ನಟರು ಸಹಾಯ ಮಾಡಿಲ್ಲ ಎಂದ ಟಿವಿ ಚಾನೆಲ್ ಗಳಿಗೆ ಲೆಕ್ಕ ಇಲ್ಲಿದೆ, ಯಾವ ನಟ ಎಷ್ಟು ಸಹಾಯ ಮಾಡಿದ್ದಾರೆ?

0
228

ಕರ್ನಾಟಕದಲ್ಲಿ ಎಂದಿಗೂ ಕಂಡು ಕೇಳರಿಯದ ಪ್ರವಾಹ ಬಂದೆರಗಿದೆ. ಉತ್ತರ ಕರ್ನಾಟಕ ಅಕ್ಷರಶಃ ನಲುಗಿ ಹೋಗಿದೆ. ಜನ-ಜಾನುವಾರು, ಮನೆ-ಸೂರುಗಳನ್ನು ಕಳೆದುಕೊಂಡವರು ಅದೆಷ್ಟು ಜನರೋ ಬಲ್ಲವರು ಯಾರು? ವರುಣನ ಆರ್ಭಟಕ್ಕೆ ಪ್ರಕೃತಿಯ ಮುನಿಸಿಗೆ ಇಡೀ ಬದುಕೇ ಸರ್ವನಾಶವಾಗಿ ಬಿಟ್ಟಿದೆ.

ಇದೇ ಕಾರಣಕ್ಕಾಗಿ ದೇಶದಾದ್ಯಂತ ಜನರು ಧನಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ತಮ್ಮ ಕೈಲಾದಷ್ಟು ಸಹಾಯವನ್ನು ಜನರು ಮಾಡುತ್ತಿದ್ದಾರೆ. ಇಡೀ ಸಮಾಜಕ್ಕೇ ಮಾದರಿಯಾಗುವಂತೆ ರಾಜ್ಯದ ಬಹುತೇಕ ದೊಡ್ಡ ದೊಡ್ಡ ಜನರು ನೆರೆ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದಾರೆ. ಕೋಟಿ ಕೋಟಿ ಹಣ, ಆಹಾರ ಸಾಮಗ್ರಿ, ನಿತ್ಯಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ ಮತ್ತು ಮಲೆನಾಡು ಪ್ರದೇಶದಲ್ಲಿ ಪ್ರವಾಹಕ್ಕೆ ತುತ್ತಾದವರಿಗೆ ಯಾರೆಲ್ಲಾ ಎಷ್ಟೆಷ್ಟು ಸಹಾಯ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.(ಈ ಕೆಳಗಿರುವ ವಿಡಿಯೋ ನೋಡಿ)

 

ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದಾಗಿ ಜನರು ಮನೆ ಮಠ, ಜಾನುವಾರು, ಆಸ್ತಿಪಾಸ್ತಿಗಳೆಲ್ಲವನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಇಂತಹ ಸಂದರ್ಭದಲ್ಲಿ ನೆರೆ ಸಂತ್ರಸ್ತರ ಸಹಾಯಕ್ಕೆ ನಮ್ಮ ಜನರು ಮುಂದಾಗಿ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಕನ್ನಡಿಗರಿಗೆ ಸಹಾಯ ಮಾಡಲು ಎಂದೆಂದಿಗೂ ಮುಂದೆ ನಿಲ್ಲುವ ವ್ಯಕ್ತಿ ಎಂದರೆ ಶ್ರೀಮತಿ ಸುಧಾಮೂರ್ತಿ ಅವರು. ಇವರು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ 10 ಕೋಟಿ ರೂಪಾಯಿ ಧನ ಸಹಾಯ ಮಾಡುವುದರ ಜೊತೆಗೆ ಪ್ರವಾಹ ಸಂತ್ರಸ್ತರಿಗೆ ಅಗತ್ಯವಾಗಿ ಬೇಕಾದ ಆಹಾರ ಸಾಮಗ್ರಿಗಳನ್ನು ಲಾರಿಗಳಲ್ಲಿ ಸ್ವತಃ ತಾವೇ ಖುದ್ದಾಗಿ ನಿಂತು ಕಳುಹಿಸಿಕೊಡುತ್ತಿದ್ದಾರೆ.

 

 

View this post on Instagram

 

Let’s all join together🙏 #karnatakafloods #karnatakarains

A post shared by Sudharani (@sudharanigovardhan) on

 

ಸ್ಯಾಂಡಲ್‍ವುಡ್‍ನ ನಟ ದರ್ಶನ್‍ ಅವರು ತಮ್ಮ ಬಹುನಿರೀಕ್ಷಿತ ಚಿತ್ರ ‘ಕುರುಕ್ಷೇತ್ರ’ ಬಿಡುಗಡೆಯಾಗಿದ್ದರೂ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಿದ್ದಾರೆ. ಅಲ್ಲಿನ ಜನರಿಗೆ ಅಗತ್ಯವಿರುವ ವಸ್ತುಗಳನ್ನು ಪೂರೈಕೆ ಮಾಡುವ ಜೊತೆಗೆ ಅವರ ರಕ್ಷಣೆಗೆ ಸ್ವತಃ ಕೈ ಜೋಡಿಸಿ ನಿಂತಿದ್ದಾರೆ.ಕಿಚ್ಚ ಸುದೀಪ್‍ ಕೂಡ ನೆರೆ ಸಂತ್ರಸ್ತರಿಗೆ ಕಾಪಾಡುವಂತೆ ವೀಡಿಯೋವೊಂದನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುವ ಮೂಲಕ ಜನರ ಸಹಾಯಕ್ಕೆ ಮುಂದಾಗಿದ್ದಾರೆ.

 

 

ಕರ್ನಾಟಕದಲ್ಲಿ ಸಂಭವಿಸಿರುವ ನೆರೆಯನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಅವರು ನೆರೆ ಸಂತ್ರಸ್ತರ ಸಹಾಯಕ್ಕಾಗಿ ತತ್‍ಕ್ಷಣದ ಸಹಾಯಕ್ಕಾಗಿ 240 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಿ. ಎಸ್‍. ಯಡಿಯೂರಪ್ಪನವರು ತತ್‍ಕ್ಷಣದ ಸಹಾಯಕ್ಕಾಗಿ 100 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲೂ ಬೆಳಗಾವಿ ಜಿಲ್ಲೆಯೊಂದಕ್ಕೇ 25 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ.

 

 

ರಾಕಿಂಗ್‍ ಸ್ಟಾರ್‍ ಅವರು ಕೂಡ ತಮ್ಮ ಯಶೋಮಾರ್ಗ ಫೌಂಡೇಶನ್‍ ಮೂಲಕ ದೊಡ್ಡ ದೊಡ್ಡ ಲಾರಿಗಳಲ್ಲಿ ಆಹಾರ ಪದಾರ್ಥಗಳನ್ನು ಉತ್ತರ ಕರ್ನಾಟಕದ ಜನತೆಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ನಟ ಉಪೇಂದ್ರ, ಪುನೀತ್‍ ರಾಜ್‍ಕುಮಾರ್‍, ಗಣೇಶ್ ಅವರ ಅಭಿಮಾನಿಗಳು ಕೂಡ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದೆ. ನೀವು ಕೂಡ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಮಾನವೀಯತೆಯನ್ನು ಮೆರೆಯಿರಿ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here