5 ಎಕರೆ ಹೊಲ ಇದೆ ನನ್ನ ಮದುವೆಯಾಗಿ ಎಂದ ಅಭಿಮಾನಿ, ಇದಕ್ಕೆ ಟಾಪ್ ನಟಿ ಕೊಟ್ಟ ಉತ್ತರ ಏನು..?

0
48

ಲಕ್ಷ್ಮಿ ರೈ ಒಬ್ಬ ಭಾರತೀಯ ಚಲನಚಿತ್ರ ನಟಿ ಮತ್ತು ರೂಪದರ್ಶಿ, ಅವರು ಪ್ರಧಾನವಾಗಿ ತಮಿಳು ಮತ್ತು ಮಲಯಾಳಂ ಮತ್ತು ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಜೂಲಿ 2 ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಉಪೇಂದ್ರ ಜೊತೆಗೆ ಕಲ್ಪನಾ ಚಿತ್ರದಲ್ಲಿ ನಟಿಸಿದ್ದ ನಟಿ ಲಕ್ಷ್ಮಿ ರೈ ಅವರಿಗೆ ಅಭಿಮಾನಿಯ ವತಿಯಿಂದ ಲವ್ ಪ್ರಪೋಸ್ ಬಂದಿದ್ದು ಇದಕ್ಕೆ ನಗುನಗುತ್ತಲೇ ಪ್ರತಿಕ್ರಿಯೆ ನೀಡಿದ್ದಾರೆ ಲಕ್ಷ್ಮಿ.

ಸಾಮಾಜಿಕ ಜಾಲತಾಣಗಳ ಮೂಲಕ ಸಿನಿಮಾ ತಾರೆಯರು ನೇರವಾಗಿ ತಮ್ಮ ಅಭಿಮಾನಿಗಳ ಜೊತೆಗೆ ಸಂಪರ್ಕ ಇಟ್ಟುಕೊಂಡಿರುತ್ತಾರೆ ಹೀಗೆ ಸಂಪರ್ಕವನ್ನು ನಟಿ ಲಕ್ಷ್ಮಿ ರೈ ಸಹ ಇಟ್ಟುಕೊಂಡಿದ್ದಾರೆ. ಹೀಗಿರುವಾಗ ಅಭಿಮಾನಿಯೊಬ್ಬ ಅವರಿಗೆ ತನ್ನನ್ನು ಮದುವೆಯಾಗುವಂತೆ ಪ್ರಪೋಸ್ ಮಾಡಿದ್ದಾನೆ. “ನನ್ನನ್ನು ಮದುವೆಯಾಗುತ್ತೀರಾ..? ನನ್ನ ಹತ್ತಿರ 5 ಎಕರೆ ಹೊಲ ಇದೆ. ಒಂದು ಸುಂದರ ಮನೆ ಮತ್ತು ಸ್ಕೂಟರ್ ಇದೆ
ಜೊತೆಗೆ ನನ್ನ ಅಗಾಧ ಪ್ರೀತಿ ಇದೆ” ಎಂದು ಟ್ವಿಟ್ಟರ್ ನಲ್ಲಿ ಬೇಡಿಕೆ ಇಟ್ಟಿದ್ದಾನೆ.(ಈ ಕೆಳಗಿರುವ ವಿಡಿಯೋ ನೋಡಿ)

 

ಅದಕ್ಕೆ ಕೂಲ್ ಆಗಿಯೇ ಪ್ರತಿಕ್ರಿಯಿಸಿರುವ ಲಕ್ಷ್ಮಿ ರೈ ಅಭಿಮಾನಿಯ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ. “ನಿಮ್ಮ ಪ್ರೊಪೊಸಲ್ ಗೆ ತುಂಬಾ ಥ್ಯಾಂಕ್ಸ್ ಆದರೆ ನನಗೆ ಸದ್ಯಕ್ಕೀಗ ಮದುವೆಯಾಗುವ ಯೋಚನೆ ಇಲ್ಲ ನಿಮ್ಮ ಲೈಫಿನಲಿ ಸುಂದರವಾದ ಹುಡುಗಿ ಬರಲಿ” ಎಂದು ಹೇಳಿದ್ದಾರೆ ಲಕ್ಷ್ಮೀ ರೈ. ಇದಕ್ಕೆ ಪ್ರತಿಯಾಗಿ ಮತ್ತೊಂದು ಟ್ವೀಟ್ ಮಾಡಿರುವ ಅಭಿಮಾನಿ “ನಮ್ಮ ತಾಯಿ ಮತ್ತು ನಿಮ್ಮ ತಾಯಿಯ ಹೆಸರು ಒಂದೇ ಇದೆ ಹೀಗಾಗಿ ನಾನು ನಿಮಗೆ ಪ್ರಪೋಸ್ ಮಾಡಿದ್ದು” ಎಂದಿದ್ದಾನೆ.

ಇನ್ನು ಇದನ್ನು ಕೂಲ್ ಆಗಿಯೇ ತೆಗೆದುಕೊಂಡಿದ್ದಾರೆ ನಟಿ ಲಕ್ಷ್ಮಿ ರೈ. ಇದೀಗ ಲಕ್ಷ್ಮಿ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಕನ್ನಡದ ಮಿಂಚಿನ ಓಟ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here