ನಟಿ ನಿಖಿತಾಗೆ ತನ್ನ ದೇಹದ ಖಾಸಗಿ ಭಾಗಗಳ ಫೋಟೋ ಹಾಕಿದ ಕಾಮುಕ,, ಆಮೇಲೆ ಏನಾಯ್ತು ಗೊತ್ತಾ.?

0
25

ಸ್ಯಾಂಡಲ್‌ವುಡ್ ನಟಿ ನಿಖಿತಾ ತುಕ್ರಲ್‌ಗೆ ಟ್ವಿಟರ್‌ನಲ್ಲಿ ದುಷ್ಕರ್ಮಿಯೊಬ್ಬನು ಅಶ್ಲೀಲ ಚಿತ್ರಗಳನ್ನು ರವಾನಿಸಿರುವುದಾಗಿ ತಿಳಿದುಬಂದಿದೆ. ನಿಖಿತಾ ತುಕ್ರಲ್‌ ಅವರ ಟ್ವಿಟರ್ ಖಾತೆಗೆ ಅನುಯಾಯಿಯಾಗಿರುವ ಅನಾಮಿಕನೊಬ್ಬ ಈ ದುಷ್ಕೃತ್ಯವನ್ನು ಮಾಡಿದ್ದು, ತನ್ನ ದೇಹದ ಖಾಸಗಿ ಭಾಗಗಳ ದೃಶ್ಯಗಳನ್ನು ಕ್ಲಿಕ್ಕಿಸಿಕೊಂಡು ನಿಖಿತಾ ಅವರ ಟ್ವಿಟರ್ ಖಾತೆಗೆ ರವಾನಿಸಿದ್ದಾನೆ. ಇದನ್ನು ಕಂಡ ನಿಖಿತಾ ಗಾಬರಿಗೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಗಣ್ಯರು ಅಭಿಮಾನಿಗಳೊಂದಿಗೆ ಮಾತನಾಡಲು ಒಂದು ವೇದಿಕೆಯಾಗಿದ್ದು, ಇದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಶ್ಲೀಲ ಚಿತ್ರ ಹಾಗೂ ಮಾತುಗಳನ್ನು ನನಗೆ ಟ್ವೀಟ್ ಮಾಡಬೇಡಿ, ನನ್ನ ಟ್ವಿಟರ್ ಖಾತೆ ಇರುವುದು ಅಭಿಮಾನಿಗಳೊಂದಿಗೆ ಮಾತನಾಡುವುದಕ್ಕಾಗಿ, ದುರುಪಯೋಗ ಪಡಿಸಿಕೊಳ್ಳುವ ಜನರಿಗಾಗಿ ಅಲ್ಲ ಎಂದು ನಿಖಿತ ಟ್ವಿಟ್ಟರ್ ಟ್ವೀಟ್ ಮಾಡಿದ್ದಾರೆ. ಈ ವಿಷಯದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ನಿಖಿತಾ, ನನ್ನ ಟ್ವಿಟರ್ ಖಾತೆಗೆ ಅನಾಮಿಕನೊಬ್ಬ ತನ್ನದೇ ಅಶ್ಲೀಲ ಚಿತ್ರ ಹಾಗೂ ಸಂದೇಶಗಳನ್ನು ಪ್ರತೀ ನಿತ್ಯ ನಿರಂತರವಾಗಿ ಹಾಕುತ್ತಿದ್ದಾನೆ.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

Cinema samayam

A post shared by nikithathukral (@nikitha_thukral_official) on

ಕೆಲವರಲ್ಲಿ ಇಂತಹ ಕೆಟ್ಟ ವ್ಯಕ್ತಿತ್ವ ಇರುತ್ತದೆ. ಅದು ಒಂದು ರೀತಿಯ ಖಾಯಿಲೆ ಇದ್ದ ಹಾಗೆ ಇಂತಹ ವ್ಯಕ್ತಿಗಳಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುತ್ತದೆ. ಈ ರೀತಿಯ ಸಮಸ್ಯೆ ನನ್ನೊಬ್ಬಳಿಗೆ ಎದುರಾಗಿರುವಂತಹದ್ದಲ್ಲ. ಪ್ರತಿಯೊಬ್ಬ ಮಹಿಳೆಯೂ ಇಂತಹ ಸಮಸ್ಯೆಯನ್ನು ಒಂದಲ್ಲ ಒಂದು ರೀತಿ ಪ್ರತಿನಿತ್ಯ ಎದುರಿಸುತ್ತಲೇ ಇರುತ್ತಾರೆ. ಇಂತಹ ಕೆಲಸಗಳನ್ನು ಪ್ರತಿಯೊಬ್ಬರು ಖಂಡಿಸಬೇಕು ಎಂದು ನಿಖಿತಾ ಹೇಳಿದ್ದಾರೆ.

 

View this post on Instagram

 

A post shared by nikithathukral (@nikitha_thukral_official) on

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here