ಮೈಸೂರಿನ ಕಾಲೇಜು ಹುಡುಗಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣು

0
6

ಬದುಕಿದ್ದಾಗ ನನ್ನನ್ನು ಲೈಕ್ ಮಾಡಲಿಲ್ಲ ನಾನು ಸಾಯುವ ವಿಡಿಯೋವನ್ನು ಆದರೂ ಲೈಕ್ ಮಾಡಿ ಶೇರ್ ಮಾಡಿ ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಮೈಸೂರಿನಲ್ಲಿ ನಡೆದಿದೆ. ಓದು ತಲೆಗೆ ಹತ್ತುತ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿದ್ದ ಮೈಸೂರಿನ ಬನ್ನಿಮಂಟಪದ ಕಾವೇರಿ ನಗರದ ನಿವಾಸಿ ಅಸ್ಮಿತಾ 18 ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೈಸೂರಿನ ಜಿಎಸ್ಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಮುಂಚೆ ವಿಡಿಯೋವನ್ನು ಮಾಡಿ ಶೇರ್ ಮಾಡಲು ವಿನಂತಿಸಿಕೊಂಡಿದ್ದಾರೆ.

ನಾನು ಎಷ್ಟು ಓದಬೇಕೆಂದು ಕೊಂಡರೂ ಓದು ನನ್ನ ತಲೆಗೆ ಹತ್ತುತ್ತಿಲ್ಲ ನಾನು ಸಿಂಗರ್ ಅಥವಾ ಲಾಯರ್ ಆಗಬೇಕೆಂದುಕೊಂಡೆ ಆದರೆ, ವಿಧಿ ನನ್ನ ಆಸೆಯನ್ನು ಪೂರೈಸಲಿಲ್ಲ. ನನಗೆ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣ ಕಾಲೇಜಿಗೂ ಕೂಡ ಸರಿಯಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ ನನಗೆ ಪರೀಕ್ಷೆಗೆ ಹಾಲ್ಟಿಕೆಟ್ ಕೂಡ ಸಿಕ್ಕಿಲ್ಲ. ನಾನು ಜೀವನದಲ್ಲಿ ಏನನ್ನೂ ಸಾಧಿಸಲಾಗಲಿಲ್ಲ. ನಾನು ಬದುಕಿದ್ದಾಗ ಅಂತಲೂ ಯಾರು ನನ್ನ ವಿಡಿಯೋ ಲೈಕ್ ಮಾಡಲಿಲ್ಲ.

ನಾನು ಸಾಯುವ ವಿಡಿಯೋ ನಾದರೂ ಎಲ್ಲರೂ ಲೈಕ್ ಮಾಡಿ ಶೇರ್ ಮಾಡಿ ಈ ಮೂಲಕ ಅಸ್ಮಿನ್ ಸತ್ತಳೆಂದು ಎಲ್ಲರಿಗೂ ಈ ವಿಡಿಯೋ ನೋಡಿ ತಿಳಿಯುತ್ತದೆ. ಎಂದು ಹೇಳಿದ್ದಾರೆ. ಈ ಕುರಿತು ಮೈಸೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here