ಈ ವ್ಯಕ್ತಿ ಬರೋಬ್ಬರಿ 256 ವರ್ಷಗಳ ಕಾಲ ಬದುಕಲು ಕಾರಣ ಗೊತ್ತಾ..?

0
43

1933 ರಲ್ಲಿ ಚೀನಾದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದ. ಆತನ ಸಾವನ್ನು ಇಡೀ ಪ್ರಪಂಚವೇ ಆಶ್ಚರ್ಯದಿಂದ ನೋಡಿದ್ದು, ಒಬ್ಬ ಮನುಷ್ಯ ಹುಟ್ಟಿದ ನಂತರ ಒಂದಲ್ಲ ಒಂದಿನ ಸಾಯೋದು ಗ್ಯಾರಂಟಿ. ಆದರೆ , ಈ ವ್ಯಕ್ತಿಯ ಸಾವಿನ ಬಗ್ಗೆ ಎಲ್ಲರೂ ಯಾಕೆ ಇಷ್ಟೊಂದು ತಲೆಕೆಡಿಸಿಕೊಂಡಿದ್ದರು ಅಂದ್ರೆ ಅಂದು ಮೃತಪಟ್ಟಿದ್ದ ವ್ಯಕ್ತಿಯ ವಯಸ್ಸು ಬರೋಬರಿ 256 ವರ್ಷಗಳಾಗಿತ್ತು. ಆ ಮೃತ ಪಟ್ಟಿದ್ದ ವ್ಯಕ್ತಿ ಹೆಸರು ಲೆ ಚಿನ್ ಯಂಗ್ ಅಂತ ಈ ಕಾಲದಲ್ಲಿ ಒಬ್ಬ ವ್ಯಕ್ತಿ ನೂರು ವರ್ಷಗಳ ಕಾಲ ಬದುಕಿದ್ದ ಅಂದರೆ ಅಬ್ಬಬ್ಬ ಅಂತಾರೆ ಆದರೆ, ಈ ವ್ಯಕ್ತಿ ಮಾತ್ರ 256 ವರ್ಷಗಳ ಕಾಲ ಬದುಕಿದ್ದ ಎಂದು ಜಗತ್ತೇ ಅಚ್ಚರಿಗೊಂಡಿದೆ.

ಚರಿತ್ರೆಯಲ್ಲಿ ಅಷ್ಟು ವರ್ಷಗಳ ಕಾಲ ಬದುಕಿ ಮೃತ ಪಟ್ಟಿದ್ದ ವ್ಯಕ್ತಿ ಈತನೊಬ್ಬನೆ. ಚೈನಾದ ಸಿಯಾಚಿನ್ ಪ್ರದೇಶದಲ್ಲಿ 1677 ರಲ್ಲಿ ಈತ ಹುಟ್ಟಿದ ದಾಖಲೆಗಳಿವೆ. ಹತ್ತನೇ ವರ್ಷದಲ್ಲೇ ಪರ್ವತಶ್ರೇಣಿಗಳಲ್ಲಿ ಗಿಡಮೂಲಿಕೆಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಈತ ತನ್ನ 22ನೇ ವಯಸ್ಸಿನಲ್ಲಿ ಈತ ಆಯುರ್ವೇದಿಕ್ ಹಾಗೂ ಮಾರ್ಷಿಯಲ್ ಆರ್ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ . ಈತ ಉತ್ತಮ ಆಹಾರ ,ಗಿಡಮೂಲಿಕೆ ಮತ್ತು ರೈಸ್ ಸೇವಿಸಿದ್ದರಿಂದ ಲಿ ಚೆನ್ ಯಂಗ್ ಇಷ್ಟು ವರ್ಷಗಳ ಕಾಲ ಬದುಕಲು ಸಾಧ್ಯವಾಯಿತು.ಎಂದು ಸಂಶೋಧನೆಗಳು ಹೇಳುತ್ತವೆ.

ಈ ವ್ಯಕ್ತಿ ತನ್ನ ಜೀವನವಿಡೀ ಬದುಕಿದ್ದು ಪರ್ವತಶ್ರೇಣಿ, ಕಾಡುಗಳಲ್ಲಿ ಲಿಚೆನ್ ತಮ್ಮ ಜೀವಿತಾವಧಿಯಲ್ಲಿ 17 ತಲೆಮಾರುಗಳನ್ನು ನೋಡಿದ್ದಾರಂತೆ, 1773 ರಲ್ಲಿ ನಡೆದ ಸಂಶೋಧನೆಗಳಲ್ಲಿ ಚಿನ್ ಗೆ 24 ಹೆಂಡತಿಯರು ಇದ್ದರಂತೆ ಆಗಿನಕಾಲದಲ್ಲಿ 24 ಹೆಂಡತಿಯರನ್ನು ಹೊಂದಿದ್ದ ವ್ಯಕ್ತಿ ಈತ. ಈತನ ಮೊಮ್ಮಕ್ಕಳ ಸಂಖ್ಯೆ ಸುಮಾರು ಇನ್ನೂರಕ್ಕೂ ಹೆಚ್ಚು ಎಂದು ಹೇಳಲಾಗುತ್ತದೆ. ಚೀನಾದಲ್ಲಿ ಇವರ ವಯಸ್ಸಿನ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಸಂಗೂರು ವಿಶ್ವವಿದ್ಯಾನಿಲಯ ನಡೆಸಿದ ಸಂಶೋಧನೆಯ ಪ್ರಕಾರ ಈತ ಹುಟ್ಟಿದ್ದು 1677 ಮತ್ತೊಂದು ಸಂಶೋಧನೆಯ ಪ್ರಕಾರ ಈತ ಹುಟ್ಟಿದ್ದು 1636 ರಲ್ಲಿ ಎಂದು ಹೇಳಲಾಗುತ್ತದೆ.

ಈ ಎರಡು ಸಂಶೋಧನೆಗಳ ಪ್ರಕಾರ ಲಿಚೆನ್ ಗೆ 256 ವರ್ಷ ಅಥವಾ 123 ವರ್ಷ ವಯಸ್ಸಾಗಿದೆ ಎಂದು ಹೇಳಲಾಗುತ್ತದೆ. ಇವರು 256 ವರ್ಷ ಬದುಕಿದ್ದರೆಂದು ಅದನ್ನು ಬಿಟ್ಟು ಹಾಕಿದರೂ 197 ವರ್ಷ ಬದುಕಿದ್ದರು ಎನ್ನುವುದು ಒಂದು ಆಶ್ಚರ್ಯದ ಸಂಗತಿ ಈಗ ವ್ಯಕ್ತಿಯ ವಯಸ್ಸು ಸರಾಸರಿ 79 ವರ್ಷಕ್ಕೆ ಇಳಿದಿದೆ. ಇಷ್ಟು ದಿನ ಬದುಕೋದೇ ಒಂದು ದೊಡ್ಡ ಸಾಧನೆ ಎಂದು ಹೇಳಬಹುದು ಇಷ್ಟು ವರ್ಷ ಬದುಕುವುದೇ ಪ್ರಪಂಚದ ಮತ್ತು ವೈಜ್ಞಾನಿಕತೆಯ ಒಂದು ಹೊಸ ತಿರುವು ಎಂದು ಹೇಳಬಹುದು. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು

LEAVE A REPLY

Please enter your comment!
Please enter your name here