆದಿದ್ದಾರೆ.

ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸದ್ದು-ಸುದ್ದಿ ಮಾಡಿದ್ದು ಅಕ್ಷತಾ ಪಾಂಡವಪುರ  ಮತ್ತು ಎಂ.ಜೆ.ರಾಕೇಶ್. ಇವರಿಬ್ಬರ ಫ್ರೆಂಡ್ ಶಿಪ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.ಈ ನಡುವೆ ಅಕ್ಷತಾ ಪಾಂಡವಪುರ ರವರಲ್ಲಿನ ನಟನೆಯ ಪ್ರತಿಭೆಯನ್ನೂ ಜನ ಗುರುತಿಸಿದ್ದರು.

ಅಕ್ಷತಾ ಬಿಗ್ ಬಾಸ್ ಪ್ರವೆಶಿಸುವ ಮೊದಲೆ ನಟನೆಯಲ್ಲಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು,ಹಾಗೆಯೆ ಬಿಗ್ ಬಾಸ್ ನಲ್ಲಿ ನಡೆದ ಒಂದು ಟಾಸ್ಕ್ ನಲ್ಲಿಯೂ ಉತ್ತಮ ನಟಿಯಾಗಿ ಪ್ರಶಸ್ತಿ ಪಡೆದಿದ್ದರು,ಪ್ರೆಕ್ಷಕರು ಕೂಡ ಅಕ್ಷತಾ ಅವರ ನಟನೆಯನ್ನ ಮೆಚ್ಚಿದ್ದರು.

ಇದೀಗ ಬಿಗ್ ಬಾಸ್ ಮುಗಿದ ನಂತರ,ಅಕ್ಷತಾ ಆಕ್ಟಿಂಗ್ ಕೋರ್ಸ್ ಆರಂಭಿಸಿದ್ದಾರೆ,‘ಐ ಆಮ್ ಆನ್ ಆಕ್ಟರ್’ ಹೆಸರಿನಲ್ಲಿ ಅಕ್ಷತಾ ಪಾಂಡವಪುರ ಅಭಿನಯ ತರಬೇತಿ ಶುರು ಮಾಡಿದ್ದಾರೆ.ಇದು ಮೂರು ತಿಂಗಳ ತರಬೇತಿ ಆಗಿದ್ದು,ವಾರ-ವಾರಾಂತ್ಯದಲ್ಲಿ ಬ್ಯಾಚ್ ಪ್ರಕಾರ ಟ್ರೇನಿಂಗ್ ಕೊಡಲಿದ್ದಾರೆ.ಬ್ಯಾಚ್ ನಲ್ಲಿ ಹತ್ತು ಜನರಿಗೆ ಮಾತ್ರ ಅವಕಾಶ ಇದ್ದು,ಅಕ್ಷತಾ ಪಾಂಡವಪುರ ಸೇರಿದಂತೆ ರಂಗಭೂಮಿ ಕಲಾವಿದರು ಅಭಿನಯ ತರಬೇತಿ ಹೇಳಿಕೊಡಲಿದ್ದಾರೆ.

LEAVE A REPLY

Please enter your comment!
Please enter your name here