ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಸತ್ತಿಲ್ಲ,,11 ನಿಮಿಷಗಳ ಆಡಿಯೋ ಮಾಡಿ ಭಾರತಕ್ಕೆ ಸವಾಲ್ !

0
253

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್‍, ಉಗ್ರ ಮಸೂದ್ ಅಜರ್ ಕಿಡ್ನಿ ವೈಫಲ್ಯದಿಂದ ಸತ್ತ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದ್ರೀಗ ತಾನು ಸತ್ತಿಲ್ಲ ಚೆನ್ನಾಗಿಯೇ ಇದ್ದೇನೆ ಎಂದು ಆಡಿಯೋ ಒಂದನ್ನು ಬಿಡುಗಡೆ ಮಾಡಿ ಶಾಕ್ ನೀಡಿದ್ದಾನೆ. ಅಲ್ಲದೆ ಭಾರತದ ವಿರುದ್ಧ ಜಿಹಾದ್ ಆರಂಭಿಸಬೇಕೆಂದು ತನ್ನ ಹಿಂಬಾಲಕರಿಗೆ ಕರೆ ನೀಡಿದ್ದಾನೆ.

 

ಇದೇ ವೇಳೆ ಜೈಶ್-ಎ-ಮೊಹಮ್ಮದ್‍ ಉಗ್ರ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ಪಾಕಿಸ್ತಾನ ಸರ್ಕಾರದ ವಿರುದ್ಧ ಮಸೂದ್ ಅಜರ್ ಕಿಡಿಕಾರಿದ್ದಾನೆ. ಭಾರತದ ಒತ್ತಾಯದ ಮೇರೆಗೆ ಕ್ರಮ ಕೈಗೊಳ್ತಿರೋ ಪಾಕ್ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಉಗ್ರ ಮಸೂದ್‍ ಕಿರುಕುಳ ನೀಡುವುದನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದಾನೆ.

ಮಸೂದ್ ಅಜರ್ ಬಿಡುಗಡೆ ಮಾಡಿರುವ 11 ನಿಮಿಷಗಳ ಆಡಿಯೋದಲ್ಲಿ ಭಾರತದ ವಿರುದ್ಧ ಕೆಂಡಕಾರಿದ್ದಾನೆ. ತಾನು ಸತ್ತಿಲ್ಲ ಅಂತಾ ಹೇಳಿರುವ ಮಸೂದ್ ಅಜರ್, ಜಿಹಾದ್ ಆರಂಭಿಸಲು ತನ್ನ ಸಹಚರರಿಗೆ ಕರೆ ನೀಡಿದ್ದಾನೆ.

ಇನ್ನು ಮಲಾಲ ಕುರಿತು ಮಾತನಾಡಿರುವ ಉಗ್ರ, ಇಂತಹ ಪ್ರಗತಿಪರರಿಗೆ ದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶ ಕೊಡಲ್ಲ ಅಂತಾ ಎಚ್ಚರಿಕೆ ನೀಡಿದ್ದಾನೆ. ಒಟ್ನಲ್ಲಿ ಮೋಸ್ಟ್ ವಾಂಟೆಡ್‍ ಉಗ್ರ ಸತ್ತ ಎಂದು ನೆಮ್ಮದಿಯ ನಿಟ್ಟುಸಿರುಬಿಡುವಷ್ಟರಲ್ಲಿ, ಆಡಿಯೋ ಬಿಡುಗಡೆ ಮಾಡಿ ತಾನು ಬದುಕಿರುವುದಾಗಿ ಹೇಳಿದ್ದಾನೆ.

LEAVE A REPLY

Please enter your comment!
Please enter your name here