ಮಾವ ನಾಗಾರ್ಜುನರ ರಾಸಲೀಲೆ ಕಂಡು ಬೇಸತ್ತು ಹೋದ ನಟಿ ಸಮಂತಾ..!

0
12

ಕೆಲವು ಸ್ಟಾರ್‍ಗಳು ಚಿತ್ರರಂಗದಲ್ಲಿ ಇಂದಿಗೂ ಯಂಗ್‍ ಅಂಡ್‍ ಎನರ್ಜಿಟಿಕ್‍ ಆಗಿ ಕಾಣುತ್ತಾರೆ. ಯಾವ ವಯಸ್ಸಿನಲ್ಲೂ ಮನ್ಮಥನಂತೆ ಕಾಣಿಸುತ್ತಾರೆ. ಟಾಲಿವುಡ್‍ ನಲ್ಲಿ ಅಕ್ಕಿನೇನಿ ನಾಗಾರ್ಜುನ ಕೂಡ ಹಾಗೆಯೇ. 60 ವರ್ಷ ದಾಟಿದರೂ ಬಾಕ್ಸ್‍ ಆಫೀಸ್‍ ಕೊಳ್ಳೆ ಹೊಡೆಯುವ ಚಿರ ಯುವಕ.

ಇತ್ತೀಚೆಗಷ್ಟೇ ‘ಮನ್ಮಥುಡು 2’ ಚಿತ್ರದಲ್ಲಿ ನಾಯಕನಾಗಿ ನಟಿಸಿ ಟಾಲಿವುಡ್‍ ಅಭಿಮಾನಿಗಳ ಮನದಲ್ಲಿ ಚಿಟ್ಟೆ ಬಿಟ್ಟಿದ್ದಾರೆ. ಅಲ್ಲದೇ ಬಾಕ್ಸ್‍ ಆಫೀಸ್ ನಲ್ಲಿ ತಕ್ಕಮಟ್ಟಗೆ ಸದ್ದು ಮಾಡಿದೆ. 60ರ ನಂತರವೂ ನಾಗಾರ್ಜುನರ ನಟನಾ ಶೈಲಿ ಮತ್ತು ಸ್ಮೈಲ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ತೆರೆ ಮೇಲಿನ ಮನ್ಮಥ ನಾಗಾರ್ಜುನನ ಅವತಾರಕ್ಕೆ ಅಭಿಮಾನಿಗೆಳು ಸೈ ಎನ್ನುವುದು ಇಂದಿಗೆ ಹೊಸದೇನಲ್ಲ. ಈ ಹಿಂದೆಯೂ ಇದು ನಡೆದುಕೊಂಡು ಬಂದಿದೆ. ಪರದೆ ಮೇಲೆ ನಾಗಾರ್ಜುನ​ ಮಾಡುವ ರೋಮ್ಯಾನ್ಸ್​ ಅಭಿಮಾನಿಗಳಿಗೆ ಕಚಗುಳಿ ಇಟ್ಟಂತಾಗುತ್ತದೆ.

ಆದರೆ ನಾಗಾರ್ಜುನ ಅವರ ಮಗ ನಾಗಚೈತನ್ಯ ಮತ್ತು ಸೊಸೆ ಹಾಗೂ ನಟಿ ಸುಮಂತಾಗೆ ಮಾವನ ಮನ್ಮಥ ಲೀಲೆ ಇರುಸು ಮುರುಸಾಗುವಂತೆ ಮಾಡಿದೆಯಂತೆ. ನಾಗಾರ್ಜುನ ಈ ವಯಸ್ಸಿನಲ್ಲಿ ‘ಮನ್ಮಥುಡು 2’ ಚಿತ್ರದಲ್ಲಿ ಸಿಕ್ಕಾಪಟ್ಟೆ ರೊಮ್ಯಾಂಟಿಕ್​ ಬಾಯ್‍ ಆಗಿ, ಲಿಪ್​ ಲಾಕ್ ಮಾಡುವುದು ಮತ್ತು ಹಸಿಬಿಸಿ ದೃಶ್ಯಗಳಲ್ಲಿ ನಟಿಸಿರುವುದು ನಟಿ ಸಮಂತಾಗೆ ಸ್ವಲ್ಪವೂ ಇಷ್ಟವಾಗಿಲ್ಲವಂತೆ.

ಆರಂಭದಲ್ಲಿ ಚಿತ್ರದ ಕಥೆ ಕೇಳಿದ ಕೂಡಲೇ ಆಸ್ಥೆ ವ್ಯಕ್ತಪಡಿಸದ ಸುಮಂತಾ ಅವರು ಚಿತ್ರ ಬಿಡುಗಡೆಯಾದ ನಂತರ ಯಾವುದೇ ಪ್ರಚಾರ ಕಾರ್ಯಕ್ರಮಗಳಲ್ಲಾಗಲೀ, ಸುದ್ದಿಗೋಷ್ಠಿಗಳಲ್ಲಾಗಲೀ, ಚಿತ್ರದ ಪ್ರೀಮಿಯರ್‍ ಶೋಗಳಲ್ಲಿ ಕಾಣಿಸಿಕೊಳ್ಳದೇ ಹೋದುದನ್ನು ಕಂಡು ನಾಗಾರ್ಜುನರಿಗೆ ತಮ್ಮ ತಪ್ಪಿನ ಅರಿವಾಗಿದೆಯಂತೆ. ಆದರೆ ನಾಗಾರ್ಜುನ ಅವರು ಆರಂಭದಲ್ಲಿ ತಮಾಷೆಯಾಗಿ ತೆಗೆದುಕೊಂಡಿದ್ದು, ನಂತರದ ದಿನಗಳಲ್ಲಿ ಅದು ಅರಿವಿಗೆ ಬಂದಿತು ಎನ್ನಲಾಗಿದೆ.

 

View this post on Instagram

 

Meet Our Sam #NagarjunaAkkineni and Avantika @rakulpreet in theatres from tomorrow 😍 #Manmadhudu2onaugust9th #Manmadhudu2

A post shared by Manmadhudu 2 (@manmadhudu2) on

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here