ಎದ್ದು ಹೋಗಬೇಡಿ ಪ್ಲೀಸ್ ಎಂದು ಕೈ ಮುಗಿದು ಮನವಿ ಮಾಡಿದ ನಿಖಿಲ್ ! ಆಮೇಲೆ ಏನಾಯ್ತು ​ ??

0
428

ಮಳವಳ್ಳಿಯಲ್ಲಿ ನಡೆದ ಜೆಡಿಎಸ್ ಸಮಾರಂಭ ವೇಳೆ ನಿಖಿಲ್​ ಕುಮಾರಸ್ವಾಮಿ ಅವರ ಭಾಷಣ ಕೇಳಿ ನಿರುತ್ಸಾಹದಿಂದ ಎದ್ದು ಹೋಗುತ್ತಿದ್ದ ಕಾರ್ಯಕರ್ತರನ್ನು ನೋಡಿ ನಿಖಿಲ್​ ತಮ್ಮ ಸೀತಾರಾಮ ಕಲ್ಯಾಣ ಚಿತ್ರದ ಹಾಡು ಹೇಳಿ, ಕುಣಿದು ರಂಜಿಸಿದಲ್ಲದೆ, ದಯವಿಟ್ಟು ಯಾರೂ ಎದ್ದು ಹೋಗಬೇಡಿ ಎಂದು ಕೈ ಮುಗಿದು ಮನವಿ ಮಾಡಿದ ಘಟನೆ ನಡೆದಿದೆ.

ಸಮಾವೇಶದಲ್ಲಿ ಮಾತನಾಡಿದ ಅವರು ಈಗಾಗಲೇ ಎಲ್ಲರೂ ಬೆಂಬಲ ನೀಡಿದ್ದಾರೆ. ನನ್ನ ಸ್ಪರ್ಧೆಗೆ ವರಿಷ್ಠರು ಹಾಗೂ ಸ್ಥಳೀಯ ನಾಯಕರ ಜೊತೆ ಚರ್ಚೆ ನಡೆಸಿದ್ದೇವೆ. ಕಾರ್ಯಕರ್ತರು ಹಾಗೂ ಜಿಲ್ಲೆಯ ಜನತೆಯ ಒತ್ತಾಯದಿಂದ ನನಗೆ ಲೋಕಸಭಾ ಚುನಾವಣೆಯ ಟಿಕೆಟ್ ನೀಡಿದ್ದಾರೆ ಎಂದು ಹೇಳಿದರು.

 

 

 

 

ಜೆಡಿಎಸ್ ಪಕ್ಷ ಟಿಕೆಟ್ ಕೊಟ್ಟಿರುವುದರಿಂದ ನಮ್ಮ ತಂದೆ ಮೇಲೆ ಜಿಲ್ಲೆಯ ಜನರು ಇಟ್ಟಿರುವ ನಿರೀಕ್ಷೆ ಉಳಿಸಿಕೊಳ್ಳುತ್ತೇನೆ. ಮಳವಳ್ಳಿ ಜನತೆ ಜತೆ ಎಲ್ಲ ವಿಚಾರಗಳನ್ನು ಹಂಚಿಕೊಂಡಿದ್ದೇನೆ. ಜಿಲ್ಲೆಯ ಜನರು ಯಾವ ತೀರ್ಪು ಕೊಡ್ತಾರೆ, ಅದನ್ನು ಕಾದುನೋಡಬೇಕಿದೆ ಎಂದರು.

ರಾಜಕಾರಣದಲ್ಲಿ ಸಂಬಂಧಗಳನ್ನು ಹಾಳು ಮಾಡುವುದಕ್ಕೆ ಬಿಡಲ್ಲ. ರಾಜಕಾರಣದಲ್ಲಿ ಯಾರೋ ಬೇಕಾದರೂ ಸ್ಪರ್ಧೆ ಮಾಡಬಹುದು. ಎಲ್ಲರ ಸ್ಪರ್ಧೆಯನ್ನು ನಾನು ಸ್ವಾಗತಿಸುತ್ತೇನೆ. ಹಾಗೇ ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಅಂತಿಮ ತೀರ್ಪು ನೀಡುವುದು ಮಂಡ್ಯದ ಜನತೆ ಮಾತ್ರ. ಯಾವುದೇ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳೊದಿಲ್ಲ ಎಂದು ಹೇಳಿದರು.

ನಮ್ಮ ಕುಟುಂಬ ಎಲ್ಲರಿಗೂ ಒಳ್ಳೆಯ ನಡತೆಯನ್ನು ಹೇಳಿಕೊಟ್ಟಿದೆ. ಮಹಿಳೆಯರಿಗೆ ಗೌರವ ಕೊಡುವುದನ್ನು ಹೇಳಿಕೊಟ್ಟಿದೆ. ರೇವಣ್ಣ ಸಾಹೇಬರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here