ಅಫ್ಘಾನಿಸ್ತಾನ ಯುದ್ಧದಲ್ಲಿ ಬ್ರಿಟಿಷರು ಸೋಲುವಾಗ ಬ್ರಿಟಿಷರನ್ನು ಗೆಲ್ಲಿಸಿದ್ದ”ರುದ್ರಶಿವಾ” ! ರೋಚಕ ಕಥೆಯನ್ನು ಓದಿ

0
201

ಅದು 1879 ಆಗ ಬ್ರಿಟಿಷರು ಭಾರತ ದೇಶವನ್ನು ಆಕ್ರಮಿಸಿದ್ದಾರೆ ಆಗ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿದ್ದ ಯುದ್ಧವನ್ನು ಮುಂದುವರಿಸಿತುದ್ದಿದ್ದು ಬ್ರಿಟಿಷ್ ಆರ್ಮಿ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಮಾರ್ಟಿನ್ ಮೂವರು ಅತ್ಯಂತ ಧೈರ್ಯಶಾಲಿ ಆಪೀಸರ್ ಕರ್ನಲ್ ಮಾರ್ಟಿನ್ ಆ ಯುದ್ಧವನ್ನು ಮಾಡುತ್ತಾನೆ, ತನ್ನ ಕ್ಷೇಮ ಸಮಾಚಾರವನ್ನು ಪ್ರತಿಸಲ ತನ್ನ ಹೆಂಡತಿಗೆ ಕಳುಹಿಸುತ್ತಿದ್ದ.

ಆ ಯುದ್ಧ ಒಂದು ಎರಡು ದಿನದ ಯುದ್ಧವಲ್ಲ ತಿಂಗಳ ಗಟ್ಟಲೆ ನಡೀತಾನೆ ಇದೆ, ಕೆಲವು ದಿನಗಳ ನಂತರ ತನ್ನ ಹೆಂಡತಿ ಮೇರಿಗೆ ಮಾರ್ಟಿನ್ ಕ್ಷೇಮ ಸಮಾಚಾರ ಬರುವುದು ನಿಂತು ಹೋಗುತ್ತೆ ಆಕೆಗೆ ಭಯದಿಂದ ಏನು ಮಾಡ್ಬೇಕು ಅಂತ ಅರ್ಥವಾಗುವುದಿಲ್ಲ ತನ್ನ ಗಂಡನಿಂದ ಕ್ಷೇಮ ಸಮಾಚಾರ ಬರುತ್ತೇನೊ ಅಂತ ರಾತ್ರಿ ಹಗಲು ಕಾಯ್ತಾನೆ ಇರ್ತಾಳೆ, ಒಂದು ದಿನ ಆಕೆ ತನ್ನ ಕುದುರೆಯಿಂದ ಹೊರಗೆ ಹೋಗಬೇಕಾದರೆ ದಾರಿಯಲ್ಲಿ ಬೈಜ್ಯನಾತ್ ಮಹಾದೇವಸ್ಥಾನ ಸಿಗುತ್ತೆ.

 

 

ಆ ದೇವಸ್ಥಾನದಿಂದ ಬರುವ ವೇದಾ ಮಂತ್ರಗಳಿಗೆ ಆಕೆಯಲ್ಲಿ ಏನೊ ತಿಳಿಯದ ಉತ್ಸಾಹ ಬರುತ್ತೆ, ತಕ್ಷಣ ಕುದುರೆ ಇಂದ ಇಳಿದು ದೇವಸ್ಥಾನಕ್ಕೆ ಹೋಗ್ತಾಳೆ, ಅಲ್ಲಿ ಬ್ರಾಹ್ಮಣರು ಮಹಾದೇವ ಶಿವನನ್ನು ಪೂಜೆ ಮಾಡುತ್ತಿರುತ್ತಾರೆ,
ಆಕೆಯನ್ನು ನೋಡಿದ ಬ್ರಾಹ್ಮಣರು ಆಕೆಗೆ ಏನು ಹೇಳದೆಯೇ ಆಕೆಯ ಮನಸ್ಸಿನಲ್ಲಿ ಏನೋ ಸಂಕಟ ಇದೆ ಅಂತ ತಿಳಿದುಕೊಳ್ಳುತ್ತಾರೆ ಏನಾಗಿದೆ ಅಮ್ಮ ನಿನಗೆ ಅಂತ ಕೇಳಿದಾಗ ಆಕೆ ತನ್ನ ಗಂಡನ ಬಗ್ಗೆ ಆ ಯುದ್ಧದ ಬಗ್ಗೆ ಹೇಳಿ ಕಣ್ಣೀರಿಡುತ್ತಾಳೆ.

