ಕಾಗೆ ಕೂಗುತ್ತಿರುವ ಈ ಒಂದು ಕೆಲಸ ಮಾಡಿದ್ರೆ ನಿಮಗೆ ಯಾವಾಗಲೂ ಹಣದ ಸಮಸ್ಯೆ ಹತ್ತಿರ ಬರುವುದಿಲ್ಲ

0
367

ಸಾಮಾನ್ಯವಾಗಿ ಯಾರಾದರೂ ಯಾವಾಗಲೂ ಮಾತನಾಡುತ್ತಿದ್ದರೆ, ಏಕೆ ಯಾವಾಗಲೂ ಕಾಗೆ ತರ ವಟ ವಟ ಎನ್ನುತ್ತೀಯಾ? ಎಂದು ಹೀಯಾಳಿಸುವುದನ್ನು ನಾವು ಕೇಳಿದ್ದೇವೆ. ಮನೆ ಮುಂದೆ ಕಾಗೆ ಯಾವಾಗಲೂ ಬಂದು ಕೂಗುತ್ತಿದ್ದರೆ ಮನೆಗೆ ಯಾರೋ ಅತಿಥಿಗಳು ಬರುತ್ತಾರೆ ಎಂದು ಹಿರಿಯರು ಹೇಳುತ್ತಿದ್ದರು. ನಮ್ಮ ಪ್ರಾಣಿಗಳ ಚಲನವಲನ ಮತ್ತು ಮನುಷ್ಯನ ನಂಬಿಕೆಗಳಿಗೆ ಅವಿನಾಭಾವ ಸಂಬಂಧವಿದೆ.

ಈ ನಂಬಿಕೆಗಳು ಪ್ರಾಣಿ ಪಕ್ಷಿಗಳು ಮಾಡುವ ಶಬ್ದಗಳ ಮೇಲೆ ಆಧರಿಸಿಕೊಂಡಿದೆ. ಮನೆಯಿಂದ ಹೊರ ಬಂದಾಗ ಅಥವಾ ಹೊರಗೆ ಹೋಗುವ ವೇಳೆ ಕಾಗೆ ಒಂದೇ ಸಮನೇ ಕೂಗುತ್ತಿದ್ದರೆ ಏನಾದರೂ ಒಂದು ಶಕುನ ಕೇಳುತ್ತೇವೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಪೂರ್ವಿಕರು ಹೇಳುವಂತೆ ಕಾಗೆ ಮತ್ತು ಮನುಷ್ಯನಿಗೆ ಅವಿನಾಭಾವ ಸಂಬಂಧವಿದೆ. ಸಾವನ್ನಪ್ಪಿದ ನಂತರ ಕಾಗೆ ರೂಪದಲ್ಲಿ ನಮ್ಮ ಹಿರಿಯರು ನಮ್ಮ ನಡುವೆಯೇ ಸುತ್ತುತ್ತಿರುತ್ತಾರೆ ಎಂಬುದು ನಮ್ಮ ನಂಬಿಕೆಗಳಲ್ಲಿ ಒಂದಾಗಿದೆ. (ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

A post shared by Dorothy Ann (@glorytothecreator) on

 

ಸಾಮಾನ್ಯವಾಗಿ ಮನೆಯಿಂದ ಹೊರ ಹೋಗುವಾಗ ಕಾಗೆ ವಿಜಯದ ಸಂಕೇತವನ್ನು ನೀಡುತ್ತದೆ ಎಂಬುದು ಮತ್ತೊಂದು ನಂಬಿಕೆ. ಮನೆಯ ಮುಂದೆ ಕಾಗೆ ಕಿರುಚುವುದನ್ನು ನೋಡದರೆ, ಧನವಂತರೂ ಆಗುತ್ತಾರೆ ಎನ್ನಲಾಗುತ್ತದೆ. ಅಂದರೆ ಮುಟ್ಟಿದ್ದೆಲ್ಲವೂ ಬಂಗಾರವಾಗುತ್ತದೆ ಎಂಬುದು ನಂಬಿಕೆ.

