ಭಾರತದ ಈ ಕೆಟ್ಟ ರಸ್ತೆ ನೋಡಿ ಜಗತ್ತೇ ಬೆಚ್ಚಿ ಬಿದ್ದಿದೆ.! ನೀವು ಹೋಗುವ ರಸ್ತೆಯನ್ನು ಹೇಗೆ ಮಾಡಬಹುದು ಗೊತ್ತಾ..?

0
376

ಭಾರತದಲ್ಲಿ ಜನ ವಯಸ್ಸಾಗಿ ಸಾಯುತ್ತಾರೋ ಗೊತ್ತಿಲ್ಲ ಆದರೆ ಆಕ್ಸಿಡೆಂಟ್ ನಿಂದ ಸಾಕಷ್ಟು ಜನ ಸಾಯುತ್ತಿದ್ದಾರೆ. ಈ ಫೋಟೋಗಳನ್ನು ಒಮ್ಮೆ ನೋಡಿ ಇದು ಯಾವುದೇ ವಿದೇಶದಲ್ಲಿ ಕಂಡು ಬರುವ ದೃಶ್ಯ ಅಲ್ಲ ನಮ್ಮ ದೇಶದಲ್ಲಿ ನಡೆದಿರುವಂತಹ ಘಟನೆಗಳಿವೂ ಅದೆಷ್ಟು ಜನರನ್ನು ಬಲಿ ಪಡೆದುಕೊಂಡಿದೆ ಭಾರತದ ರಸ್ತೆಗಳು.

 

ಈ ಹುಡುಗನ ಸಾವಿಗೆ ಕಾರಣ ಏನು ಗೊತ್ತಾ ರಸ್ತೆಯಲ್ಲಿದ್ದ ಹೊಂಡ, ಈ ಘಟನೆ ಆತನ ತಂದೆಯನ್ನು ಎಷ್ಟು ಕಾಡಿತ್ತು ಅಂದ್ರೆ ನನ್ನ ಮಗನಿಗೆ ಬಂದಿರುವ ಗತಿ ಬೇರೆ ಯಾರಿಗೂ ಬರಬಾರದು ಅಂತ ತನ್ನ ಸ್ವಂತ ಖರ್ಚಿನಲ್ಲಿ ರಸ್ತೆ ಹೊಂಡಗಳನ್ನು ಮುಚ್ಚುವಂತ ಕೆಲ್ಸ ಮಾಡ್ತಾ ಇದ್ದಾರೆ ಅದು ಇಂದಿಗೂ ಕೂಡ ಆದ್ರೆ ನಮ್ಮ ಜನಪ್ರತಿನಿಧಿಗಳಿಗೆ ಏನಾಗಿದೆ ..? ನಾವು ಲಕ್ಷ ಲಕ್ಷ ಕೋಟಿ ಟ್ಯಾಕ್ಸ್ ಕಟ್ಟುತ್ತೀವಿ ಆದ್ರೆ ಆ ಹಣವೆಲ್ಲ ಎಲ್ಲಿ ಹೋಗುತ್ತಿದೆ …? ಒಬ್ಬ ಪ್ರಧಾನಿಯ 5 ವರ್ಷದ ಆದಾಯ 2.5 ಕೋಟಿ
ಅದೇ ನಮ್ಮ ಎಂ.ಎಲ್ಎ, ಎಂ.ಪಿಗಳ ಆದಾಯ 100, 200, 300, 500 ಕೋಟಿ ಇದಪ್ಪಾ ಇಂಡಿಯಾ
ವಿದೇಶಗಳಲ್ಲಿ ರಸ್ತೆಗಳ ನಿರ್ಮಾಣ ಕರಪ್ಶನ್ ಇಲ್ಲದೆ ನಡೆಯುತ್ತೆ.
ಅದೇ ನಮ್ಮ ದೇಶದಲ್ಲಿ ಎಂಎಲ್ಎ ಗುತ್ತಿಗೆದಾರರಿಂದ ಹಿಡಿದು ಎಲ್ಲಾ ನುಂಗೋರೆ ಬರೇ ಇದು ಫ್ಯಾಕ್ಟ್.