ಆಗ ಬ್ರಾಹ್ಮಣರು ನಿನ್ನ ಸಂಕಟವನ್ನು ಆ ಮಹಾದೇವನ ಹತ್ರ ಹೇಳಿಕೊಂಡರೆ ತಪ್ಪದೇ ನಿನ್ನ ಸಮಸ್ಯೆಗೆ ಪರಿಹಾರ ತೋರಿಸ್ತಾನೆ ಅಂತ ಹೇಳ್ತಾರೆ, ಬ್ರಾಹ್ಮಣರು ಹೇಳಿದ ಮಾತುಗಳನ್ನು ಕೇಳಿದ ಮೇರಿ ಮಹಾಶಿವನನ್ನು ಪೂಜೆ ಮಾಡುವುದಕ್ಕೆ ಪ್ರಾರಂಭ ಮಾಡ್ತಾಳೆ. 11 ದಿನಗಳವರೆಗೆ ಮಹಾಶಿವನ ನಾಮ ಸ್ಮರಣೆ ಮಾಡ್ತಾಳೆ ಒಂದು ವೇಳೆ ಆ ಮಹಾಶಿವನು ನನ್ನ ಪ್ರಾರ್ಥನೆ ಕೇಳಿ ಆ ಯುದ್ಧದಿಂದ ನನ್ನ ಗಂಡನನ್ನು ಕ್ಷೇಮವಾಗಿ ಕರೆದುಕೊಂಡು ಬಂದರೆ ಆ ಬೈಜ್ಯಾನಾಥ್ ಮಹಾ ಆಲಯವನ್ನು ಪುನರ್ ನಿರ್ಮಿಸುತ್ತೇನೆ ಎಂದು ಅಂತ ಆ ಭಗವಂತನ ಹತ್ರ ಪ್ರಾರ್ಥನೆ ಮಾಡ್ತಾಳೆ, 11 ದಿನಗಳ ಮಹಾಶಿವನ ನಾಮಸ್ಮರಣೆ ನಂತರ ಆಕೆಗೆ ಒಂದು ಪತ್ರ ಬರುತ್ತೆ ಅದು ತನ್ನ ಗಂಡನಿಂದ ಬಂದ ಪತ್ರ ಅದರಲ್ಲಿ ನಾನು ಕ್ಷೇಮವಾಗಿದ್ದೇನೆ ನಿನಗೆ ನಾನು ದಿನನಿತ್ಯ ಕ್ಷೇಮ ಸಮಾಚಾರವನ್ನು ಕಳಿಸುತ್ತಾನೆ ಇದ್ದೆ.

 

 

View this post on Instagram

 

#baidyanathtemple #temple #lordshiva

A post shared by digital-canvas (@kappu.bilupu) on

 

ಆದ್ರೆ ನಮ್ಮನ್ನು ಅಫ್ಗಾನಿಸ್ತಾನ್ ಹೋರಾಟಗಾರರು ಸುತ್ತು ಹೊರೆದರಿಂದ ಸಮಾಚಾರವನ್ನು ಕಳುಹಿಸಲು ಸಾಧ್ಯವಾಗಲಿಲ್ಲ, ಅವರಿಂದ ನಾವು ತಪ್ಪಿಸಿಕೊಳ್ಳುತ್ತೀವಿ ಅಂತ ಬದುಕಿ ಬರುತ್ತೀವಿ ಅಂತ ಅಂದುಕೊಂಡಿರಲಿಲ್ಲ
ಸಾವು ನನ್ನನ್ನು ಕರೀತಿದೆ ಅನ್ನುವ ಸಮಯದಲ್ಲಿ ಭಾರತ ದೇಶದ ಯೋಗಿ ಕಾಣಿಸುತ್ತಾನೆ ಉದ್ದನೆಯ ಗುಂಗುರು ಕೂದಲು ಇರುವ ಇವರ ತೇಜಸ್ಸಿಗೆ ನನ್ನ ಕಣ್ಣೆಲ್ಲ ಮಂಜಾಗಿ ಹೋಗಿತ್ತು, ಭಸ್ಮಲಂಕಾರ ಮಾಡಿಕೊಂದಿರುವ ಆ ರುದ್ರ ರೂಪವನ್ನು ನೋಡಿದ ತಕ್ಷಣ ಆ ಹೋರಾಟಗಾರರು ಅಲ್ಲಿಂದ ಓಡಿ ಹೋದರು, ಅವರ ತೇಜಸ್ಸಿಗೆ ನಮ್ಮ ಅಪಜಯ ಕೂಡ ಜಯವಾಗಿ ಬದಲಾಗುತ್ತೆ.

