ದರ್ಶನ ಜೊತೆ ಹಾಟ್ ಆಗಿ ನಟಿಸಿದ್ದ ನಟಿ ಈಗ ಹಾಟ್ ಆಗಿ ಸರ್ಕಾರ ರಚಿಸಿದಳು ! ಯಾರು ಗೊತ್ತಾ ಈ ನಟಿ .?

0
1347

ಮಹಾರಾಷ್ಟ್ರದ ಅಮರಾವತಿಯಲ್ಲಿ ಗೆದ್ದ ಪಂಚ ಭಾಷಾ ನಟಿ ನವನೀತ್ ಕೌರ್ ರಾಣಾ(34) ಇದೀಗ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಯುವ ಸ್ವಾಭಿಮಾನ ಪಕ್ಷದ(ವೈಎಸ್‍ಪಿ) ಅಭ್ಯರ್ಥಿಯಾಗಿ ಮಹಾರಾಷ್ಟ್ರದ ಅಮರಾವತಿಯ ನೂತನ ಸಂಸದೆಯಾಗಿ ಇವರು ಆಯ್ಕೆಯಾಗಿದ್ದಾರೆ.

ಇವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ನಟಿಸಿದ್ದ ನಾಯಕಿಯಾಗಿದ್ದಾರೆ.

ಕಾಂಗ್ರೆಸ್ ಮತ್ತು ವೈಎಸ್‍ಪಿ ಮೈತ್ರಿಕೂಟದ ಬೆಂಬಲದೊಂದಿಗೆ ನವನೀತ್ ಕಣಕ್ಕೆ ಇಳಿದು ಭರ್ಜರಿ ಜಯ ಗಳಿಸಿದ್ದಾರೆ. ಅಲ್ಲದೆ ಈ ಮೈತ್ರಿಕೂಟದಲ್ಲಿ ಗೆದ್ದ ಏಕೈಕ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ನವನೀತ್ ಪಾತ್ರರಾಗಿದ್ದಾರೆ.

 

 

ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಲ್ಲಿ ನಟಿ ನವನೀತ್ ಕೌರ್ ರಾಣಾ ಅವರು ಶಿವಸೇನೆಯ ಆನಂದ್‍ರಾವ್ ಅದ್ಸಲ್ ವಿರುದ್ಧ ಸ್ಪರ್ಧಿಸಿದ್ದು. ಆನಂದ್ ರಾವ್ ಅವರನ್ನು ಈ ಬಾರಿ 37,295 ಮತಗಳಿಂದ ಸೋಲಿಸಿ ನವನೀತ್ ಗೆಲುವು ಸಾಧಿಸಿದ್ದಾರೆ. ಆನಂದ್ ರಾವ್ ರವರು 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದು ಈ ಬಾರಿ ನಟಿ ನವನೀತ್ ರಿಂದ ಸೋಲುವುದರ ಮೂಲಕ ಅಚ್ಚರಿ ಉಟುಮಾಡಿದ್ದಾರೆ.

ನವನೀತ್ ಕೌರ್ ಅವರಿಗೆ 5,07,844 ಮತಗಳು ಬಿದ್ದಿದ್ದರೆ, ಆನಂದ್ ರಾವ್ ಅವರಿಗೆ 4,70,549 ಮತಗಳು ಬಂದಿದ್ದು. ಚುನಾವಣಾ ಕಣದಲ್ಲಿ ಅಚ್ಚರಿಯ ಗೆಲುವನ್ನು ತನ್ನದಾಗಿಸಿಕೊಂಡಿದ್ದಾರೆ.
ಈ ಕ್ಷೇತ್ರದಲ್ಲಿ ಒಟ್ಟು 25 ಮಂದಿ ಸ್ಪರ್ಧಿಸಿದ್ದರು.

 

ನವನೀತ್ ಕೌರ್ ತಂದೆ-ತಾಯಿ ಪಂಜಾಬ್ ಮೂಲದವರಾಗಿದ್ದರೂ ಕೂಡ ಇವರು ಮುಂಬೈ ನಲ್ಲಿ ಜನಿಸಿದರು
ಇವರ ತಂದೆ ಸೇನಾಧಿಕಾರಿಯಾಗಿದ್ದರು. ಪಿಯುಸಿಯಲ್ಲಿ ಅರ್ಧಕ್ಕೆ ಕೈಬಿಟ್ಟಿದ್ದ ನವನೀತ್ ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಬಳಿಕ ಚಿತ್ರರಂಗ ಪ್ರವೇಶಿಸಿದರು ಪ್ರಸ್ತುತದಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಮಹಾರಾಷ್ಟ್ರದ ಅಮರಾವತಿಯ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.

 

ಇನ್ನಷ್ಟು ಇಂಟ್ರೆಸ್ಟಿಂಗ್ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

-ಅಮಾಯಕ 

LEAVE A REPLY

Please enter your comment!
Please enter your name here