ನಟಿ ಮಹಾಲಕ್ಷ್ಮಿ ಅವರು ಈಗ ಏನು ಮಾಡುತ್ತಿದ್ದಾರೆ ಈಗ ಎಲ್ಲಿದ್ದಾರೆ ಗೊತ್ತಾ…?

0
271

ಮಹಾಲಕ್ಷ್ಮಿ ಒಂದು ಕಾಲದಲ್ಲಿ ಯುವಕರ ಡ್ರೀಮ್ ಗರ್ಲ್. ಕನ್ನಡದ ಅತ್ಯದ್ಭುತ ನಟಿಯರಲ್ಲಿ ಇವರೂ ಒಬ್ಬರು ಡಾ. ರಾಜ್ ಕುಮಾರ್ ದಿಂದ ಹಿಡಿದು ರವಿಚಂದ್ರನ್ ವರೆಗೂ ನಟಿಸಿರುವ ಈ ನಟಿಯ ಜೀವನ ಮಾತ್ರ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿದೆ. ಕನ್ನಡದ ಟಾಪ್ ನಟನ ( ಆತ ನಿರ್ದೇಶಕ ಹಾಗೂ ನಿರ್ಮಾಪಕ ) ಕೂಡ ಜೊತೆ ಮಹಾಲಕ್ಷ್ಮಿ ಸ್ನೇಹ ಬೆಳೆಯಿತು ದಿನ ಕಳೆದಂತೆ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತು. ಇಬ್ಬರೂ ತುಂಬಾ ಗಾಢವಾದ ಪ್ರೀತಿಯಲ್ಲಿ ಮುಳುಗಿದ್ದರು ಎಷ್ಟರ ಮಟ್ಟಿಗೆ ಅಂದರೆ ಇಬ್ಬರನ್ನು ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ ಅನ್ನೋ ಹಾಗೆ.

 

(ಈ ಮೇಲೆರುವ ವಿಡಿಯೋ ನೋಡಿ)ಇವರ ಪ್ರೀತಿಯ ವಿಷಯ ನಟನ ಮನೆಯಲ್ಲಿ ಗೊತ್ತಾಯಿತು ಇದು ಮನೆಯಲ್ಲಿ ಕೋಲಾಹಲ ಸೃಷ್ಟಿಸಿತು, ಮಹಾಲಕ್ಷ್ಮಿಯನ್ನು ಮದುವೆಯಾಗುವುದು ನಟನ ಮನೆಯವರಿಗೆ ಇಷ್ಟ ಇರಲಿಲ್ಲ. ಆದ್ದರಿಂದ ದಿಢೀರ್ ಅಂತ ಒಂದು ಹುಡುಗಿಯನ್ನು ನೋಡಿ ನಟನಿಗೆ ಮದುವೆ ಮಾಡಿದರೂ ಮನೆಯವರು. ಅಲ್ಲಿಗೆ ಮಹಾಲಕ್ಷ್ಮಿ ಪ್ರೀತಿ ಮುರಿದು ಬಿತ್ತು. ಈ ನಟಿ ತುಂಬಾ ಸ್ವಾಭಿಮಾನದ ಒಳ್ಳೆಯ ಹುಡುಗಿ  ಪ್ರೀತಿ ಫೇಲ್ಯೂರ್ ಆಗಿದ್ದೇ ತಡ ಪೀಕ್ ನಲ್ಲಿದ್ದ ಟೈಮ್ನಲ್ಲೇ ಚಿತ್ರರಂಗವನ್ನು ತೊರೆದರೂ ಮಹಾಲಕ್ಷ್ಮಿ.

 

ಕೊನೆಗೆ ಮನೆಯವರು ಈ ನಟಿಗೆ ಮದುವೆ ಮಾಡಿದರು. ಹಲವಾರು ಕಾರಣಗಳಿಂದ ಮೊದಲನೆಯ ಪತಿಗೆ ವಿಚ್ಛೇದನ ಕೊಟ್ಟರೂ ಮಹಾಲಕ್ಷ್ಮಿ ಹಾಗೆ ಎರಡನೆಯ ಮದುವೆ ಕೂಡ ತುಂಬಾ ಕಾಲ ಉಳಿಯಲಿಲ್ಲ
ಮೂರನೆಯ ಮದುವೇನೂ ಮುರಿದು ಬಿದ್ದಾಗ ಮಹಾಲಕ್ಷ್ಮಿಗೆ ಮಾನಸಿಕ ಖಿನ್ನತೆ ಕಾಡಿತ್ತು. ಪ್ರೀತಿ , ಸಾಂಸಾರಿಕ ಜೀವನದಿಂದ ನೊಂದು ಬೆಂದ ಮಹಾಲಕ್ಷ್ಮಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಎಲ್ಲವನ್ನು ತ್ಯಜಿಸಿ ಸನ್ಯಾಸತ್ವವನ್ನು ಸ್ವೀಕರಿಸಿ ಚೆನ್ನೈನ ಒಂದು ಚರ್ಚ್ ನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ
ಪ್ರೀತಿ ಆಕೆಯ ಜೀವನವನ್ನೇ ನಾಶ ಮಾಡಿತ್ತು.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here