ಕಾಗೆಯಿಂದ ಕೇವಲ ಶುಭ ಶಕುನಗಳು ಮಾತ್ರವಲ್ಲದೇ, ಅಶುಭ ಶಕುನಗಳೂ ಸಂಭವಿಸುತ್ತವೆ ಎನ್ನಲಾಗುತ್ತದೆ. ಕಾಗೆ ತನ್ನ ಬಾಯಲ್ಲಿ ಏನಾದರೂ ವಸ್ತುವನ್ನು ಇಟ್ಟುಕೊಂಡು ಬಂದು ಮನುಷ್ಯನ ಮೇಲೆ ಹಾಕಿದರೆ ಅದು ಅಶುಭ ಸಂಕೇತ ಎಂದೇ ಭಾವಿಸಲಾಗುತ್ತದೆ. ಕಾಗೆ ಮಾಂಸವನ್ನು ಬಾಯಲ್ಲಿಟ್ಟುಕೊಂಡು ಬಂದು ಮನುಷ್ಯನ ಮೇಲೆ ಹಾಕಿದರೆ ಆ ವ್ಯಕ್ತಿ ಅನಾರೋಗ್ಯಕ್ಕೆ ಗುರಿಯಾಗುತ್ತಾರೆ. ಅಷ್ಟೇ ಅಲ್ಲದೇ, ಕಾಗೆಗಳ ಗುಂಪೊಂದು ಕೂತು ಕೂಗುತ್ತಿದ್ದರೆ, ಆ ಸ್ಥಳದ ಯಜಮಾನ ಅಥವಾ ಸುತ್ತಲಿನ ಜನರಿಗೆ ಏನೋ ಕಂಟಕ ಕಾದಿದೆ ಎಂಬ ಅರ್ಥವಿದೆ.

 

 

View this post on Instagram

 

Birds of the feather flock together. #crow #photographer #photography #naturephotography #nikoncooplixb500 #blackandwhite

A post shared by Ash (@raven.photos) on

 

(ಈ ಮೇಲೆರುವ ವಿಡಿಯೋ ನೋಡಿ) ಯಾವುದೇ ವ್ಯಕ್ತಿ ಮೇಲೆ ಕಾಗೆ ಬಂದು ಕೂತರೆ ಅಥವಾ ತಲೆ ಮೇಲೆ ಹಾರಿ ಹೋದರೆ, ಸಮಸ್ಯೆಗಳಲ್ಲಿ ಸಿಲುಕುತ್ತಾರೆ ಎಂಬ ಸಂಕೇತವನ್ನು ಸೂಚಿಸುತ್ತದೆ. ಕಾಗೆ ಏನಾದರೂ ರೆಕ್ಕೆ ಬಡಿಯುತ್ತಾ ವ್ಯಕ್ತಿಯ ಸುತ್ತಾ ಸುತ್ತುತ್ತಿದ್ದರೆ ಆ ವ್ಯಕ್ತಿ ಕೊನೆಯ ದಿನಗಳನ್ನು ಎಣಿಸುತ್ತಿದ್ದಾನೆ ಎಂದೇ ಹೇಳಲಾಗುತ್ತದೆ.

ಹೆಣ್ಣು ಮಕ್ಕಳ ತಲೆ ಮೇಲೆ ಅಥವಾ ಮಡಿಲಿಗೆ ಬಂದು ಕೂತರೆ ಅದು ಅವರಿಗೆ ಪತಿ ವಿಯೋಗವನ್ನು ಸೂಚಿಸುತ್ತದೆ. ಆಗ್ನೇಯ ದಿಕ್ಕಿನಿಂದ ಕಾಗೆ ಬರುವುದನ್ನು ನೋಡಿದರೆ ಅವರಿಗೆ ಧನಲಾಭವಾಗುತ್ತದೆ ಎನ್ನಲಾಗುತ್ತದೆ. ಹೀಗೆ ಕಾಗೆ ಮಾಡುವ ಕೆಲಸಗಳಿಗೆ ಮನುಷ್ಯನಿಗೆ ಆಗುವ ಲಾಭ-ನಷ್ಟವನ್ನು ಲೆಕ್ಕ ಹಾಕಲಾಗುತ್ತದೆ. ನಂಬಿಕೆ, ವಿಶ್ವಾಸ ಎಂಬುದು ಅವರವರ ಅಭಿಪ್ರಾಯಗಳ ಮೇಲೆ ಆಧರಿಸಿದೆ. ನಂಬುವುದು ಬಿಡುವುದು ಪ್ರತಿ ವ್ಯಕ್ತಿಯ ಮೇಲೆ ಅವಲಂಬಿಸಿದೆ.

 

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು. (ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here