ಉಗ್ರರು ನಡೆಸಿದ ಕೃತ್ಯಕ್ಕೆ ದೇಶಾದ್ಯಂತ ಭಾರತ ಮುಸ್ಲಿಂರ ಖಂಡನೆ; ಇಲ್ಲಿದೆ ನೋಡಿ ವೈರಲ್ ವಿಡಿಯೋ ,

0
324

ಕಾಶ್ಮೀರ್ ಕಣಿವೆಯಲ್ಲಿ ಪಾಕಿಸ್ತಾನದ ಉಗ್ರರು ನಡೆಸಿದ ವಿಧ್ವಂಸಕ ಕೃತ್ಯಕ್ಕೆ ದೇಶಾದ್ಯಂತ ವ್ಯಕ್ತವಾಗುತ್ತಿದೆ. ಮುಸ್ಲಿಂ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದಾರೆ.

ಉಗ್ರರ ದಾಳಿ ನಂತರ ಕೆಲ ಮುಸ್ಲಿಂ ಸಮುದಾಯದ ವ್ಯಕ್ತಿಗಳು ಘಟನೆಯನ್ನ ಸಮರ್ಥಿಸಿಕೊಂಡು ಫೇಸ್ ಬುಕ್ ವ್ಯಾಟ್ಸಾಫ್ ಗಳಲ್ಲಿ ಪೋಸ್ಟ್ ಹಾಕಿದ್ದರು. ಇನ್ನೂ ಕೆಲವರು ಇದನ್ನ ಖಂಡಿಸುವ ಗೋಜಿಗೂ ಹೋಗಿರಲಿಲ್ಲ.‌ ಆದರೆ ಬೀದರ್ ಮುಸ್ಲಿಂ ಸಮುದಾಯದವರು ಘಟನೆ ಖಂಡಿಸಿ ಬೀದಿಗಿಳಿದರು. ಉಗ್ರರ ದಾಳಿ ಖಂಡಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದಾರೆ.

ಈ ವೇಳೆ ಪಾಕಿಸ್ತಾನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನರು, ವೀರ ಜವಾನ್ ಅಮರ್ ರಹೇ ಪಾಕಿಸ್ತಾನ ಮುರ್ದಾಬಾದ್ ಎಂದು ಘೋಷಣೆ ಕೂಗಿದರು. ಅಲ್ಲದೆ ಭಾರತ ಸರ್ಕಾರ ಕೂಡಲೇ ಘಟನೆ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಅಂತ ಒತ್ತಾಯಿಸಿದರು.

LEAVE A REPLY

Please enter your comment!
Please enter your name here