ಹಾಗಾದ್ರೆ ಬದಲಾವಣೆ ಸಾಧ್ಯ ಇಲ್ವಾ ??
ಖಂಡಿತ ಸಾಧ್ಯ ಎಂತಹ ಟೆಕ್ನಾಲಜಿಗಳು ಜಗತ್ತಿನಲ್ಲಿ ಇವೆ ಗೊತ್ತಾ.? ನಿಮ್ಮೆಲ್ಲರಗು ಇದು ಗೊತ್ತಾಗಲೇ ಬೇಕು
ಬನ್ನಿ ಆ ಟೆಕ್ನಾಲಜಿಯ ಬಗ್ಗೆ ಸಣ್ಣದಾಗಿ ತಿಳಿಸುವ ಪ್ರಯತ್ನ ಮಾಡುತ್ತೇನೆ.

1 ) ಜೀಯೋವೆಡ್ (geowed )

 

 

ಈ ಟೆಕ್ನಿಕ್ನಿಂದ ರೋಡ್ ಮಾಡುವುದು ತುಂಬಾ ಸುಲಭ ಮಧ್ಯ ಅಷ್ಟೇ ನೀಟ್ ಆದ ರೋಡ್ ನಿರ್ಮಾಣ ಆಗುತ್ತೆ
ಜಪ್ಪಯ್ಯ ಅಂದ್ರೂ ಅಷ್ಟು ಬೇಗ ಇದು ಕ್ರ್ಯಾಕ್ ಬೀರುವುದಿಲ್ಲ ಅಂತಹ ಟೆಕ್ನಿಕ್ ಇದು.
ಇಂತಹ ರೂಟ್ ಮಾಡಿದ್ರೆ ಅದೆಲ್ಲಿ ಟಾರ್ ಎದ್ದೇಳುತ್ತೆ ನೋಡಣ. ಗ್ರಾಮೀಣ ರಸ್ತೆಗಳಲ್ಲಿ ಟಾರು ನಿಲ್ಲಲ್ಲ ಅಂತ ಗುತ್ತಿಗೆದಾರರು ಮಾತಾಡ್ತಾರೆ,ಇಂಥ ಸಿಸ್ಟಂ ಅನ್ನು ಒಂದು ಸಲ ತಂದು ನೋಡಿ ಗದ್ದೆಯನ್ನು ಚೆಂದದ ರಸ್ತೆ ಮಾಡಬಹುದು. ವಿಶ್ವದ ಹೆಚ್ಚಿನ ರಸ್ತೆಗಳಲ್ಲಿ ಈ ಸಿಸ್ಟಮ್ ಇದೆ.ಆದರೆ ಭಾರತದಲ್ಲಿ ಇಂದಿಗೂ ಬರಿ ಡಾಂಬಾರ್ ಇದೆ.

2) ರಂಬಲ್ ಸ್ಟ್ರಿಪ್ಸ್ (rumble strips )

 

 

ಮದುವೆಯಿಂದ ಬರುವಾಗ ಪಾರ್ಟಿಯಿಂದ ಬರುವಾಗ ಅದೆಷ್ಟೋ ಕುಟುಂಬಗಳು ರೋಡ್ ಅಪಘಾತ ದಿಂದ ಸತ್ತಿದ್ದಾರೆ. ಇದಕ್ಕೆ ಕಾರಣ ಎರಡೇ ಒಂದು ಡ್ರೈವರಿಗೆ ಏರಿದ ನಶೆ ಇನ್ನೊಂದು ಆತನ ನಿದ್ದೆ ಇವೆರಡರಿಂದ ಡ್ರೈವರ್ ಒಂದೊಂದು ಸಲ ರಾಂಗ್ ಸೈಡ್ನಲ್ಲಿ ಹೋಗ್ತಾನೆ. ನಶೆಯಲ್ಲಿ ಇದ್ರೆ ದೃಷ್ಟಿಯ ಪವರ್ ತುಂಬಾ ಕಡಿಮೆ ಆಗುತ್ತೆ ಇದರಿಂದ ಗಾಡಿ ಆಯತಪ್ಪೋದು ಸಹಜ. ಇದನ್ನು ತಡೆಯೋಕೆ ಅಂತಾನೆ ವಿದೇಶದಲ್ಲಿ ಒಂದು ಸಣ್ಣ ಟೆಕ್ನಾಲಜಿ ಯನ್ನ ಯೂಸ್ ಮಾಡ್ತಾ ಇದ್ದಾರೆ. ಇದಕ್ಕೆ ಅಂತಹ ದೊಡ್ಡ ಖರ್ಚು ಆಗುವುದಿಲ್ಲ
ವಿದೇಶಿಗರಲ್ಲಿ ರಸ್ತೆಯ ಬಾರ್ಡರ್ ಗಳಲ್ಲಿ ಈ ರೀತಿ ಮಾದಿರ್ತಾರೆ, ಇದರಿಂದ ರಸ್ತೆಯಿಂದ ಗಾಡಿ ಆ ಕಡೆ ಕ್ರಾಸ್ ಆಗುತ್ತಿದ್ದಂತೆ. ನಮಗೆ ಕ್ಷಣ ಮಾತ್ರದಲ್ಲಿ ಗೊತ್ತಾಗುತ್ತದೆ. ಇದರಲ್ಲಿ ಡ್ರೈವರ್ ಕೂಡ ಸೇಫ್, ಗಾದಿನೂ ಸೇಪ್.
ಇಂತಹ ಸರಳವಾದ ಸಿಸ್ಟಂ ಭಾರತಕ್ಕೂ ಬೇಕಲ್ವಾ.

