ಕೆ.ಜಿ.ಎಫ್ ಚಾಪ್ಟರ್ 2 ಫಸ್ಟ್ ಲುಕ್ ಯಶ್ ಫ್ಯಾನ್ ಇಂದ ಸದ್ದಿಲ್ಲದೇ ಬಿಡುಗಡೆ, ನೋಡಿ ಒಮ್ಮೆ ! ವೈರಲ್ ಕೆ.ಜಿ.ಎಫ್

0
208

ಕೆಜಿಎಫ್ ಎಂಬ ಬ್ರ್ಯಾಂಡ್ ಜಗತ್ತು ಕನ್ನಡ ಚಿತ್ರರಂಗವನ್ನು ನೋಡುತ್ತಿದ್ದ ರೀತಿಯನ್ನು ಬದಲು ಮಾಡಿತ್ತು
ಕಡಿಮೆ ಖರ್ಚಿನಲ್ಲಿ ಹೇಗೆ ಬೆಸ್ಟ್ ಕ್ಯಾಲಿಟಿ ಸಿನಿಮಾವನ್ನು ಪಡೆಯಬಹುದು ಎಂಬುದನ್ನು ತೋರಿಸಿತು
ಸಾಂಡಲ್ ವುಡ್ ಇತಿಹಾಸದಲ್ಲಿ ಅತಿ ದೊಡ್ಡ ಯಶಸ್ಸು ಗಳಿಸಿದ ಸಿನಿಮಾ, ಚಿತ್ರದ ಕಥೆ, ಹಾಗೂ ಮೇಕಿಂಗ್ ಕ್ವಾಲಿಟಿ ಯಿಂದ ದೇಶ ವಿದೇಶಗಳ ಸಿನಿ ರಸಿಕರು ಕೂಡ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು

ಈ ಚಿತ್ರದ ಚಿಕ್ಕ ಪುಟ್ಟ ಮಾಹಿತಿಗಳಿಗೂ ಅಭಿಮಾನಿಗಳು ಕಾಯುತ್ತಿದ್ದಾರೆ, ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ ಇನ್ನು ಇತ್ತೀಚೆಗೆ ಮೈಸೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ, ಇದೇ ಆಗಸ್ಟ್ ತಿಂಗಳಲ್ಲಿ ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಿಡುಗಡೆ ಮಾಡಲು ಅಗತ್ಯವಿರುವ ಎಲ್ಲಾ ಫೋಟೊ ಶೂಟ್ ಮಾಡಲಾಗಿದೆ
ಆಗಸ್ಟ್ ನಲ್ಲಿ ನಮ್ಮ ಯಶ್ ಫಸ್ಟ್ ಲುಕ್ ಬರಲಿದೆ.

 

 

ನಂತರ ಚಿತ್ರದ ತಾರಾಗಣದ ಕುರಿತು ಇರುವ ಗೊಂದಲ ಬಗೆಹರಿಸಲು ಎಲ್ಲ ಪಾತ್ರಗಳ ಫಸ್ಟ್ ಲುಕ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಅದಕ್ಕಾಗಿ ಪ್ರಶಾಂತ್ ನೀಲ್ ಹಾಗೂ ಕೆಜಿಎಫ್ ತಂಡ ಬಹಳ ಶ್ರಮಪಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ ಫ್ಯಾನ್ ಪೋಸ್ಟರ್ಸ್ ಅಂತೂ ಸಿನಿಮಾಗಿಂತ ಸದ್ದು ಮಾಡುತ್ತಿವೆ.

ಸದ್ಯ ಒಂದು ಹಂತದ ಚಿತ್ರೀಕರಣ ಮುಗಿಸಿ ವಿರಾಮದಲ್ಲಿರುವ ಯಶ್ ಬಿಯಾರ್ಡೋ ಕಂಪನಿಯ ಜಾಹೀರಾತಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು, ಹಾಗೆ ಇತ್ತ ಕೆಜಿಎಫ್ ತಂಡ ಚಿತ್ರಕ್ಕೆ ಬೇಕಿರುವ ಸೆಟ್ಗಳ ನಿರ್ಮಾಣ ಮಾಡುತ್ತಿದ್ದು, ಕೆಜಿಎಫ್ ಚಿತ್ರಕಥೆ ಕ್ವಾಲಿಟಿ ಯಾಶ್ ಆಟಿಟ್ಯೂಡ್ ಪ್ರಶಾಂತ್ ನೀಲ್ ಗೆ ಎಷ್ಟು ಹೆಸರು ಮಾಡಿತ್ತೋ ಹಾಗೆ ದೊಡ್ಡ ದೊಡ್ಡ ಸೆಟ್ ಗಳು ಅಷ್ಟೇ ಪ್ರಶಂಸೆ ಪಡೆದಿತ್ತು.

 

 

ಚಾಪ್ಟರ್ 1 ರಲ್ಲಿ ತೋರಿದ ಕರಾಚಿ ದೃಶ್ಯಗಳು ಕಣ್ಣಿಗೆ ದೃಶ್ಯ ವೈಭವವನ್ನೇ ಕಟ್ಟಿಕೊಟ್ಟಿತು ಅದರ ಕೀರ್ತಿ ಆರ್ಟ್ ಡೈರೆಕ್ಟರ್ ಶಿವಕುಮಾರ್ಗೆ ಸೇರಬೇಕು, ಚಾಪ್ಟರ್ 2 ಕೂಡ ಮೈಸೂರು ಬೆಂಗಳೂರು ಸೇರಿ ಇನ್ನು ಕೆಲ ಭಾಗಗಳಲ್ಲಿ ದೊಡ್ಡ ಮಟ್ಟದ ಸೆಟ್ಗಳು ಹಾಕಲಾಗುತ್ತಿದೆ. ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಜನ ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಈ ಬಾರಿ ಚಾಪ್ಟರ್ 1 ಕ್ಕಿಂತ ಚಾಪ್ಟರ್ 2 ಭಾರಿ ನಿರೀಕ್ಷೆ ಹುಟ್ಟಿಸಿದೆ ನೀವು ಕೆಜಿಎಫ್ ಅಭಿಮಾನಿಗಳಾಗಿದ್ದಲ್ಲಿ ರಾಕಿಂಗ್ ಸ್ಟಾರ್ ವೇಯ್ಟಿಂಗ್ ಫಾರ್ ಫಸ್ಟ್ ಲುಕ್ ಅಂತ ಕಮೆಂಟ್ ಮಾಡಿ.

 

 

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧೈರ್ಯವಾಗಲಿ

LEAVE A REPLY

Please enter your comment!
Please enter your name here