ನಾವು ಯುದ್ಧದಲ್ಲಿ ಗೆಲ್ಲೋದಕ್ಕೆ ಕಾರಣ ಭಾರತ ದೇಶದಿಂದ ಬಂದ ಮಹಾಯೋಗಿನೆ ಅಂತ ಆ ಪತ್ರದಲ್ಲಿ ಬರೆದಿರುತ್ತಾನೆ, ಅಷ್ಟೇ ಅಲ್ಲ ಆ ಯೋಗಿ ನನ್ನ ಹತ್ತಿರ ನೀನು ಚಿಂತಿಸಬೇಡ ನಿನ್ನನ್ನು ರಕ್ಷಿಸಲೆಂದೆ ನಾನು ಬಂದಿರುವೆ ನಿನ್ನ ಗೃಹಿಣಿ ನಿನಗಾಗಿ ನನ್ನನ್ನು ಪ್ರಾರ್ಥಿಸುತ್ತಿದ್ದಾಳೆ. ಆ ಪ್ರಾರ್ಥನೆಯಲ್ಲಿ ಇರುವ ನಿಸ್ವಾರ್ಥವೇ ನಿನ್ನನ್ನು ಕಾಪಾಡಲು ನನ್ನನ್ನು ಬರೋ ರೀತಿ ಮಾಡಿದೆ ಅಂತ ಪಾತ್ರದಲ್ಲಿ ಮಾರ್ಟಿನ್ ಬರೀತಾನೆ, ಕೆಲವು ವಾರಗಳ ನಂತರ ಮಾರ್ಟಿನ್ ಮನೆಗೆ ಬರ್ತಾನೆ ಗಂಡ ಹೆಂಡತಿ ಇಬ್ಬರೂ ಸೇರಿ ಭೈಜ್ಯನಾತ್ ದೇವಸ್ಥಾನಕ್ಕೆ ಹೋಗ್ತಾರೆ.

ಅಲ್ಲಿರುವ ಮಹಾಶಿವನನ್ನು ನೋಡಿ ಆ ಯುದ್ಧದಲ್ಲಿ ನೋಡಿದ ಆ ಮಹಾ ಯೋಗಿ ಇವರೆ ಅಂತ ಹೆಂಡತಿಗೆ ಹೇಳ್ತಾನೆ, ಆಗಿನಿಂದ ಆ ಗಂಡ ಹೆಂಡತಿ ಇಬ್ಬರು ಮಹಾಶಿವನಿಗೆ ಭಕ್ತರಾಗುತ್ತಾರೆ ಆ ದೇವಸ್ಥಾನದ ಅಭಿವೃದ್ಧಿಗೆ ಅವರ ಹತ್ತಿರ ಇರುವ ಎಲ್ಲ ಹಣವನ್ನು ದಾನ ಮಾಡ್ತಾರೆ ದೇವಸ್ಥಾನದಲ್ಲಿ ಇವರ ಹೆಸರನ್ನು ಕೆತ್ತಿರೋದು ಈಗಲೂ ನೋಡಬಹುದು. ಈ ಕಥೆ “ದ ಹಿಡನ್ ಒರಾಕಲ್ ಆಫ್ ಇಂಡಿಯಾ” ಪುಸ್ತಕದಲ್ಲಿ ಇದೆ
ನಾವು ಆ ದೇವರ ಹತ್ತಿರ ಆಸ್ತಿಗಾಗಿ ನೋ ಹಣಕ್ಕಾಗಿ ನೋ ಪ್ರಾರ್ಥನೆ ಮಾಡಬಾರದು ನಮ್ಮ ಪ್ರಾರ್ಥನೆ ಹೀಗೇ ಇರಬೇಕು.

ದೇವರ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ನಿಮ್ಮ ಜೀವನದಲ್ಲಿ ನಡೆದ ದೇವರ ಪವಾಡವನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.ಮತ್ತಷ್ಟು ಅಚ್ಚರಿಯ ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮಾಡಿ.

-ಸೂಕ್ಷ್ಮಜೀವಿ

LEAVE A REPLY

Please enter your comment!
Please enter your name here