3) ಇಂಟೆಲಿಜೆನ್ಟ್ ಸ್ಪೀಡ್ ಬ್ರೇಕರ್( intelligent speed breaker )

 

 

ನಮ್ಮ ದೇಶದ ರಸ್ತೆಗಳಲ್ಲಿ ಸ್ಪೀಡ್ ಬ್ರೇಕರ್ಸಿದೆ ಆದರೆ ಅಂತ ಸ್ಪೀಡ್ ಬ್ರೇಕರ್ ಮೇಲೆ ಆರೋಗ್ಯ ಸರಿ ಇಲ್ಲದವರು ಹೋದ್ರೆ ಗಡಗಡ ಅನ್ನುವಷ್ಟರಲ್ಲಿ ಅವರ ಪ್ರಾಣನೇ ಹೋಗಿರುತ್ತದೆ.ಆದರೆ ಈ ಸ್ಪೆಷಲ್ ಇಂಟೆಲಿಜೆನ್ಸ್ ಪೀಡ್ ಬ್ರೇಕರ್ ಗಳನ್ನು ನೋಡಿ, ಇದರ ಕೆಳಗೆ ಕಾಂಕ್ರಿಟ್ ಹಾಕಿರಲ್ಲ ಒಂದು ರೀತಿಯ ಸ್ಪೆಷಲ್ ಮೆಟೀರಿಯಲ್ನ ಫಿಲ್ ಮಾಡಿರ್ತಾರೆ ಇದರಿಂದ ಯಾರಿಗೂ ಕಷ್ಟ ಆಗಲ್ಲ. ಒಂದು ರೀತಿಯ ಶಾಕ್ ಅಬ್ಸರ್ ರೀತಿಯಲ್ಲಿ ವರ್ಕ್ ಮಾಡುತ್ತೆ
ಇಂತ ಇಂಟೆಲಿಜೆನ್ಸ್ ಸ್ಪೀಡ್ ಬ್ರೇಕರ್ಸ್ ನಮ್ಮ ದೇಶಕ್ಕೆ ಅಗತ್ಯ ಇದೆ.

ಜಗತ್ತಿನಲ್ಲಿ ರೋಡ್ ಗಳು ಅತ್ಯಾಧುನಿಕ ಆಗ್ತಾನೆ ಇದೆ, ಜಗತ್ತಿನ ವೇಗಕ್ಕೆ ತಕ್ಕಂತೆ ಅಭಿವೃದ್ಧಿ ಆಗ್ತಾ ಇದೆ
ನಮ್ಮ ದೇಶದಲ್ಲಿ ರೋಡ್ ರಿಪೇರಿ ಆಗ್ಬೇಕು ಅಂದ್ರೆ ಒಂದು ಎಲೆಕ್ಷನ್ ಬರಬೇಕು ಅಥವಾ ಜನ ರೊಚ್ಚಿಗೆದ್ದು ಪ್ರತಿಭಟನೆಗೆ ಕೂರಬೇಕು. ಹೋದ ವರ್ಷ ಭಾರತದಲ್ಲಿ 4.64 ಲಕ್ಷ ರಸ್ತೆ ಅಪಘಾತಗಳು ನಡೆದಿವೆ ಅದರಲ್ಲಿ 1 ಲಕ್ಷದ 48 ಸಾವಿರ ಜನ ಸತ್ತಿದ್ದಾರೆ. ಇವರೆಲ್ಲರ ಸಾವಿಗೆ ನೇರ ಹೊಣೆ ನಮ್ಮ ಎಂ.ಎಲ್ಎ ಎಂ.ಪಿಗಳು.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here